ಹೊಸ ರೂಪದಲ್ಲಿ ಕಣ್ಮನ ಸೆಳೆಯುತ್ತಿದೆ ರಾಜಾಸೀಟ್, ವ್ಯೂ ಪಾಯಿಂಟ್ ಅಂತೂ ಸೂಪರ್..!
. ಕರ್ನಾಟಕದ ವಿಚಾರಕ್ಕೆ ಬಂದ್ರೆ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಿರುವ ಜಿಲ್ಲೆಗಳ ಸಾಲಿನಲ್ಲಿ ಕೊಡಗು ಮುಂಚೂಣಿಯಲ್ಲಿದೆ. ಮಡಿಕೇರಿಗೆ ಬರುವ ಮಂದಿ ರಾಜಾಸೀಟ್‍ಗೆ ಭೇಟಿ ನೀಡದೆ ವಾಪಸ್ ಹೋಗೋದು ಬಹಳ ವಿರಳ.
ಮಡಿಕೇರಿ (ಸೆ. 27): ಇವತ್ತು ಪ್ರವಾಸೋದ್ಯಮ ದಿನ. ನಮ್ಮ ದೇಶದಲ್ಲಿ ವಿವಿಧ ಉದ್ಯಮಗಳ ರೀತಿ ಪ್ರವಾಸೋದ್ಯಮ ಕೂಡಾ ತನ್ನ ಛಾಪು ಮೂಡಿಸಿದೆ. ಕರ್ನಾಟಕದ ವಿಚಾರಕ್ಕೆ ಬಂದ್ರೆ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಿರುವ ಜಿಲ್ಲೆಗಳ ಸಾಲಿನಲ್ಲಿ ಕೊಡಗು ಮುಂಚೂಣಿಯಲ್ಲಿದೆ.
ಕಾವೇರಿ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ಆರಂಭ
ಮಡಿಕೇರಿಗೆ ಬರುವ ಮಂದಿ ರಾಜಾಸೀಟ್‍ಗೆ ಭೇಟಿ ನೀಡದೆ ವಾಪಸ್ ಹೋಗೋದು ಬಹಳ ವಿರಳ. ಅರಸರ ಆಳ್ವಿಕೆಯ ಹಿನ್ನೆಲೆಯುಳ್ಳ ಈ ತಾಣ ಹಲವು ರೀತಿಯಲ್ಲಿ ತನ್ನ ರೂಪ ಬದಲಿಸುತ್ತಾ ಬಂದಿದೆ. ಅಂದ್ರೆ ಜನಾಕರ್ಷಣೆಯ ನಿಟ್ಟಿನಲ್ಲಿ ಅಗತ್ಯಕ್ಕೆ ತಕ್ಕನಾಗಿ ಅಭಿವೃದ್ಧಿ ಮಾಡುತ್ತಾ ಬರಲಾಗಿದೆ. ಇದೀಗ ದೊಡ್ಡ ರೀತಿಯ ಬದಲಾವಣೆಗೆ ರಾಜಾಸೀಟ್ ಸಜ್ಜಾಗಿದೆ.
ರಾಜಾಸೀಟ್‍ನ ಎಡಬದಿಯಲ್ಲಿದ್ದ ಜಾಗವನ್ನು ಬಳಸಿಕೊಂಡು ಉದ್ಯಾನ ವಿಸ್ತರಣೆ ಮಾಡಲಾಗುತ್ತಿದೆ. ಇನ್ಮುಂದೆ ಮಡಿಕೇರಿಗೆ ಯಾರಾದ್ರು ಟೂರ್ ಬರೋದಿದ್ರೆ ಹೊಸ ರಾಜಾಸೀಟ್ ನಿಮ್ಮನ್ನ ಆಕರ್ಷಿಸುತ್ತೆ. ಇಲ್ಲಿನ ಸೌಂದರ್ಯವನ್ನು ಮನಸಾರೆ ಆಸ್ವಾದಿಸಿ. ಆದ್ರೆ ಇಲ್ಲಿನ ಸೌಂದರ್ಯಕ್ಕೆ ಧಕ್ಕೆಯಾಗದ ಹಾಗೆ ವರ್ತಿಸೋದನ್ನ ಮರೀಬೇಡಿ.