ಮಳೆ ಕೊರತೆ ಮಧ್ಯೆ ತಮಿಳುನಾಡಿಗೆ ನೀರು ರಿಲೀಸ್: ಸಿಟ್ಟಿಗೆದ್ದ ಕಾವೇರಿ ಕೊಳ್ಳದ ರೈತರಿಂದ ನೀರಿಗಿಳಿದು ಪ್ರೊಟೆಸ್ಟ್..!
ರಾಜ್ಯದ ಕಾವೇರಿ ಕಣಿವೆಯಲ್ಲಿ ನೀರು ಕೊರತೆ ಹೆಚ್ಚುತಿದ್ರೆ, ಇತ್ತ ಹೆಚ್ಚುವರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಹೆಚ್ಚುವರಿ ನೀರಿಗಾಗಿ ತಮಿಳುನಾಡು ಸರ್ಕಾರ ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ರೆ, ಸುಪ್ರೀಂ ಆದೇಶಕ್ಕೂ ಮುನ್ನವೇ ರಾಜ್ಯ ಸರ್ಕಾರ ತಮಿಳನಾಡಿಗೆ ಹರಿಸುವ ನೀರಿನ ಪ್ರಮಾಣ ಹೆಚ್ಚಿಸಿದೆ. ಹೀಗಾಗಿ ಸರ್ಕಾರದ ನಡೆ ಖಂಡಿಸಿ ರೈತರು ಪ್ರೊಟೆಸ್ಟ್ ನಡೆಸಿದ್ರು.
ತಮಿಳುನಾಡಿಗೆ ನೀರು ಹರಿಸುತ್ತಿರುವ ಹಿನ್ನೆಲೆ ನೀರಿಗಿಳಿದು ರೈತರು ಪ್ರತಿಭಟನೆ(Farmer protest) ನಡೆಸಿದರು. ಅಲ್ಲದೇ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಮೊದಲೇ ನೀರಿನ ಬರದಿಂದ ಕಂಗೆಟ್ಟ ಕರ್ನಾಟಕಕ್ಕೆ(Karnataka) ಮುಂಗಾರು ತಡವಾಗಿ ಎಂಟ್ರಿಯಾಗಿದೆ. ಆರಂಭದಲ್ಲೇನೋ ಒಂದಿಷ್ಟು ಮಳೆಯಾಯ್ತು. ಬಳಿಕ ಕೈಕೊಟ್ಟ ವರುಣ ರೈತರನ್ನು ಅತಂಕಕ್ಕೆ ದೂಡಿದ್ದಾನೆ. ಇನ್ನು ಮಳೆಯಿಲ್ಲದೇ ನದಿಗಳು ಕೂಡ ಸಂಪೂರ್ಣ ಭರ್ತಿಯಾಗಿಲ್ಲ. ಕಾವೇರಿ(Cauvery) ಕಣಿವೆ ಭಾಗದ ರೈತರು ಒಂದು ಬೆಳೆಗಾದ್ರೂ ನೀರು ಸಿಕ್ಕಿದ್ರೆ ಸಾಕಪ್ಪ ಎನ್ನುತ್ತಿರುವಾಗಲೇ ತಮಿಳುನಾಡು(Tamilnadu) ಸರ್ಕಾರ ಕಾವೇರಿ ನೀರಿಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಇನ್ನೊಂದು ದುರಂತ ಏನಂದ್ರೆ ಕೋರ್ಟ್ ಆದೇಶವೇ ಬಂದಿಲ್ಲ. ಆಗಲೇ ತಮಿಳುನಾಡಿಗೆ ಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ಇದು ರೈತರನ್ನು ರೊಚ್ಚಿಗೆಬ್ಬಿಸಿದೆ. ಇದನ್ನು ವಿರೋಧಿಸಿ ಕಾವೇರಿ ನದಿಗೆ ಇಳಿದು ರೈತರು ಪ್ರತಿಭಟನೆ ನಡೆಸಿದ್ರು. ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿ ನೀರಿನ ಮಟ್ಟ ಸಂಪೂರ್ಣವಾಗಿ ಕುಸಿದಿದೆ. ನಮ್ಮ ರೈತರನ್ನ ರಕ್ಷಣೆ ಮಾಡಿಕೊಳ್ಳಬೇಕು. ಪ್ರತಿನಿತ್ಯ 24 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಇದರ ಬೆನ್ನಲ್ಲೇ ಕೆಆರ್‌ಎಸ್ ಡ್ಯಾಂನಿಂದ ಮೆಟ್ಟೂರು ಡ್ಯಾಂಗೆ ಹರಿಸುತ್ತಿದ್ದ ನೀರಿನ ಪ್ರಮಾಣ ಹೆಚ್ಚಿಸಲಾಗಿದೆ.
ಇದನ್ನೂ ವೀಕ್ಷಿಸಿ: BPL ಕಾರ್ಡ್‌ದಾರರಿಗೆ ಮತ್ತೊಂದು ಶಾಕ್: ಸರ್ಕಾರದಿಂದ ಸರ್ವೆ ಆರಂಭ !