Asianet Suvarna News Asianet Suvarna News

Vijayapura: ಭೀಮಾ ತೀರದಲ್ಲಿ ಖಾಕಿ ಫೈರ್‌ ಬ್ರಾಂಡ್‌ ಅಲೋಕ್‌ ಕುಮಾರ್!

* ಎಡಿಜಿಪಿ ಎದುರು ಚಡಚಣ ಪೊಲೀಸರ ಮಾನ-ಮರ್ಯಾದೆ ಹರಾಜು..!
* ಸಭೆಯಲ್ಲಿ ಸಿಪಿಐ, ಪಿಎಸೈ ವಿರುದ್ಧ ಸಾರ್ವಜನಿಕರ ದೂರುಗಳ ಸುರಿಮಳೆ..!
* ಚಡಚಣ-ಬೈರಗೊಂಡ ಬಣಗಳ ನಡುವೆ ಸಂಧಾನಕ್ಕೆ ADGP ಎಂಟ್ರಿ..!

Adgp Alok Kumar Visited Bhimateera Chadachana And Received The Peoples Report gvd
Author
Bangalore, First Published Jul 20, 2022, 2:42 PM IST

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಜು.20): ಖಾಕಿ ಫೈರ್‌ ಬ್ರಾಂಡ್‌ ಎಡಿಜಿಪಿ ಅಲೋಕ್‌ ಕುಮಾರ್‌ ಭೀಮಾತೀರಕ್ಕೆ ಏಂಟ್ರಿ ಕೊಟ್ಟಿದ್ದಾರೆ. ಸೊನ್ನ-ದೇವನಗಾಂವ ಬ್ರೀಡ್ಜ್‌ ಬಳಿ ಅವರನ್ನ ವಿಜಯಪುರ ಎಸ್ಪಿ ಆನಂದಕುಮಾರ್‌ ಬೊಕ್ಕೆ ನೀಡುವ ನೀಡುವ ಜಿಲ್ಲೆಗೆ ಬರಮಾಡಿಕೊಂಡರು. ಬಳಿಕ ದೇವಣಗಾಂವ ಗ್ರಾಮಸ್ಥರು, ಆಲಮೇಲ ಪಟ್ಟಣದ ನಿವಾಸಿಗಳು ಸನ್ಮಾನಿಸುವ ಮೂಲಕ ಜಿಲ್ಲೆಗೆ ಸ್ವಾಗತಿಸಿಕೊಂಡರು..

ಚಡಚಣ ಪಟ್ಟಣದಲ್ಲಿ ಸಾರ್ವಜನಿಕ ಸಭೆ: ಚಡಚಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಿದ ಎಡಿಜಿಪಿ ಅಲೋಕ್‌ ಕುಮಾರ್‌ ಸಾರ್ವಜನಿಕರಿಂದ ಬಂದ ದೂರುಗಳನ್ನ ಸ್ವೀಕರಿಸಿದರು. ಬಹಳಷ್ಟು ಜನರು ಅನೇಕ ಅಹವಾಲುಗಳನ್ನ ಹಿರಿಯ ಪೊಲೀಸ್‌ ಅಧಿಕಾರಿಗಳ ಮುಂದಿಟ್ಟರು. ಈ ವೇಳೆ ಸಭೆಗೆ ಆಗಮಿಸಿದ್ದ ಬಹುತೇಕ ಸಾರ್ವಜನಿಕರು ಚಡಚಣ ಪೊಲೀಸರ ವಿರುದ್ಧವೇ ಆರೋಪಗಳ ಸುರಿಮಳೆ ಗರೆದರು.

