ರಾಜ್ಯದ ಕೆಲ ರಾಜಕಾರಣಿಗಳು ಜೈಲು ಸೇರ್ತಾರೆ: ಸ್ಫೋಟಕ ಭವಿಷ್ಯ ನುಡಿದ ಯಶ್ವಂತ ಗುರೂಜಿ..!

ತುಮಕೂರಿನ ಗುರೂಜಿಯೊಬ್ಬರು ನುಡಿದ ಸ್ಫೋಟಕ ಭವಿಷ್ಯವಾಣಿ ರಾಜ್ಯರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಯಾರು ಆ ಸ್ವಾಮಿಜಿ.. ಅವರು ಹೇಳಿದ ಭವಿಷ್ಯವಾಣಿ ಏನಾದ್ರೂ ನಿಜವಾದ್ರೆ ರಾಜ್ಯರಾಜಕಾರಣದಲ್ಲಿ ಅಲ್ಲೊಲ್ಲ ಕಲ್ಲೊಲ್ಲವಾಗಲಿದೆ.
 

First Published Oct 10, 2023, 11:21 AM IST | Last Updated Oct 10, 2023, 11:21 AM IST

ಈ ಬಾರಿಯ ಮಹಾಲಯ ಅಮವಾಸ್ಯೆಯ ಸೂರ್ಯ ಗ್ರಹಣದ ಪರಿಣಾಮ, ರಾಜ್ಯದ ಕೆಲ ರಾಜಕಾರಣಿಗಳು(Politicians) ಜೈಲು ಸೇರ್ತಾರಂತೆ. ಗುರೂಜಿ ನುಡಿದ ಭವಿಷ್ಯ(Prediction) ವಾಣಿ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಡಾ. ಯಶ್ವಂತ ಗುರೂಜಿ(Yashwant Guruji) ತುಮಕೂರಿನ‌ ನೋಣವಿನಕೆರೆ ರಂಗಾಪುರ ಮೂಲದ ಕಾಲಜ್ಞಾನಿ. ಅಷ್ಟಕ್ಕೂ ಇವರು ಅಂತಿಂಥ ಗುರೂಜಿ ಅಲ್ಲ. ಚುನಾವಣೆಗೂ ಮೊದಲು ಕಾಂಗ್ರೆಸ್ ಸರ್ಕಾರ ಪೂರ್ಣ ಬಹುಮತ ಬರುತ್ತೆ ಎಂದು ಭವಿಷ್ಯ ನುಡಿದಿದ್ರು. ಅದರಂತೆ ಕಾಂಗ್ರೆಸ್(COngress) ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ‌ ಹಿಡಿಯುತ್ತಲೇ ಗುರೂಜಿ ಭವಿಷ್ಯ ವಾಣಿ ಕೂಡ ವೈರಲ್ ಆಗಿತ್ತು. ಇದೇ ಅಕ್ಟೋಬರ್ 14ರ ಮಹಾಲಯ ಅಮಾವಾಸ್ಯೆಯಂದು ಸಂಭವಿಸುವ  ಸೂರ್ಯಗ್ರಹಣದಿಂದ ಕೆಲ ರಾಶಿಗೆ ತೊಂದರೆಯಿದೆ. ಗ್ರಹಣದ ಎಫೆಕ್ಟ್ ಕೆಟ್ಟದ್ದು ಮಾತ್ರವಲ್ಲದೆ, ಇನ್ನು ಕೆಲ ರಾಜಕಾರಣಿಗಳಿಗೆ ಯೋಗ ಕೂಡ ಪ್ರಾಪ್ತಿಯಾಗಲಿದೆ.ಈ ಗ್ರಹಣ ಮೇಷ, ಕರ್ಕಾಟಕ, ವೃಶ್ಚಿಕ, ಮಕರ ರಾಶಿಯ ಮಂದಿಗೆ ಶುಭ ಫಲ ನೀಡಲಿದೆ. ಆದ್ರೆ ವೃಷಭ ರಾಶಿಯ ಕೃತಿಕ ನಕ್ಷತ್ರದ ರಾಜಕಾರಣಿಗಳು ಜೈಲು ಸೇರುವುದು ಖಚಿತ. ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಜೈಲು ಸೇರ್ತಾರೆ ಅಂತಾ ಎಚ್ಚರಿಸಿದ್ದೆ. ಚಂದ್ರಬಾಬು ನಾಯ್ಡು ಅವರ  ಜಾತಕ ವೃಷಭ ರಾಶಿ, ಕೃತಿಕ ನಕ್ಷತ್ರ ಆಗಿದೆ. ಅವರು ಜೈಲೊಗೆ ಹೋಗಿದ್ದಾರೆ. ಇದೀಗ ನಮ್ಮ ರಾಜ್ಯದಲ್ಲೂ ವೃಷಭ ರಾಶಿಯ ರಾಜಕಾರಣಿಗಳು ಜೈಲು  ಸೇರುವ ಸಾಧ್ಯತೆಯಿದೆ ಎಂದ ಗುರೂಜಿ ‌ ವೃಷಭ ರಾಶಿಯ ಮಂದಿ ದೈವದ ಮೊರೆ ಅಥವಾ ಶಾಂತಿ ಕರ್ಮಗಳನ್ನ ಮಾಡೋದು ಒಳಿತು ಎನ್ನುತ್ತಿದ್ದಾರೆ. ಎಚ್ಡಿಕೆ ಹೇಳಿಕೆ ಹಾಗೂ ಗುರೂಜಿ ಭವಿಷ್ಯವಾಣಿಯನ್ನು ಹೋಲಿಕೆ ಮಾಡಿ ಜನರು ಚರ್ಚೆ ನಡೆಸುತ್ತಿದ್ದಾರೆ. ಆದ್ರೆ ಮುಂದಿನ ಮಹಾಲಯ ಅಮಾವಸ್ಯೆ ನಂತರ ಏನಾಗಲಿದೆ ಅನ್ನೋದನ್ನ ಕಾಲವೇ ಉತ್ತರಿಸಲಿದೆ. 

ಇದನ್ನೂ ವೀಕ್ಷಿಸಿ:  ಶಾಲಾ ಸಮಯ ಬದಲಾವಣೆ ಇಲ್ಲ : ಒಕ್ಕೂಟ ಸಭೆಯ ವರದಿ ಇಂದು ಕೋರ್ಟ್‌ಗೆ ಸಲ್ಲಿಕೆ

Video Top Stories