
ಕೇರಳದಂತಹ ಘಟನೆ ಕರ್ನಾಟಕದಲ್ಲಿ ನಡೆಯದಿರಲಿ: ಸಿಂಎಗೆ ಸಂಸದ ರಾಜೀವ್ ಪತ್ರ
- ಇತ್ತೀಚೆಗೆ ಕೇರಳದಲ್ಲಿ ಸ್ಫೋಟಕ ತುಂಬಿದ್ದ ಹಣ್ಣು ತಿಂದು ಸತ್ತಿದ್ದ ಗರ್ಭಿಣಿ ಆನೆ
- ವನ್ಯಜೀವಿ ರಕ್ಷಣೆ ಆದ್ಯತೆಯಾಗಲಿ: ಸಂಸದ ರಾಜೀವ್ ಚಂದ್ರಶೇಖರ್ ಅಭಿಮತ
- ಕರ್ನಾಟಕ ಸಿಎಂ ಬಿ.ಎಸ್. ಯಡಿಯೂರಪ್ಪಗೆ ರಾಜ್ಯಸಭಾ ಸಂಸದರಿಂದ ಪತ್ರ
ಬೆಂಗಳೂರು (ಜೂ. 06): ಇತ್ತೀಚೆಗೆ ಕೇರಳದಲ್ಲಿ ಸ್ಫೋಟಕ ತುಂಬಿದ್ದ ಹಣ್ಣು ತಿಂದು ಗರ್ಭಿಣಿ ಆನೆ ಸತ್ತಿರುವ ಘಟನೆಯನ್ನು ಖಂಡಿಸಿರುವ ಸಂಸದ ರಾಜೀವ್ ಚಂದ್ರಶೇಖರ್, ವನ್ಯಜೀವಿ ಸಂರಕ್ಷಣೆ ಸರ್ಕಾರಗಳ ಆದ್ಯತೆಯಾಗಲಿ ಎಂದು ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ನೋಡಿ | ವನ್ಯಜೀವಿಗಳ ವಿರುದ್ಧ ಕ್ರೌರ್ಯ: ಕಾಯ್ದೆ ತಿದ್ದುಪಡಿ, ಕಠಿಣ ಶಿಕ್ಷೆಗೆ ಸಂಸದ ರಾಜೀವ್ ಆಗ್ರಹ...
ಕರ್ನಾಟಕ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಪತ್ರ ಬರೆದಿರುವ ರಾಜ್ಯಸಭಾ ಸಂಸದರು, ರಾಜ್ಯದಲ್ಲಿ ಅಂತಹ ಕ್ರೂರ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.