ಭೀಮಾತೀರದಲ್ಲಿ ರಿಯಲ್ ಸಿಂಗಂ ಅಲೋಕ್ ಕುಮಾರ್!‌

ಕೊನೆಗೂ ಭೀಮಾತೀರದ ಪಾತಕ ಕೃತ್ಯಗಳಿಗೆ ಕೊನೆಗಾಣಿಸಲು ಸರ್ಕಾರ ತೀರ್ಮಾನಿಸಿದಂತಿದೆ.  ಎಡಿಜಿಪಿಯಾದ ಮೇಲೆ ಮೊದಲ ಬಾರಿಗೆ ಭೀಮಾತೀರಕ್ಕೆ ಭೇಟಿ ನೀಡಿದ ರಿಯಲ್‌ ಸಿಂಗಂ ಅಲೋಕ್‌ ಕುಮಾರ್‌, ಮಿಂಚಿನ ಸಂಚಾರ ಮೂಡಿಸಿದ್ದಾರೆ.
 

First Published Jul 21, 2022, 6:46 PM IST | Last Updated Jul 21, 2022, 6:48 PM IST

ವಿಜಯಪುರ (ಜುಲೈ 21):  ಅವೆರಡು ಭೀಮಾತೀರದ ನಟೋರಿಯಸ್‌ ಗ್ಯಾಂಗ್‌ಗಳು. ಒಂದು ಕಾಲದಲ್ಲಿ ಭೀಮಾತೀರದಲ್ಲಿ ರಕ್ತವನ್ನ ನೀರಂತೆ ಹರಿಸಿದ್ದ ಕುಟುಂಬಗಳು ಅವು. ಆ ಕುಟುಂಬಗಳ ನಡುವಿನ ದಶಕಗಳ ದ್ವೇಷಕ್ಕೆ ಬಿದ್ದ ಹೆಣಗಳಿಗೆ ಈ ವರೆಗು ಲೆಕ್ಕಾ ಸಿಕ್ಕಿಲ್ಲ. ಈ ಕುಟುಂಬಗಳ ಕ್ರೈಂ ಇತಿಹಾಸವನ್ನ ಕೆದಕಿದ್ರೆ ಸಿಗೋದು ಕೆಂಡದಂತ ದ್ವೇಷ, ದ್ವೇಷಕ್ಕಾಗಿ ಭೀಮೆಯನ್ನ ಕಂಪಗಾಗಿಸಿದ ರಕ್ತದ ಕೋಡಿಯ ಕರಾಳ ಕಥೆ..! ಸದ್ಯ ಎರಡು ಕುಟುಂಬಗಳ ನಡುವಿನ ಪಾರಂಪರಿಕ ದ್ವೇಷವನ್ನ ಶಮನಗೊಳಿಸಲು ಪೊಲೀಸ್‌ ಫೈರ್‌ ಬ್ರಾಂಡ್‌ ಎಂಟ್ರಿಯಾಗಿದೆ..! ಹೀಗೆ ಭೀಮತೀರಕ್ಕೆ ಕರ್ನಾಟಕದ ಸಿಂಗಂ ಅಲೋಕ್‌ ಕುಮಾರ್‌ ಎಂಟ್ರಿ ಕೊಟ್ಟು ಆ ಭಾಗದ ನಟೋರಿಯಸ್‌ಗಳಿಗೆ ಲಾಸ್ಟ್‌ ವಾರ್ನಿಂಗ್‌ ನೀಡಿದ್ದಾರೆ.

