Asianet Suvarna News Asianet Suvarna News

ಸಂಪುಟ ಸರ್ಕಸ್‌ಗೆ ಟ್ವಿಸ್ಟ್; ಬಿಎಸ್‌ವೈಗೆ ಹೈಕಮಾಂಡ್‌ನಿಂದ ಬಂತು ಸ್ಪಷ್ಟ ಸಂದೇಶ

ಸಚಿವ ಸಂಪುಟ ವಿಸ್ತರಣೆ- ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ, ಅಮಿತ್ ಶಾ ಜೊತೆ ಚರ್ಚೆ ನಡೆಸಿದ್ದಾರೆ. ಬಿಎಸ್‌ವೈಗೆ ಹೈಕಮಾಂಡ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. 

Nov 27, 2020, 1:06 PM IST

ಬೆಂಗಳೂರು (ನ. 27): ಸಚಿವ ಸಂಪುಟ ವಿಸ್ತರಣೆ- ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ, ಅಮಿತ್ ಶಾ ಜೊತೆ ಚರ್ಚೆ ನಡೆಸಿದ್ದಾರೆ. 'ಸಂಪುಟ ವಿಸ್ತರಣೆಗೆ ಆತುರ ಬೇಡ. ದೆಹಲಿಗೆ ಬನ್ನಿ. ವಿಸ್ತೃತವಾಗಿ ಚರ್ಚಿಸೋಣ' ಎಂದು ಅಮಿತ್ ಶಾ ಹೇಳಿದ್ದಾರೆ. ಅಮಿತ್ ಶಾ ಸಲಹೆಗೆ ಸಿಎಂ ಒಪ್ಪಿದ್ದಾರೆ. 

ಸಚಿವ ಸಂಪುಟ ಸಭೆಯ ಬಳಿಕ ಸಿಎಂ ಖುದ್ದು ಸುದ್ದಿಗೋಷ್ಠಿ! ಇಲ್ಲಿದೆ ಬಿಎಸ್‌ವೈ ನಡೆಯ ರಹಸ್ಯ!

ಸಚಿವ ಸ್ಥಾನದ ಆಕಾಂಕ್ಷಿಗಳು ಸಿಟಿ ರವಿ ಕಚೇರಿ ಪೂಜೆ ನೆಪದಲ್ಲಿ ದೆಹಲಿಗೆ ದೌಡಾಯಿಸಿದ್ದಾರೆ. ಜೆಪಿ ನಡ್ಡಾ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಒಂದು ಕಡೆ ಸಚಿವಾಕಾಂಕ್ಷಿಗಳ ಕಸರತ್ತು, ಇನ್ನೊಂದು ಕಡೆ ಹೈಕಮಾಂಡ್ ಸಲಹೆ. ಗೊಂದಲ ಇನ್ನೂ ಬಗೆಯುವ ಲಕ್ಷಣ ಕಾಣಿಸುತ್ತಿಲ್ಲ