ಚಡಚಣ ಠಾಣೆ ಪೊಲೀಸರ ಮಾನ-ಮರ್ಯಾದೆ ಹರಾಜು: ಎಡಿಜಿಪಿ ಅಲೋಕ್‌ ಕುಮಾರ್‌ ಎದುರೆ ಚಡಚಣ ಪೊಲೀಸರ ಮಾಮ ಮರ್ಯಾದೆ ಹರಾಜಾಗಿದೆ. ಸೆರಗಿನಲ್ಲಿ ಬೆಂಕಿ ಕೆಂಡವನ್ನಿಟ್ಟುಕೊಂಡು ಬಂದಿದ್ದ ಅನೇಕರು ಚಡಚಣ ಪೊಲೀಸರ ವಿರುದ್ಧವೇ ಅನೇಕ ದೂರುಗಳನ್ನ ಎಡಿಜಿಪಿ ಅಲೋಕ್‌ ಕುಮಾರ್‌ ರಿಗೆ ನೀಡಿದರು. ಚಡಚಣ ಸಿಪಿಐ ಹಾಗೂ ಪಿಎಸೈ ಠಾಣೆಗೆ ದೂರು ತೆಗೆದುಕೊಂಡು ಬರುವ ಮಹಿಳೆಯರ ಜೊತೆಗೆ ಅಶ್ಲೀಲವಾಗಿ ಬೈದು ವ್ಯವಹರಿಸುತ್ತಾರೆ. ನೊಂದ ಮಹಿಳೆರಿಗೆ ಅಶ್ಲೀಲ ಬೈಗುಳಗಳಿಂದ ನಿಂದಿಸ್ತಾರೆ ಎನ್ನುವ ಬಗ್ಗೆ ಸ್ವತಃ ಮಹಿಳೆಯರೇ ಅಲೋಕ್‌ ಕುಮಾರರಿಗೆ ದೂರು ನೀಡಿದ್ರು.

ಬಸ್ ಅಪಘಾತ, ಅದೃಷ್ಟವಶಾತ್ ವನಶ್ರೀ‌ ಗಾಣಿಗ ಸಂಸ್ಥಾನಮಠದ ಶ್ರೀ ಪ್ರಾಣಾಪಾಯದಿಂದ ಪಾರು

ಚಡಚಣ ಸಿಪಿಐ ಮಾತನಾಡಿದ CD ನೀಡಿದ ಮಹಿಳೆ: ಗಲಾಟೆ ಪ್ರಕರಣವೊಂದರಲ್ಲಿ ದೂರುದಾರಳಾಗಿದ್ದ ತನ್ನ ಜೊತೆಗೆ ಚಡಚಣ ಠಾಣೆ ಸಿಪಿಐ ಕೀಳು ಬೈಗುಳಗಳಿಂದ ನಿಂದಿಸಿದ್ದಾರೆ ಎಂದು ಸ್ವತಃ ಮಹಿಳೆಯೇ ಗಂಭೀರ ಆರೋಪ ಮಾಡಿದ್ಳು. ವೇದಿಕೆ ಎದುರು ಮೈಕ್‌ ಹಿಡಿದುಕೊಂಡೆ ಸಿಪಿಐ ಬೈದ ಬೈಗಳನ್ನ ಬಿಡಿಬಿಡಿಯಾಗಿ ಹೇಳಿ ತನ್ನ ಆಕ್ರೋಶ ಹೊರಹಾಕಿದ್ಳು. ಅಲ್ಲದೆ ಸಿಪಿಐ ಮಾತನಾಡಿದ ಆಡಿಯೋ ಸಿಡಿಯನ್ನು ಮಹಿಳೆ ಎಡಿಜಿಪಿಯವರಿಗೆ ನೀಡಿ ಕ್ರಮಕ್ಕೆ ಆಗ್ರಹಿಸಿದಳು.