ಎಡಿಜಿಪಿ ಯಾದ ಮೇಲೆ ಮೊದಲ ಬಾರಿಗೆ ಭೀಮಾತೀರಕ್ಕೆ ಭೇಟಿ ನೀಡಿದ ಅಲೋಕ್‌ ಕುಮಾರ್‌ ಖದರ್‌ ಹೇಗಿತ್ತು ಅಂತಾ. ಒಂದೆ ಕಲ್ಲಿಗೆ ಎರಡು ಹಕ್ಕಿಗಳನ್ನ ಹೊಡೆಯೋದಕ್ಕೆ ಹೊರಟಿದ್ದಾರೆ ಅಲೋಕ್‌ ಕುಮಾರ್.‌ ಸಿಂಗಂ ಅಲೋಕ್ ಕುಮಾರ್ ಭೀಮಾತೀರಕ್ಕೆ ಎಂಟ್ರಿ ಕೊಟ್ರೋ 5 ದಶಕಗಳ ಕಾಲ ದ್ವೇಷ ಸಾದಿಸಿದ್ದ ಎರಡು ಕುಟುಂಬಗಳು ಒಂದೇ ಸ್ಟೇಜ್ ಮೇಲೆ ಬಂದುಬಿಟ್ಟಿದ್ವು. ಸಂಧಾನ ಸಭೆಯ ನೆಪದಲ್ಲಿ ಎರಡೂ ಫ್ಯಾಮಿಲಿಯವರನ್ನ ಕರೆಸಿ ಅಲೋಕ್ ಕುಮಾರ್ ಒಂದು ವಾರ್ನಿಂಗ್ ಕೊಟ್ರು. ನಿಮ್ಮವರು ಸೆರೆಂಡರ್ ಆಗಲಿಲ್ಲ ಅಂದ್ರೆ ಉತ್ತರಪ್ರದೇಶ ಮಾಡೆಲ್ ಭೀಮಾ ತೀರಕ್ಕೆ ತರಬೇಕಾಗುತ್ತೆ. ನಿಮ್ಮ ಆಸ್ತಿ ಜಪ್ತಿ ಮಾಡಬೇಕಾಗುತ್ತೆ ಅಂತ ವಾರ್ನ್ ಮಾಡಿದ್ರು. ಅಲೋಕ್ ಕುಮಾರ್ ಹೀಗೆ ಹೇಳೋದಕ್ಕೆ ಕಾರಣ ಎರಡೂ ಕುಟುಂಬಳು ಕಳೆದ 5 ದಶಕಗಳ ಕಾಲ ಭೀಮಾ ತೀರದಲ್ಲಿ ಮಾಡಿದ ಅವಾಂತರಗಳು.

Vijayapura: ಭೀಮಾ ತೀರದಲ್ಲಿ ಖಾಕಿ ಫೈರ್‌ ಬ್ರಾಂಡ್‌ ಅಲೋಕ್‌ ಕುಮಾರ್!

ಭೀಮಾತೀರದ ಈ ಇಬ್ಬರು ಮಾಸ್ಟರ್‌ ಮೈಂಡ್‌ ಸರೆಂಡರ್‌ ಆದ್ರೆ ಮಾತ್ರ ಭೀಮಾತೀರದಲ್ಲಿ ಹೊತ್ತಿಕೊಂಡಿರುವ ದ್ವೇಷದ ಜ್ವಾಲೆ ಆರೋದಕ್ಕೆ ಸಾಧ್ಯ.. ಈ ನಡುವೆ ಭೀಮಾತೀರದ ಈ ಕುಟುಂಬಗಳ ಕಥೆಯೇ ಒಂದಾದ್ರೆ, ಇವ್ರನ್ನ ಸಂಬಾಳಿಸಬೇಕಾದ ಚಡಚಣ ಠಾಣೆಯ ಪೊಲೀಸರ ಕಥೆಯೇ ಬೇರೆ.. ಎಡಿಜಿಪಿ ಅಲೋಕ್‌ ಕುಮಾರ್‌ ಎದುರೇ ಚಡಚಣ ಪೊಲೀಸರ ಮಾನ ಮರ್ಯಾದೆ ಮೂರುಕಾಸಿಗೆ ಹರಾಜಾಗಿದೆ.