Redmi 7A, Vivo Z1 Pro ಮಾರಾಟ ಶುರು! ಹೊಸ ಫೋನ್ ಹೇಗಿದೆ ಗುರು?
Redmi 7A ಮಾರಾಟ ಇಂದಿನಿಂದ ಆರಂಭವಾಗಿದೆ. 5.45 ಇಂಚು HD+ ಡಿಸ್ಪ್ಲೇ, ಒಕ್ಟಾಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 439 ಚಿಪ್ ಸೆಟ್, 3GB RAM- 32GB ಸ್ಟೋರೆಜ್, AI ಫೇಸ್ ಅನ್‌ಲಾಕ್, 12 ಮೆಗಾಪಿಕ್ಸೆಲ್ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ, ಮತ್ತು 4000 mAh ಬ್ಯಾಟರಿಯನ್ನು ಇದು ಹೊಂದಿದೆ.
Redmi 7A ಮಾರಾಟ ಇಂದಿನಿಂದ ಆರಂಭವಾಗಿದೆ. 5.45 ಇಂಚು HD+ ಡಿಸ್ಪ್ಲೇ, ಒಕ್ಟಾಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 439 ಚಿಪ್ ಸೆಟ್, 3GB RAM- 32GB ಸ್ಟೋರೆಜ್, AI ಫೇಸ್ ಅನ್‌ಲಾಕ್, 12 ಮೆಗಾಪಿಕ್ಸೆಲ್ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ, ಮತ್ತು 4000 mAh ಬ್ಯಾಟರಿಯನ್ನು ಇದು ಹೊಂದಿದೆ. ಭಾರತದಲ್ಲಿ ಬೆಲೆ ₹5999 ಮಾತ್ರ!
ಭಾರತದಲ್ಲಿಂದು Vivo Z1 Pro ಮಾರಾಟ ಆರಂಭವಾಗಿದೆ. ಹೋಲ್ ಪಂಚ್ ಸೆಲ್ಫೀ ಕ್ಯಾಮೆರಾ, ಟ್ರಿಪಲ್ ಕ್ಯಾಮೆರಾ ಸೆಟಪ್, ಫುಲ್ HD+ ಪರದೆ, 5000 mAh ಬ್ಯಾಟರಿಯನ್ನು ಈ ಫೋನ್ ಹೊಂದಿದೆ. ಭಾರತದಲ್ಲಿ ಇದರ ಬೆಲೆ 14990 ರೂಪಾಯಿಯಾಗಿದೆ.
ಜಪಾನಿನ Hayabusa2 ಯಶಸ್ವಿಯಾಗಿ ಕ್ಷುದ್ರಗ್ರಹದ ಮೇಲಿಳಿದಿದೆ. ಸೌರಮಂಡಲದ ಹುಟ್ಟು ಹಾಗೂ ಬೆಳವಣಿಗೆ ಕುರಿತ ಅಧ್ಯಯನಕ್ಕೆ ಇದು ಸಹಕಾರಿಯಾಗಲಿದೆ. ಭೂಮಿಯಿಂದ 300 ಮಿಲಿಯನ್ ಕಿಲೋ ಮೀಟರ್ ದೂರವಿರುವ Ryugu ಕ್ಷುದ್ರಗ್ರಹದ ಮೇಲೆ Hayabusa2 ತಲುಪುತ್ತಿರುವುದು ಇದು ಎರಡನೇ ಬಾರಿಯಾಗಿದೆ.
ಮನೆಯಲ್ಲಿ ನಡೆಯುವ ಸಂಭಾಷಣೆಯನ್ನುಅಮೆಜಾನ್ ಅಲೆಕ್ಸಾ ರೆಕಾರ್ಡ್ ಮಾಡುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಗೂಗಲ್ ಹೋಮ್ ಜೊತೆ ನಡೆಸುವ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿ, ಆಡಿಯೋ ಕ್ಲಿಪ್‌ಗಳನ್ನು ಪರಿಶೀಲನೆಗಾಗಿ ಸಂಬಂಧಪಟ್ಟವರಿಗೆ ಕಳುಹಿಸುವುದಾಗಿ ಬೆಲ್ಜಿಯನ್ ಬ್ರಾಡ್‌ಕಾಸ್ಟರ್ ಹೇಳಿದೆ.
ಏಜೆಂಟ್ ಸ್ಮಿತ್ ಎಂಬ ಮಾಲ್‌ವೇರ್ ಭಾರತದ ಸುಮಾರು 15 ಮಿಲಿಯನ್ ಸ್ಮಾರ್ಟ್‌ಫೋನ್ ಸೇರಿದಂತೆ ಜಗತ್ತಿನಾದ್ಯಂತ 25 ಮಿಲಿಯನ್ ಮೊಬೈಲ್‌ಗಳಿಗೆ ದಾಳಿ ಮಾಡಿದೆ. ಗೂಗಲ್‌ಗೆ ಸಂಬಂಧಿಸಿದ ಅಪ್ಲಿಕೇಶನ್‌ನ ಸೋಗಿನಲ್ಲಿ ಮೊಬೈಲ್ ಒಳಗಡೆ ನುಸುಳುವ ಈ ಏಜೆಂಟ್ ಸ್ಮಿತ್ ಇತರೆಲ್ಲಾ ಅಪ್ಲಿಕೇಶನ್‌ಗಳನ್ನು ಹಾಳು ಮಾಡುತ್ತಿದೆ.