Asianet Suvarna News Asianet Suvarna News

ವನ್ಯಜೀವಿಗಳ ವಿರುದ್ಧ ಕ್ರೌರ್ಯ: ಕಾಯ್ದೆ ತಿದ್ದುಪಡಿ, ಕಠಿಣ ಶಿಕ್ಷೆಗೆ ಸಂಸದ ರಾಜೀವ್ ಆಗ್ರಹ

Jun 6, 2020, 6:15 PM IST

ಬೆಂಗಳೂರು (ಜೂ. 06): ವನ್ಯಜೀವಿಗಳ ವಿರುದ್ಧ ನಡೆಯುವ ಕ್ರೌರ್ಯಕ್ಕೆ ಕುರಿತಂತೆ, ಸಂಸದ ರಾಜೀವ್ ಚಂದ್ರಶೇಖರ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್‌ಗೆ ಪತ್ರ ಬರೆದಿರುವ ಸಂಸದ ರಾಜೀವ್, ಹಾಲಿ ಕಾಯ್ದೆಗೆ ತಿದ್ದುಪಡಿ ತಂದು ಕಠಿಣ ನಿಯಮಗಳನ್ನು ಜಾರಿಗೆ ತರುವಂತೆ ಮನವಿ ಮಾಡಿದ್ದಾರೆ.

ಇದನ್ನೂ ನೋಡಿ | ಚೀನಾ ಸೊಕ್ಕು ಮುರಿಯಲು ಮೋದಿ-ಟ್ರಂಪ್ 7+4 ಸೂತ್ರ; ಡ್ರ್ಯಾಗನ್‌ಗೆ ಶುರುವಾಗಿದೆ ಢವಢವ

ಇತ್ತೀಚೆಗೆ ಕೇರಳದಲ್ಲಿ ಸ್ಪೋಟಕ ತುಂಬಿದ್ದ ಹಣ್ಣು ತಿಂದು ಗರ್ಭಿಣಿ ಆನೆ ಸಾವಿಗೀಡಾಗಿದ್ದು, ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.