ಕಳ್ಳತನ ಕೇಸ್‌ ಭೇದಿಸೊದ್ರಲ್ಲು ಚಡಚಣ ಖಾಕಿ ಫೇಲ್: ಇನ್ನು ಕಳ್ಳತನ ನಡೆದ ಬಳಿಕ ಬರೀ ಎಫ್‌ಐಆರ್‌ ದಾಖಲಿಸಿಕೊಂಡು ಸುಮ್ಮನಾಗಿ ಬಿಡ್ತಾರೆ ಎನ್ನುವ ಬಗ್ಗೆಯು ಅನೇಕರು ಎಡಿಜಿಪಿ ಅವರ ಎದುರು ಚಡಚಣ ಪಿಎಸೈ ವಿರುದ್ಧ ದೂರು ನೀಡಿದ್ರು. ಚಿನ್ನಾಭರಣ ಕಳ್ಳತನ ಪ್ರಕರಣವೊಂದರಲ್ಲಿ ಕಳ್ಳತನದ ಬಗ್ಗೆ ದೂರು ನೀಡಿದ್ರು ದಾಖಲಿಸಿಕೊಳ್ಳದೆ ಸತಾಯಿಸಿದ್ದರು. ಬಳಿಕ ಹಿರಿಯ ಅಧಿಕಾರಿಗಳ ಬಳಿ ಓಡಾಡಿದ ಮೇಲೆ ನಾಮಕಾವಾಸ್ತೆ ಪ್ರಕರಣ ದಾಖಲಿಸಿ ಕೈಬಿಟ್ಟಿದ್ದಾರೆ ಎನ್ನುವ ದೂರನ್ನ ಸಾರ್ವಜನಿಕರೊಬ್ಬರು ಹೇಳಿಕೊಂಡರು. ಈ ವೇಳೆ ಪ್ರತಿಕ್ರಿಯಿಸಿದ ಎಡಿಜಿಪಿ ಕಳ್ಳತನ ಪ್ರಕರಣಗಳ ಬಗ್ಗೆ ಪೊಲೀಸ್‌ ಅಧಿಕಾರಿಗಳು ಗಮನ ಹರಿಸಬೇಕು ಅಂತಾ ತಾಕೀತು ಮಾಡಿದ್ರು.

ಚಡಚಣ ಸಿಪಿಐ, ಪಿಎಸೈ ಮೇಲೆ ಗರಂ ಆದ ಎಡಿಜಿಪಿ: ಅಲೋಕ್‌ ಕುಮಾರ್‌ ಅಂದ್ರೆ ಪೊಲೀಸ್‌ ಇಲಾಖೆಯ ಫೈರ್‌ ಬ್ರಾಂಡ್.‌ ಅವರ ಮುಂದೆ ಚಡಚಣ ಠಾಣೆಯ ಪಿಎಸೈ ಸಿಪಿಐ ಬಗ್ಗೆ ನೂರೆಂಟು ದೂರುಗಳ ಕೇಳಿ ಬಂದಿದ್ದರಿಂದ ಅಲೋಕ್‌ ಕುಮಾರ್‌ ಇಬ್ಬರು ಅಧಿಕಾರಿಗಳ ಮೇಲೆ ಗರಂ ಆದ್ರು. ವೇದಿಕೆ ಮೇಲೆ ಕುಂತಲ್ಲೆ ಇಬ್ಬರ ಕಡೆಗು ಕಣ್ಣು ಕೆಂಪಗಾಗಿಸಿಕೊಂಡು ನೋಡುತ್ತಿದ್ದ ದೃಶ್ಯಗಳು ಕಂಡು ಬಂದವು.

ಪೊಲೀಸರ ಜೇಬಲ್ಲೆ ಮಾವಾ: ಚಡಚಣ ಪಟ್ಟಣದಲ್ಲಿ ಎಗ್ಗಿಲ್ಲದೆ ಮಾವಾ, ಗುಟಕಾ ತಯಾರಿಕೆ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ವಿಸ್ತೃತವಾದ ವರದಿ ಪ್ರಸಾರವಾಗಿತ್ತು. ಇದೆ ಮಾವಾ ದಂಧೆಯ ಬಗ್ಗೆ ಹಲವಾರು ಆರೋಪಗಳು ಚಡಚಣ ಸಿಪಿಐ ಹಾಗೂ ಪಿಎಸೈ ಮೇಲೆ ಕೇಳಿ ಬಂದವು. ಈ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ಎಡಿಜಿಪಿ ಅವರ ಎದುರು ಮಾತನಾಡಿದ ಸಾರ್ವಜನಿಕರು ಹಾಗೂ ವಕೀಲರೊಬ್ಬರು, ಗುಟುಕಾ ತಯಾಕರು, ಮಾವಾ ದಂಧೆಕೋರರಿಂದ ಚಡಚಣ ಪೊಲೀಸರು ಹಪ್ತಾ ಪಡೆಯುವ ಬಗ್ಗೆ ಗಂಭೀರ ಆರೋಪ ಮಾಡಿದ್ರು. ಪೊಲೀಸರ ಜೇಬಲ್ಲೆ ಬೇಕಾದ್ರೆ ಮಾವಾ ಸಿಗ್ತವೇ ಚೆಕ್‌ ಮಾಡಿ ಎನ್ನುವ ಮೂಲಕ ಸ್ವತಃ ಹಿರಿಯ ಪೊಲೀಸ್‌ ಅಧಿಕಾರಿಗಳನ್ನೆ ಮುಜುಗರಕ್ಕೊಳಗಾಗುವ ಹಾಗೇ ಮಾಡಿದ್ರು.

