Asianet Suvarna News Asianet Suvarna News

ಕಾವೇರಿ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ಆರಂಭ

ಕೋವಿಡ್ ಹಿನ್ನೆಲೆ ಸ್ಥಗಿತವಾಗಿದ್ದ ರ‍್ಯಾಫ್ಟಿಂಗ್ ಚಟುವಟಿಕೆ ಆರಂಭವಾಗಿದೆ. ಕುಶಾಲನಗರ ತಾಲೂಕಿನ ದುಬಾರೆಯಲ್ಲಿ ಒಂದು ಕಿ.ಮೀವರೆಗೆ ಜಲಕ್ರೀಡೆಗೆ ಅವಕಾಶ ನೀಡಲಾಗಿದೆ. ರ‍್ಯಾಫ್ಟಿಂಗ್‌ನಲ್ಲಿ ಪಾಲ್ಗೊಂಡು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. 

Sep 27, 2021, 3:56 PM IST

ಕೊಡಗು (ಸೆ. 27): ಕೋವಿಡ್ ಹಿನ್ನೆಲೆ ಸ್ಥಗಿತವಾಗಿದ್ದ ರ‍್ಯಾಫ್ಟಿಂಗ್ ಚಟುವಟಿಕೆ ಆರಂಭವಾಗಿದೆ. ಕುಶಾಲನಗರ ತಾಲೂಕಿನ ದುಬಾರೆಯಲ್ಲಿ ಒಂದು ಕಿ.ಮೀವರೆಗೆ ಜಲಕ್ರೀಡೆಗೆ ಅವಕಾಶ ನೀಡಲಾಗಿದೆ. ರ‍್ಯಾಫ್ಟಿಂಗ್‌ನಲ್ಲಿ ಪಾಲ್ಗೊಂಡು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. 

ಹೊಸ ರೂಪದಲ್ಲಿ ಕಣ್ಮನ ಸೆಳೆಯುತ್ತಿದೆ ರಾಜಾಸೀಟ್, ವ್ಯೂ ಪಾಯಿಂಟ್ ಅಂತೂ ಸೂಪರ್..!

ಕೋವಿಡ್‌ನಿಂದ ಜಲಕ್ರೀಡೆಗೆ ನಿರ್ಬಂಧ ವಿಧಿಸಲಾಗಿತ್ತು. ಬೇರೆಲ್ಲಾ ಚಟುವಟಿಕೆಗಳಿಗೆ ಸರ್ಕಾರ ಅನುಮತಿ ನೀಡಿದ್ದರೂ ರ್ಯಾಫ್ಟಿಂಗ್‌ಗೆ ಅವಕಾಶ ನೀಡಿರಲಿಲ್ಲ. ವ್ಯವಹಾರವಿಲ್ಲದೇ ನಾವು ಸಂಕಷ್ಟದಲ್ಲಿದ್ದೇವೆ. ಜಲಕ್ರೀಡೆಗೆ ಅವಕಾಶ ಕೊಡಿ ಎಂದು ಅಸೋಸಿಯೇಷನ್ ಮನವಿ ಸಲ್ಲಿಸಿತ್ತು. ಅದರಂತೆ ರ್ಯಾಫ್ಟಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ.