BPL ಕಾರ್ಡ್‌ದಾರರಿಗೆ ಮತ್ತೊಂದು ಶಾಕ್: ಸರ್ಕಾರದಿಂದ ಸರ್ವೆ ಆರಂಭ !

ಉಚಿತ ರೇಷನ್ ಪಡೆಯುತ್ತಿದ್ದ BPL ಕಾರ್ಡ್ ಫಲಾನುಭವಿಗಳಿಗೆ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಅರ್ಹತೆ ಇಲ್ಲದಿದ್ದರೂ BPL ಕಾರ್ಡ್ ಹೊಂದಿರುವವರ ಡೇಟಾ ಕಲೆಕ್ಟ್ ಮಾಡಲು ಆಹಾರ ಇಲಾಖೆ ಮುಂದಾಗಿದೆ. 

Share this Video
  • FB
  • Linkdin
  • Whatsapp

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಅನ್ನಭಾಗ್ಯ ಯೋಜನೆಯಡಿ(Annabhagya) 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಯ ಹಣವನ್ನ ಸರ್ಕಾರ ನೀಡುತ್ತಿದೆ. ಸರ್ಕಾರದ ಗ್ಯಾರಂಟಿ ಸ್ಕೀಮ್‌ನಿಂದಾಗಿ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಆದ್ರೆ ಸದ್ಯ ರಾಜ್ಯ ಸರ್ಕಾರ(state governmnet) ಅರ್ಹ ಫಲಾನುಭವಿಗಳನ್ನ ಗುರುತಿಸುವ ಕಾರ್ಯಕ್ಕೆ ಮುಂದಾಗಿದೆ. ಅರ್ಹತೆ ಇಲ್ಲದಿದ್ರೂ ಬಿಪಿಎಲ್ ಕಾರ್ಡ್(BPL Card) ಪಡೆದು ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿರುವವ ಮಾಹಿತಿಯನ್ನ ಆಹಾರ ಇಲಾಖೆ(food department) ಕಲೆಹಾಕ್ತಿದೆ. ಬಿಪಿಎಲ್ ಕಾರ್ಡ್ ಪಡೆದುಕೊಳ್ಳಬೇಕೆಂದ್ರೆ ಸರ್ಕಾರ 6 ಮಾನದಂಡಗಳನ್ನ ನಿಗದಿ ಮಾಡಿದೆ. ಹಾಗಾದ್ರೆ ಆ ಮಾನದಂಡಗಳೇನು ಅಂತಾ ನೋಡೋದಾದ್ರೆ. ಈಗಾಗಲೇ ಸಮೀಕ್ಷೆ ನಡೆಸಿ 35 ಸಾವಿರಕ್ಕೂ ಅಧಿಕ BPL ಕಾರ್ಡ್ ರದ್ದು ಮಾಡಲಾಗಿದೆ. ಜೊತೆಗೆ ಮಾನದಂಡ ಉಲ್ಲಂಘಿಸಿದವರಿಂದ ದಂಡವನ್ನೂ ವಸೂಲಿ ಮಾಡಲಾಗುತ್ತಿದೆ. ಸರ್ವೇ ನಡೆಸಿ ಅನಧಿಕೃತ BPL ಕಾರ್ಡ್ ಹೊಂದಿದವರಿಂದ ಅಧಿಕ ದಂಡ ವಸೂಲಿ ಮಾಡಲಾಗಿದೆ. ಇನ್ನು ಅರ್ಹತೆ ಇಲ್ಲದಿದ್ರು BPL ಕಾರ್ಡ್ ಪಡೆದವರು ಸ್ವಯಂ ಪ್ರೇರಿತವಾಗಿ ಕಾರ್ಡ್ ರದ್ದು ಮಾಡಿಸುತ್ತಿದ್ದು, ಇಲ್ಲಿಯವರೆಗೆ 45 ಸಾವಿರ ಕಾರ್ಡ್ ಗಳು ರದ್ದಾಗಿವೆ.ಸದ್ಯ ರಾಜ್ಯದಲ್ಲಿ 1 ಕೋಟಿ 28 ಲಕ್ಷ ಮಂದಿ BPL ಕಾರ್ಡ್ ಹೊಂದಿದ್ದು, ಅನ್ನಭಾಗ್ಯದ ಫಲಾನುಭವಿಗಳಾಗಿದ್ದಾರೆ. ಇದೀಗ ಸರ್ವೇ ಶುರುವಾಗಿರುವ ಹಿನ್ನೆಲೆ ರಾಜ್ಯದಲ್ಲಿ ಸುಮಾರು 35 ಲಕ್ಷಕ್ಕೂ ಹೆಚ್ಚು BPL ಕಾರ್ಡ್ ರದ್ದಾಗುವ ಸಾಧ್ಯತೆ ಇದೆ.

ಇದನ್ನೂ ವೀಕ್ಷಿಸಿ: ಕಮಿಷನ್ ಕೋಲಾಹಲದ ಮಧ್ಯೆ ಬಿಬಿಎಂಪಿ ಕಚೇರಿಗೆ ಬೆಂಕಿ: ಈ ದುರಂತಕ್ಕೆ ‘ಆ’ ಅಧಿಕಾರಿಯೇ ಕಾರಣನಾ..?

Related Video