Belagavi Session: ಸರ್ಕಾರದ ವಿರುದ್ಧ ದಂಗಲ್, ಟ್ರ್ಯಾಕ್ಟರ್, ಎತ್ತಿನಗಾಡಿಯಲ್ಲಿ ಕಾಂಗ್ರೆಸ್ ರ್ಯಾಲಿ
ರಾಜ್ಯ ಸರ್ಕಾರವು ಪ್ರಸಕ್ತ ಅಧಿವೇಶನದಲ್ಲಿ (Assembly)ಮಂಡಿಸಲು ಹೊರಟಿರುವ ಮತಾಂತರ ನಿಷೇಧ ವಿಧೇಯಕವನ್ನು (Anti Conversion Bill) ವಿರೋಧಿಸಿ ಸದನದ ಒಳಗೂ ಹಾಗೂ ಹೊರಗೂ ತೀವ್ರ ಹೋರಾಟ ಹಮ್ಮಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.
ಬೆಂಗಳೂರು (ಡಿ. 16): ರಾಜ್ಯ ಸರ್ಕಾರವು ಪ್ರಸಕ್ತ ಅಧಿವೇಶನದಲ್ಲಿ (Assembly)ಮಂಡಿಸಲು ಹೊರಟಿರುವ ಮತಾಂತರ ನಿಷೇಧ ವಿಧೇಯಕವನ್ನು (Anti Conversion Bill) ವಿರೋಧಿಸಿ ಸದನದ ಒಳಗೂ ಹಾಗೂ ಹೊರಗೂ ತೀವ್ರ ಹೋರಾಟ ಹಮ್ಮಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.
Anti Conversion Bill: ಲವ್ ಜಿಹಾದ್‌ಗೆ ಬ್ರೇಕ್, ಮತಾಂತರಕ್ಕೆ ನಿಷೇಧ, ಸರ್ಕಾರದ ಮೆಗಾಪ್ಲ್ಯಾನ್.?
ಇನ್ನೊಂದೆಡೆ ಬೆಲೆ ಏರಿಕೆ, ನೆರೆ ಪರಿಹಾರದಲ್ಲಿನ ವೈಫಲ್ಯ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಅಧಿವೇಶನದುದ್ದಕ್ಕೂ ಪ್ರತಿನಿತ್ಯ ಪ್ರತಿಭಟನೆ ಹಮ್ಮಿಕೊಳ್ಳಲು ಕೂಡ ಸಭೆ ನಿರ್ಧರಿಸಿದೆ. ಲೆ ಏರಿಕೆ, ರಾಜ್ಯ ಸರ್ಕಾರದ ನೆರೆ ನಿರ್ವಹಣೆ ಸೇರಿದಂತೆ ವಿವಿಧ ವೈಫಲ್ಯಗಳ ವಿರುದ್ಧ ಪ್ರತಿಭಟಿಸಿ ಬೆಳಗಾವಿ ನಗರದಿಂದ ಸುವರ್ಣಸೌಧದವರೆಗೆ ಟ್ರಾಕ್ಟರ್, ಟ್ರಕ್, ಚಕ್ಕಡಿ ಮೂಲಕ ರಾರಯಲಿ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.