Asianet Suvarna News Asianet Suvarna News

ಇದು ಸ್ಮಾರ್ಟ್‌ ಸೂಟ್‌ಕೇಸ್ ಕಾಲ! ನಿಮಗಿಲ್ಲ ಎಳೆಯುವ ಕೆಲಸ!

ತಂತ್ರಜ್ಞಾನ ಕೇವಲ ಕಷ್ಟಕರ ಕೆಲಸವನ್ನು ಸುಲಭ ಮಾಡೋದಷ್ಟೇ ಅಲ್ಲ, ನಮಗೆ ಕೆಲವು ಲಕ್ಸುರಿಗಳನ್ನು ಒದಗಿಸುತ್ತದೆ.  ಇವುಗಳ ಸಾಲಿಗೆ ಹೊಸ ಸೇರ್ಪಡೆಯೆಂದು ಹೇಳಬಹುದಾದ ಸ್ಮಾರ್ಟ್ ಸೂಟ್‌ಕೇಸ್‌ಗಳೀಗ ಸದ್ದು ಮಾಡಲಾರಂಭಿಸಿವೆ.

ತಂತ್ರಜ್ಞಾನ ಕೇವಲ ಕಷ್ಟಕರ ಕೆಲಸವನ್ನು ಸುಲಭ ಮಾಡೋದಷ್ಟೇ ಅಲ್ಲ, ನಮಗೆ ಕೆಲವು ಲಕ್ಸುರಿಗಳನ್ನು ಒದಗಿಸುತ್ತದೆ.  ಇವುಗಳ ಸಾಲಿಗೆ ಹೊಸ ಸೇರ್ಪಡೆಯೆಂದು ಹೇಳಬಹುದಾದ ಸ್ಮಾರ್ಟ್ ಸೂಟ್‌ಕೇಸ್  ಗಳೀಗ ಸದ್ದು ಮಾಡಲಾರಂಭಿಸಿವೆ.

ಪೆಟ್ಟಿಗೆ ಹೊತ್ಕೊಂಡು ಹೋಗಬೇಕಾ? ಎಂಬ ಕಾಲವೊಂದಿತ್ತು. ಎಳೆದುಕೊಂಡು ಹೋಗುವ ಟ್ರಾಲಿ ಮಾದರಿಯ ಸೂಟ್‌ಕೇಸ್‌ಗಳು ಬಂದು ಆ ‘ಪೆಟ್ಟಿಗೆ’ಗಳಿಗೆ ಗುಡ್‌ಬೈ ಹೇಳಿವೆ. ಈಗ ಮಾರುಕಟ್ಟೆಗೆ ಬಂದಿರುವ ಸ್ಮಾರ್ಟ್ ಸೂಟ್‌ಕೇಸ್‌ಗಳನ್ನು ಎಳೆಯುವ ಅಗತ್ಯವೂ ಇಲ್ಲ! ಅವುಗಳೇ ನಿಮ್ಮನ್ನು ಫಾಲೋ ಮಾಡ್ತಾವೆ! ಭಾರತಕ್ಕೂ ಈ ಸೂಟ್‌ಕೇಸ್ ಕಾಲಿಟ್ಟಿದ್ದು, ಒಂದು ವಿಡಿಯೋ ವೈರಲ್ ಆಗಿದೆ.

ಹೌದು, ಬರೇ ಅಷ್ಟೇ ಅಲ್ಲ, ಈ ಸೂಟ್‌ಕೇಸ್‌ಗಳು ಬಯೋ ಮೆಟ್ರಿಕ್ ವ್ಯವಸ್ಥೆ ಹೊಂದಿದ್ದು ತೆರೆಯಲು ಫಿಂಗರ್‌ಪ್ರಿಂಟ್ ಬೇಕು. ಲ್ಯಾಪ್‌ಟಾಪ್/ ಮೊಬೈಲ್ ಕನೆಕ್ಟ್ ಮಾಡಲು USB ಪೋರ್ಟ್‌ ಕೂಡಾ ಇದೆ. ಬ್ಯಾಟರಿ ಚಾರ್ಜ್ ಮಟ್ಟ ತಿಳಿಸುವ LED ಇಂಡಿಕೇಟರ್‌ಗಳೂ ಇವೆ. 

ಸ್ಮಾರ್ಟ್‌ವಾಚ್‌ನಿಂದ ಕಂಟ್ರೋಲ್ ಆಗೋ ಈ ಸೂಟ್‌ಕೇಸ್‌ಗಳು ನಿಮ್ಮನ್ನು ಫಾಲೋ ಮಾಡ್ತಾವೆ. ಹಿಂದಿನಿಂದ ಯಾರಾದ್ರೂ ಎತ್ಕೊಂಡು ಹೋಗ್ಬಿಟ್ರೆ...! ಎಂಬ ಚಿಂತೆಯೇ? ಅದಕ್ಕೂ ಪರಿಹಾರವಿದೆ ಬಿಡಿ. ನಿಮ್ಮಿಂದ ಸಂಪರ್ಕ ಕಳೆದುಕೊಂಡ ಕೂಡ್ಲೆ ನಿಮ್ಮ ವಾಚ್ ಜೋರು ಜೋರಾಗಿ ವೈಬ್ರೇಟ್ ಆಗುತ್ತೆ. ಅಂದ ಹಾಗೆ ಅದರ ಬೆಲೆ, ಸುಮಾರು 65 ಸಾವಿರ ರೂಪಾಯಿ ಮಾತ್ರವಂತೆ. 

Video Top Stories