ಕರ್ನಾಟಕದ 7 ಅದ್ಭುತಗಳು ಅಭಿಯಾನಕ್ಕೆ ನಟ ರಮೇಶ್‌ ಅರವಿಂದ್ ಮೆಚ್ಚುಗೆ

ಕರ್ನಾಟಕದ ಏಳು ಅದ್ಭುತಗಳು ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ನಟ ರಮೇಶ್ ಅರವಿಂದ್ ಕರ್ನಾಟಕದ ಏಳು ಅದ್ಭುತಗಳು ಅಭಿಯಾನಕ್ಕೆ ರಾಯಭಾರಿಯಾಗಿದ್ದು, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 

First Published May 4, 2022, 5:48 PM IST | Last Updated May 4, 2022, 5:51 PM IST

ಕರ್ನಾಟಕದ ಏಳು ಅದ್ಭುತಗಳು (Seven Wonders Campaign)  ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ   (Basavaraj Bommai) ಚಾಲನೆ ನೀಡಿದ್ದಾರೆ. ಕನ್ನಡ ಪ್ರಭ, ಏಷ್ಯಾನೆಟ್ ನ್ಯೂಸ್, ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಅಭಿಯಾನ ಆರಂಭಿಸಿದೆ. ಸಿಎಂ ಬೊಮ್ಮಾಯಿ ಅಭಿಯಾನದ ಲೋಗೋ, ವೆಬ್‌ಸೈಟ್‌ ಅನಾವರಣ ಮಾಡಿದರು. ಖ್ಯಾತ ನಟ ರಮೇಶ್ ಅರವಿಂದ್ (Ramesh Aravind) ಕರ್ನಾಟಕದ ಏಳು ಅದ್ಭುತಗಳು ಅಭಿಯಾನಕ್ಕೆ ರಾಯಭಾರಿಯಾಗಿದ್ದಾರೆ. 

ಕರ್ನಾಟಕದ ಏಳು ಅದ್ಭುತಗಳು ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಏಷ್ಯಾನೆಟ್ ನ್ಯೂಸ್‌ ನೆಟ್‌ವರ್ಕ್ ಛೇರ್ಮನ್ ರಾಜೇಶ್‌ ಕಾಲ್ರಾ, ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ,  ನಟ ರಮೇಶ್ ಅರವಿಂದ್, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇನ್ನು ಈ ಏಳು ಅದ್ಭುತಗಳ ಅಭಿಯಾನಕ್ಕೆ ನಟ ರಮೇಶ್ ಅರವಿಂದ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಏಷ್ಯಾನೆಟ್ ನ್ಯೂಸ್‌ ಮತ್ತು ಕನ್ನಡ ಪ್ರಭ ನ್ಯೂಸ್ ಉತ್ತಮ ಕೆಲಸವನ್ನು ಮಾಡುತ್ತಿದೆ. ನಿಮ್ಮ ಸುತ್ತಮುತ್ತಲಿರುವ ಅದ್ಭುತಗಳನ್ನು ಪತ್ತೆ ಹಚ್ಚಿ, ಅದ್ಭುತ ತಾಣಗಳ ಬಗ್ಗೆ ನಮಗೆ ಮಾಹಿತಿಯನ್ನು ನೀಡಬೇಕು. ಪರಿಣಿತರ ತಂಡ ಏಳು ಅದ್ಭುತಗಳನ್ನು ಅಂತಿಮವಾಗಿ ಆಯ್ಕೆ ಮಾಡಲಿದೆ ಎಂದು ರಮೇಶ್ ಅರವಿಂದ್ ಹೇಳಿದರು.