Beauty of Nature: ಬಯಲುಸೀಮೆಯಲ್ಲಿ ದೂದ್ ಫಾಲ್ಸ್ ನೋಡಲು ಪ್ರವಾಸಿಗರ ದಂಡು..!
ಸಾಮಾನ್ಯವಾಗಿ ಜುಳುಜುಳು ಹರಿಯುವ ಝರಿಗಳಿಂದ ಹಿಡಿದು ಭೋರ್ಗರೆದು ಧುಮ್ಮಿಕ್ಕುವ ಜಲಪಾತಗಳು (Falls) ಮಲೆನಾಡ (Malenadu) ತಪ್ಪಲಿನಲ್ಲಿ ಕಾಣಸಿಗುತ್ತವೆ. ಆದರೆ ಇಂತಹದೇ ಅಪರೂಪದಲ್ಲಿ ಅಪರೂಪ ಎನ್ನುವಂತಹ ದೂದ್ ಫಾಲ್ಸ್ (Falls) ನಂತೆ ಕಾಣುವ ಜಲಪಾತವೊಂದು ಮಧುಗಿರಿ-ತುಮಕೂರು ರಸ್ತೆಯಲ್ಲಿ ಹುಟ್ಟಿಕೊಂಡಿದೆ.
ತುಮಕೂರು (ಡಿ. 08): ಸಾಮಾನ್ಯವಾಗಿ ಜುಳುಜುಳು ಹರಿಯುವ ಝರಿಗಳಿಂದ ಹಿಡಿದು ಭೋರ್ಗರೆದು ಧುಮ್ಮಿಕ್ಕುವ ಜಲಪಾತಗಳು (Falls) ಮಲೆನಾಡ (Malenadu) ತಪ್ಪಲಿನಲ್ಲಿ ಕಾಣಸಿಗುತ್ತವೆ. ಆದರೆ ಇಂತಹದೇ ಅಪರೂಪದಲ್ಲಿ ಅಪರೂಪ ಎನ್ನುವಂತಹ ದೂದ್ ಫಾಲ್ಸ್ (Falls) ನಂತೆ ಕಾಣುವ ಜಲಪಾತವೊಂದು ಮಧುಗಿರಿ-ತುಮಕೂರು ರಸ್ತೆಯಲ್ಲಿ ಹುಟ್ಟಿಕೊಂಡಿದೆ.
ಕಾರ್ಡಿಯಲ್ ಇಂಟರ್ ನ್ಯಾಷನಲ್ ಶಾಲೆಯ ರಸ್ತೆಯಲ್ಲಿ ಹೋದರೆ ಕಮ್ಮನಕೋಟೆ ನಂತರ ಕೆ.ಸಿ.ರೊಪ್ಪಕ್ಕೆ ಹೋಗುವ ರಸ್ತೆಯಲ್ಲಿ 300 ಮೀಟರ್ ಗುಡ್ಡದ ರಸ್ತೆ ಹತ್ತಿ ಇಳಿದರೆ ಸುಂದರ ಜಲಧಾರೆ ಕಣ್ಣಿಗೆ ಬೀಳಲಿದೆ. ಇಷ್ಟು ದಿನ ಜಲಧಾರೆಯ ತಾಣಗಳನ್ನು ಅರಸಿ ಇತರೆ ಭಾಗಗಳಿಗೆ ಹೋಗುತ್ತಿದ್ದ ಜನತೆ ಇಲ್ಲಿನ ಪ್ರಕೃತಿಯ ಸೊಬಗಿನಿಂದ ತುಂಬಿಕೊಂಡಿರುವ ಜಲಧಾರೆಯನ್ನು ಕಂಡು ಮೂಕ ವಿಸ್ಮಿತರಾಗಿದ್ದಾರೆ.
ಇನ್ನು ಕುಟುಂಬದೊಂದಿಗೆ ತೆರಳುವ ಜನತೆ ಮಧು ಫಾಲ್ಸ್ ಜಲಧಾರೆಯಲ್ಲಿ ಮಿಂದು ಹರ್ಷ ವ್ಯಕ್ತಪಡಿಸುತ್ತಿದ್ದು, ಸೆಲ್ಫಿಗಳನ್ನು (selfie) ತೆಗೆದು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಬಿಡುತ್ತಿದ್ದಾರೆ. ಇದು ಮಕ್ಕಳ ನೆಚ್ಚಿನ ತಾಣವಾಗಿದ್ದು, ಇಲ್ಲಿನ ಪ್ರದೇಶ ಪ್ರಕೃತಿಯ ಸೊಬಗಿನಿಂದ ತುಂಬಿಕೊಂಡಿದೆ, ಸುತ್ತಲು ಬಂಡೆಕಲ್ಲುಗಳ ಬೆಟ್ಟಗುಡ್ಡಗಳು, ಸಣ್ಣ ಸಣ್ಣ ಕುರುಚಲು ಗಿಡಗಳಿಂದ ಕೂಡಿರುವ ಪ್ರಕೃತಿ ರಮಣೀಯವಾಗಿದೆ.