ಚಡಚಣ ಪೊಲೀಸರಿಂದ ಹಿರಿಯ ಅಧಿಕಾರಿಗಳಿಗು ಮುಜುಗರ: ಚಡಚಣ ಪೊಲೀಸರ ಮೇಲೆ ನೂರೆಂಟು ಆರೋಪಗಳನ್ನ ಕೇಳಿದ ಅಲೋಕ್‌ ಕುಮಾರ್‌ ಅವರು ಗರಂ ಆದ್ರೆ, ಇತ್ತ ಹಿರಿಯ ಅಧಿಕಾರಿಗಳೆಲ್ಲ ಮುಜುಗರಕ್ಕೆ ಒಳಗಾಗುವಂತಾಯ್ತು. ಸಿಪಿಐ, ಪಿಎಸೈಗಳ ದುರ್ವರ್ತನೆ, ದೌರ್ಜನ್ಯ, ವಸೂಲಿ ದಂಧೆ, ಮಾವಾ ಮಾರಾಟಗಾರಿಂದ ಹಫ್ತಾ ವಿಚಾರಗಳು ವೇದಿಕೆ ಎದುರೆ ಚರ್ಚೆಯಾಗಿದ್ದರಿಂದ ಜನರು ಕೂಗು ಹಾಕಿದ್ರು. ಚಡಚಣ ಸಿಪಿಐ, ಪಿಎಸೈ ಮೇಲೆ ಬಂದ ಆರೋಪಗಳಿಂದ ವೇದಿಕೆ ಮೇಲಿದ್ದ ಬೆಳಗಾವಿ ಐಜಿಪಿ, ವಿಜಯಪುರ ಎಸ್ಪಿ, ಎಎಸ್ಪಿ, ಇಂಡಿ ಡಿವೈಎಸ್ಪಿಯವರು ಮುಜುಗರಕ್ಕೆ ಒಳಗಾಗುವಂತಾಯ್ತು.

ಚಡಚಣ-ಬೈರಗೊಂಡ ಕುಟುಂಬಸ್ಥರ ಜೊತೆ ಸಂಧಾನ ಸಭೆ: ಸಾರ್ವಜನಿಕ ಸಭೆ ಬಳಿಕ ಎಡಿಜಿಪಿ ಅಲೋಕ್‌ ಕುಮಾರ್ ಮಹತ್ವದ ಸಭೆಯೊಂದನ್ನ ನಡೆಸಿದರು. ಈ ಸಭೆಗೆ ಭೀಮಾತೀರದ ಬೈರಗೊಂಡ ಕುಟುಂಬ ಹಾಗೂ ಚಡಚಣ ಕುಟುಂಬಸ್ಥರನ್ನ ಕರೆದು ಸಂಧಾನ ಮಾಡಿಸುವ ಪ್ರಯತ್ನ ನಡೆಸಿದ್ರು. ಕಳೆದ 5 ದಶಕಗಳಿಂದ ಎರಡು ಕುಟುಂಬಗಳ ದ್ವೇಷದಿಂದ ನೂರಕ್ಕು ಅಧಿಕ ಹೆಣಗಳು ಬಿದ್ದಿದ್ದು. ಇದಕ್ಕೆ ತಿಲಾಂಜಲಿ ಹಾಡಲು ಎಡಿಜಿಪಿ ಪ್ರಯತ್ನಿಸಿದ್ರು. ಎರಡು ಕುಟುಂಬಗಳು ಶಾಂತಿ ಕಾಪಾಡಬೇಕು. ಹಳೆಯದನ್ನ ಮರೆತು ಒಂದಾಗಬೇಕು ಎಂದರು.

Russia-Ukraine War: MBBS ಮಾಡಿದ ವಿದ್ಯಾರ್ಥಿಗಳ ಬದುಕೆ ಅತಂತ್ರ!

