ಶಾಲಾ ಸಮಯ ಬದಲಾವಣೆ ಇಲ್ಲ : ಒಕ್ಕೂಟ ಸಭೆಯ ವರದಿ ಇಂದು ಕೋರ್ಟ್‌ಗೆ ಸಲ್ಲಿಕೆ
ಸಿಲಿಕಾನ್ ಸಿಟಿಯ ಟ್ರಾಫಿಕ್ ಕಡಿವಾಣಕ್ಕೆ ಹೈಕೋರ್ಟ್ ಕೊಟ್ಟ ಸಲಹೆ ಬಗ್ಗೆ ಶಿಕ್ಷಣ ಇಲಾಖೆ ಸಭೆ ನಡೆಸಿದೆ. ಟ್ರಾಫಿಕ್ ಮೀಟಿಂಗ್‌ನಲ್ಲಿ ಏನೆಲ್ಲಾ ಚರ್ಚೆಯಾಯ್ತು? ಶಾಲಾ ಸಮಯ ಬದಲಾಗುತ್ತಾ ?
ಬೆಂಗಳೂರಿಗರಿಗೆ ಟ್ರಾಫಿಕ್ ಜಾಮ್ ದೊಡ್ಡ ಕಂಟಕ. ಅದ್ರಲ್ಲೂ ಪೀಕ್ ಅವರ್ ಅಂದ್ರೆ, ಬೆಳಗ್ಗೆ ಮತ್ತು ಸಂಜೆ ರಸ್ತೆಗಳಲ್ಲಿ ವಾಹನ ಓಡಿಸೋದು ದೊಡ್ಡ ಸಾಹಸದ ಕೆಲಸ. ಇದೇ ಹೊತ್ತಲ್ಲಿ ಶಾಲಾ ವಾಹನಗಳ ಸಂಚಾರಿಸುತ್ತವೆ. ಹೀಗಾಗಿ ಟ್ರಾಫಿಕ್‌ಗೆ(Traffic) ಕೊಂಚ ಬ್ರೇಕ್ ಹಾಕೋದಕ್ಕೆ ಶಾಲೆಗಳ ಸಮಯ ಬದಲಾವಣೆ ಮಾಡಿದ್ರೆ ಸಾಧ್ಯವಾಗಬಹುದು ಎಂದು ಹೈಕೋರ್ಟ್ ಸಲಹೆ ನೀಡಿತ್ತು. ಕೋರ್ಟ್ ಸಲಹೆಯಂತೆ ಸಮಗ್ರ ಶಿಕ್ಷಣ ಇಲಾಖೆ ಮತ್ತು ಖಾಸಗಿ ಶಾಲೆಗಳ ಒಕ್ಕೂಟದ ಜತೆ ಟ್ರಾಫಿಕ್ ಇಲಾಖೆ ಅಧಿಕಾರಿಗಳು(Traffic department officials) ಸಭೆ ನಡೆಸಿದ್ರು. ಸಮಗ್ರ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ವಿಷಯಗಳನ್ನ ಚರ್ಚಿಸಲಾಯ್ತು.. ಶಾಲಾ ಮಕ್ಕಳ ಸಂಚಾರಕ್ಕೆ ಬಿಎಂಟಿಸಿ ಬಳಕೆ ಮಾಡುವಂತೆ ಸಲಹೆಗಳು ಬಂದಿವೆಯಂತೆ. ಇದರ ಜೊತೆಗೆ ಶಾಲೆಗಳ ಬಳಿ ಸಿಬ್ಬಂದಿ ನೇಮಿಸಿ, ಅವರಿಗೆ ಟ್ರಾಫಿಕ್ ಕಂಟ್ರೋಲ್ ಬಗ್ಗೆ ತರಬೇತಿ ನಡೆಸುವಂತೆ ಚಿಂತನೆ ನಡೆದಿವೆಯಂತೆ..ಶಾಲಾ ಸಮಯ ಬದಲಾವಣೆಯಿಂದ ಟ್ರಾಫಿಕ್ ಕಂಟ್ರೋಲ್ ಸಲಹೆಗಳ ಬಗ್ಗೆ ಇಂದು ಕೋರ್ಟ್ ಮುಂದೆ ವರದಿ ಸಲ್ಲಿಸೋದಾಗಿ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ತಿಳಿಸಿದ್ರು. ಇನ್ನು, ಸಭೆಯಲ್ಲಿ ಟ್ರಾಫಿಕ್ ಕಂಟ್ರೋಲ್ ಗೆ ಹಲವು ಸಲಹೆಗಳು ಬಂದಿವೆ. ಇವೆಲ್ಲದರ ಮಧ್ಯೆ ಶಾಲಾ ಸಮಯ ಬದಲಾವಣೆ ಬೇಡ ಅನ್ನೋ ಅಭಿಪ್ರಾಯ ವ್ಯಕ್ತವಾಗಿದಿಯಂತೆ. ಹೀಗಾಗಿ ಶಾಲಾ ಸಮಯ ಬದಲಾಗೋದು ಬಹುತೇಕ ಡೌಟ್ ಆಗಿದೆ.
ಇದನ್ನೂ ವೀಕ್ಷಿಸಿ: ದಾವಣಗೆರೆ ಕಾಂಗ್ರೆಸ್‌ನಲ್ಲಿ ಲೋಕಸಭೆ ಟಿಕೆಟ್ ಫೈಟ್: ಶಾಸಕರು, ಸಚಿವರ ಮಧ್ಯೆ ಕಾವೇರಿದ ಟಾಕ್‌ವಾರ್