Asianet Suvarna News Asianet Suvarna News

ಅಧಿಕೃತವಾಗಿ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ; ಈ 6 ತಾಲ್ಲೂಕುಗಳು ಸೇರ್ಪಡೆ

ಅಧಿಕೃತವಾಗಿ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬರಲಿದೆ. ಬಳ್ಳಾರಿಯಲ್ಲಿದ್ದ 11 ತಾಲೂಕುಗಳ ಪೈಕಿ 6 ತಾಲ್ಲೂಕುಗಳು ವಿಜಯನಗರಕ್ಕೆ ಸೇರ್ಪಡೆಯಾಗಲಿವೆ. 

Nov 27, 2020, 3:02 PM IST

ಬೆಂಗಳೂರು (ನ. 27): ಅಧಿಕೃತವಾಗಿ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬರಲಿದೆ. ಬಳ್ಳಾರಿಯಲ್ಲಿದ್ದ 11 ತಾಲೂಕುಗಳ ಪೈಕಿ  ಹೊಸಪೇಟೆ, ಕೊಟ್ಟೂರು, ಕೂಡ್ಲಿಗಿ, ಹರಪನಹಳ್ಳಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳು ವಿಜಯ ನಗರ ಜಿಲ್ಲೆಗೆ ಸೇರ್ಪಡೆಯಾಗಲಿವೆ ಎಂದು ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಹೊಸಪೇಟೆ ಜಿಲ್ಲಾಕೇಂದ್ರವಾಗಿರಲಿದೆ. 

ಸಂಪುಟ ಸರ್ಕಸ್‌ಗೆ ಟ್ವಿಸ್ಟ್ ; ಬಿಎಸ್‌ವೈಗೆ ಹೈಕಮಾಂಡ್‌ನಿಂದ ಬಂತು ಸ್ಪಷ್ಟ ಸಂದೇಶ

ವಿಜಯ ನಗರ ಯಾಕೆ ಜಿಲ್ಲೆಯಾಗಬೇಕು ಎಂದು ನೋಡುವುದಾದರೆ, ರೈಲ್ವೇ ಜಂಕ್ಷನ್, ಕಬ್ಬಿನ ಕಾರ್ಖಾನೆ, ಗಣಿಗಾರಿಕೆ ಇದೆ. ಪಂಚತಾರಾ ಹೊಟೇಲ್‌ಗಳಿವೆ. ರೆಸಾರ್ಟ್‌ಗಳಿವೆ. ತೋರಣಗಲ್‌ನ ವಿಮಾನ ನಿಲ್ದಾಣ ಕೂಡಾ ಹತ್ತಿರದಲ್ಲೇ ಇದೆ. ಜಿಲ್ಲಾ ಕೇಂದ್ರಕ್ಕೆ ಅಗತ್ಯ ಇರುವ ಎಲ್ಲಾ ಸೌಲಭ್ಯವೂ ಇದೆ. ಹಾಗಾಗಿ ವಿಜಯ ನಗರವನ್ನು ಜಿಲ್ಲೆಯನ್ನಾಗಿ ಮಾಡಿ ಎಂಬ ಬೇಡಿಕೆ ಕೇಳಿ ಬಂದಿತ್ತು.