ಮಾಸ್ಟರ್ ಮೈಂಡ್ ಮಲ್ಲಿಕಾಜೀ ಚಡಚಣ, ವಿಮಲಾಬಾಯಿ ಸರೆಂಡರ್‌ ಆಗಲಿ: ಭೀಮಾತೀರದ ಮಾಸ್ಟರ್‌ ಮೈಂಡ್‌ ಮಲ್ಲಿಕಾಜಿ, ಹಾಗೂ ಆತನ ಪತ್ನಿ ವಿಮಲಾಬಾಯಿ ಪರಾರಿಯಾಗಿದ್ದು, ಇಬ್ಬರು ಇಲಾಖೆಗೆ ಶರಣಾಗಬೇಕು ಎಂದು ವಾರ್ನ್‌ ಮಾಡಿದ್ದರು. 2018ರಲ್ಲಿ ಭೀಮಾತೀರದ ಉಮರಾಣಿಯಲ್ಲಿ ಶಾಂತಿ ಸಭೆ ನಡೆಸಿ ವಿಮಲಾಬಾಯಿಗೆ ಗಂಡನನ್ನ ಸರೆಂಡರ್‌ ಮಾಡಿಸುವಂತೆ ತಿಳಿ ಹೇಳಿದ್ದೆ. ಹಾಗೇ ಅವರು ನೀಡಿದ ಮನವಿಯಂತೆ ಹಂತಕ ಧರ್ಮರಾಜ್‌ ಚಡಚಣ ಹಾಗೂ ಗಂಗಾಧರ ಹತ್ಯೆಯಲ್ಲಿ ಮಹಾದೇವ ಬೈರಗೊಂಡನನ್ನ ಬಂಧಿಸಿ ಆಕೆಗೆ ನ್ಯಾಯ ನೀಡಿದ್ವಿ. ಆದ್ರೆ ಚಡಚಣ ಕುಟುಂಬದವರು ಮತ್ತೆ ಮಹಾದೇವ ಬೈರಗೊಂಡ ಮೇಲೆ ಪೈರಿಂಗ್‌ ನಡೆಸಿದ್ದಾರೆ ಎಂದು ಎಡಿಜಿಪಿ ತಮ್ಮ ಅಸಮಧಾನ ಹೊರಹಾಕಿದ್ರು.

ಇನ್ಮುಂದೆ ಉಲ್ಟಾ ಹೊಡೆದ್ರೆ ನಡೆಯೊಲ್ಲ: ಅಂದು ಗಂಡನನ್ನ ಸರೆಂಡರ್‌ ಮಾಡಿಸುವೆ ಎಂದು ವಿಮಲಾಬಾಯಿ ಉಲ್ಟಾ ಹೊಡೆದಿದ್ದಳು. ಈಗ ಮತ್ತೆ ಹಾಗೇ ಮಾಡಿದ್ರೆ ನಡೆಯೋಲ್ಲ. ಚಡಚಣ ಸಂಬಂಧಿಕರು ಆಕೆ ಹಾಗೂ ಆಕೆ ಗಂಡ ಮಲ್ಲಿಕಾಜೀಯನ್ನ ಸರೆಂಡರ್‌ ಮಾಡಿಸಲೇಬೇಕು. ಆಗೊಲ್ಲ, ಗೊತ್ತಿಲ್ಲ ಅಂತಾ ನೌಟಂಕಿ ಆಟ ಆಡಿದ್ರೆ ಸುಮ್ಮನಿರಲ್ಲ ಎಂದು ಚಡಚಣ ಸಂಬಂಧಿಕರಿಗೆ ಎಡಿಜಿಪಿ ವಾರ್ನಿಂಗ್‌ ಮಾಡಿದ್ರು. ಇತ್ತ ಮಹಾದೇವ ಬೈರಗೊಂಡ ಹಾಗೂ ಕುಟುಂಬಸ್ಥರಿಗೆ ಚಡಚಣ ಕುಟುಂಬದ ಉಸಾಬರಿಗೆ ಹೋಗಬಾರದು. ರಾತ್ರಿ ಮನೆಗಳಿಂದ ಹೊರಗೆ ಬರಬಾರದು ಅಂತಾ ತಾಕೀತು ಮಾಡಿದ್ರು.

Follow Us:
Download App:
  • android
  • ios