ಆಕಾಶಕ್ಕೆ ಕಣ್ಣು ಹೊಡೆಯುವ ಬುರ್ಜ್ ಖಲೀಫಾ: ಈ ಗಗನಚುಂಬಿಯಲ್ಲಿ ಅಡಗಿದೆ ರಹಸ್ಯ

ದುಬೈ ಎಂದಾಕ್ಷಣ ಬುರ್ಜ್ ಖಲೀಫಾ ಥಟ್ಟನೆ ನೆನಪಾಗುತ್ತದೆ. ಇದು ದುಬೈನ ಅತ್ಯಾಕರ್ಷಕವಾದ ಪ್ರವಾಸಿ ತಾಣವಾಗಿದ್ದು, ವಿಶ್ವದ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆ ಗಳಿಸಿದೆ. ಇನ್ನು ಬುರ್ಜ್ ಖಲೀಫಾ ಕಟ್ಟಡವು ಅನೇಕ ರೋಚಕ ರಹಸ್ಯಗಳನ್ನು ಹೊಂದಿದೆ.

First Published Oct 15, 2022, 5:03 PM IST | Last Updated Oct 15, 2022, 5:03 PM IST

ಬುರ್ಜ್ ಖಲೀಫಾ ಇದೊಂದು ಗಗನಚುಂಬಿ ಕಟ್ಟಡವಾಗಿದ್ದು, ಸುಮಾರು 2,722 ಅಡಿಗಳಷ್ಟು ಎತ್ತರ ಹೊಂದಿದೆ ಎನ್ನಲಾಗುತ್ತದೆ. ಇದರಲ್ಲಿ ಸುಮಾರು 160 ಕ್ಕೂ ಹೆಚ್ಚು ಮಹಡಿಗಳು ಇದ್ದು, ರಾತ್ರಿಯ ಸಮಯದಲ್ಲಿ ಬುರ್ಜ್ ಖಲೀಫಾದ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ. ಬುರ್ಜ್ ಖಲೀಫಾ ಕಟ್ಟಡಕ್ಕೆ ವಿಶೇಷ ಗ್ಲಾಸ್ ಬಳಸಲಾಗಿದೆ. ಇದು ಮರಳುಗಾಡು ಪ್ರದೇಶದಲ್ಲಿ ಅರಳಿ ನಿಂತಿರುವ ಸ್ವರ್ಗದಂತಿದೆ.

ಉಚಿತವಾಗಿ 5 ಲಕ್ಷ ಏರ್ ಟಿಕೆಟ್ ನೀಡ್ತಿದೆಯಂತೆ ಹಾಂಗ್ ಕಾಂಗ್ ಸರ್ಕಾರ!