Asianet Suvarna News Asianet Suvarna News

Karnataka Winter Session 2021: ಅಧಿವೇಶನ ಮುಗಿಯುವವರೆಗೂ ಪ್ರತಿಭಟನೆ : ಲಕ್ಷ್ಮೀ ಹೆಬ್ಬಾಳ್ಕರ್

ರಾಜ್ಯ ಸರ್ಕಾರವು ಪ್ರಸಕ್ತ ಅಧಿವೇಶನದಲ್ಲಿ (Session)  ಮಂಡಿಸಲು ಹೊರಟಿರುವ ಮತಾಂತರ ನಿಷೇಧ ವಿಧೇಯಕವನ್ನು ವಿರೋಧಿಸಿ ಸದನದ ಒಳಗೂ ಹಾಗೂ ಹೊರಗೂ ತೀವ್ರ ಹೋರಾಟ ಹಮ್ಮಿಕೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದೆ.

ಬೆಂಗಳೂರು (ಡಿ. 16): ರಾಜ್ಯ ಸರ್ಕಾರವು ಪ್ರಸಕ್ತ ಅಧಿವೇಶನದಲ್ಲಿ (Session)  ಮಂಡಿಸಲು ಹೊರಟಿರುವ ಮತಾಂತರ ನಿಷೇಧ ವಿಧೇಯಕವನ್ನು ವಿರೋಧಿಸಿ ಸದನದ ಒಳಗೂ ಹಾಗೂ ಹೊರಗೂ ತೀವ್ರ ಹೋರಾಟ ಹಮ್ಮಿಕೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದೆ. . ಬೆಲೆ ಏರಿಕೆ (Price Hike) ನೆರೆ ಪರಿಹಾರದಲ್ಲಿನ (Flood Relief) ವೈಫಲ್ಯ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಅಧಿವೇಶನದುದ್ದಕ್ಕೂ ಪ್ರತಿನಿತ್ಯ ಪ್ರತಿಭಟನೆ ಹಮ್ಮಿಕೊಳ್ಳಲು ಕೂಡ ಸಭೆ ನಿರ್ಧರಿಸಿದೆ.

Belagavi Session: ಸರ್ಕಾರದ ವಿರುದ್ಧ ದಂಗಲ್, ಟ್ರ್ಯಾಕ್ಟರ್, ಎತ್ತಿನಗಾಡಿಯಲ್ಲಿ ಕಾಂಗ್ರೆಸ್ ರ್ಯಾಲಿ

' ಪ್ರತಿದಿನ ಒಂದೊಂದು ವಿಚಾರವನ್ನಿಟ್ಟುಕೊಂಡು ಅಧಿವೇಶನ ಮುಗಿಯುವವರೆಗೂ ಪ್ರತಿಭಟನೆ ನಡೆಸುತ್ತೇವೆ. ಬೆಲೆ ಏರಿಕೆ, 40 % ಕಮಿಷನ್, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲಿದ್ದೇವೆ' ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.