ನಾಗೇಂದ್ರ ಪತ್ನಿಗೂ ಇ.ಡಿ. ಕಂಟಕ: ಗಂಡ ಹೆಂಡತಿ ಇಬ್ಬರ ಒಟ್ಟಿಗೆ ಕೂರಿಸಿ ಪ್ರಶ್ನೆಗಳ ಸುರಿಮಳೆ
ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅಷ್ಟೇ ಅಲ್ಲ ಅವರ ಪತ್ನಿ ಮಂಜುಳಾಗೂಈಗ ಇಡಿ ಸಂಕಷ್ಟ ಎದುರಾಗಿದೆ.ಮಾಜಿ ಸಚಿವರ ಪತ್ನಿಯನ್ನು ವಶಕ್ಕೆ ಪಡೆದಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಾಗೇಂದ್ರ ಮಂಜುಳಾ ಇಬ್ಬರನ್ನು ಜೊತೆಗೆ ಕೂರಿಸಿಕೊಂಡು ಪ್ರಶ್ನೆಗಳ ಸುರಿಮಳೆಗೆರೆದಿದ್ದಾರೆ.
ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅಷ್ಟೇ ಅಲ್ಲ ಅವರ ಪತ್ನಿ ಮಂಜುಳಾಗೂಈಗ ಇಡಿ ಸಂಕಷ್ಟ ಎದುರಾಗಿದೆ.ಮಾಜಿ ಸಚಿವರ ಪತ್ನಿಯನ್ನು ವಶಕ್ಕೆ ಪಡೆದಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಾಗೇಂದ್ರ ಮಂಜುಳಾ ಇಬ್ಬರನ್ನು ಜೊತೆಗೆ ಕೂರಿಸಿಕೊಂಡು ಪ್ರಶ್ನೆಗಳ ಸುರಿಮಳೆಗೆರೆದಿದ್ದಾರೆ. ಪತ್ನಿ ಮಂಜುಳಾ ಹೆಸರಲ್ಲೂ ನಾಗೇಂದ್ರ ಹಣಕಾಸು ವ್ಯವಹಾರ ನಡೆಸಿರುವ ಸಂಶಯವಿದೆ. ಈ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆದಿದೆ.
ಇ.ಡಿ ತನಿಖೆಯಲ್ಲಿ ಬಯಲಾಗ್ತಿದೆ ನೆಕ್ಕುಂಟಿ ನಾಗರಾಜನ್ ಕಳ್ಳಾಟ!
ಇದರ ಜೊತೆಗೆ ಇ.ಡಿ ತನಿಖೆಯಲ್ಲಿ ನೆಕ್ಕುಂಟಿ ನಾಗರಾಜನ್ ಕಳ್ಳಾಟ ಬಯಲಾಗ್ತಿದ್ದು, ರೈತನ ಬ್ಯಾಂಕ್ ಖಾತೆಗೂ ವಾಲ್ಮೀಕಿ ಹಗರಣದ ಹಣ ವರ್ಗಾವಣೆ ಮಾಡಿದ ಆರೋಪವಿದೆ. ನಾಗೇಂದ್ರ ಆಪ್ತ ನೆಕ್ಕುಂಟಿ ನಾಗರಾಜ್ ಅಕೌಂಟ್ನಿಂದಲೇ ಹಣ ವರ್ಗ ಆಗಿದೆ ಎಂದು ತಿಳಿದು ಬಂದಿದೆ.
ಕನ್ನಡಿಗರಿಗೆ ಮೀಸಲು.. ಉದ್ಯಮಿಗಳ ಆಕ್ಷೇಪ!
ಇದರ ಜೊತೆಗೆ ಕನ್ನಡಿಗರ ಹಿತ ಕಾಪಾಡಲು ಮುಂದಾದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಉದ್ಯಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಖಾಸಗಿ ಕ್ಷೇತ್ರದಲ್ಲಿ ಶೇ.50 ರಿಂದ 75 ರಷ್ಟು ಮೀಸಲಿಗೆ ಕ್ಯಾಬಿನೆಟ್ ಇಂದು ಒಪ್ಪಿಗೆ ಸೂಚಿಸಿತ್ತು. ಆದರೆ ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಉದ್ಯಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.