ರಜಾಕಾರರು ನಡೆಸಿದ್ದ ವರವಟ್ಟಿ ಹತ್ಯಾಕಾಂಡದಲ್ಲಿ ಬದುಕುಳಿದ ಮಗು ಈ ಮಲ್ಲಿಕಾರ್ಜುನ ಖರ್ಗೆ

ಸ್ವಾತಂತ್ರ್ಯ ನಂತರ ಹೈದರಾಬಾದ್ ನಿಜಾಮನ ವಿರುದ್ಧ ದಂಗೆ ಎದ್ದವರನ್ನು ಹತ್ತಿಕ್ಕಲು ರಜಾಕಾರರು ವರವಟ್ಟಿ ಗ್ರಾಮದ ಮೇಲೆ ದಾಳಿ ಮಾಡಿ ಹಲವರನ್ನು ಕೊಂದರು. ಈ ಘಟನೆಯಲ್ಲಿ ಮನೆಗೆ ಬೆಂಕಿ ಬಿದ್ದು ಕುಟುಂಬವನ್ನೇ ಕಳೆದುಕೊಂಡ ಮಾಪಣ್ಣ, ತಮ್ಮ ಮಗುವನ್ನು ಜೋಲಿಯಲ್ಲಿ ಜೀವಂತವಾಗಿ ಕಂಡುಕೊಂಡರು. ಈ ಮಗುವೇ ಮಲ್ಲಿಕಾರ್ಜುನ ಖರ್ಗೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

First Published Nov 14, 2024, 12:13 PM IST | Last Updated Nov 14, 2024, 12:13 PM IST

ಸ್ವಾತಂತ್ರ್ಯ ನಂತರ ಹೈದರಾಬಾದ್ ನಿಜಾಮನ ವಿರುದ್ಧ ದಂಗೆ ಎದ್ದವರನ್ನು ಹತ್ತಿಕ್ಕಲು ರಜಾಕಾರರು ವರವಟ್ಟಿ ಗ್ರಾಮದ ಮೇಲೆ ದಾಳಿ ಮಾಡಿ ಹಲವರನ್ನು ಕೊಂದರು. ಈ ಘಟನೆಯಲ್ಲಿ ಮನೆಗೆ ಬೆಂಕಿ ಬಿದ್ದು ಕುಟುಂಬವನ್ನೇ ಕಳೆದುಕೊಂಡ ಮಾಪಣ್ಣ, ತಮ್ಮ ಮಗುವನ್ನು ಜೋಲಿಯಲ್ಲಿ ಜೀವಂತವಾಗಿ ಕಂಡುಕೊಂಡರು. ಈ ಮಗುವೇ ಮಲ್ಲಿಕಾರ್ಜುನ ಖರ್ಗೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭ. ಆಗ 560ಕ್ಕೂ ಹೆಚ್ಚು ರಾಜ ಸಂಸ್ಥಾನಗಳು ಭಾರತದಲ್ಲಿದ್ದವು. ಆ ರಾಜ ಸಂಸ್ಥಾನಗಳ ಪೈಕಿ ಹೈದರಾಬಾದ್ ನಿಜಾಮನ ಹೈದರಾಬಾದ್ ಸಂಸ್ಥಾನವೂ ಒಂದು. ಕರ್ನಾಟಕದ ಕಲಬುರಗಿ ಸೇರಿದಂತೆ ಹಲವಾರು ಭಾಗಗಳು ಆಗ ನಿಜಾಮನ ಆಳ್ವಿಕೆಗೆ ಒಳ ಪಟ್ಟಿದ್ದವು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಬಹುತೇಕ ಎಲ್ಲಾ ರಾಜ ಸಂಸ್ಥಾನಗಳು ಭಾರತದ ಒಕ್ಕೂಟ ಸೇರಿದ್ರೆ, ಹೈದರಾಬಾದ್ ನಿಜಾಮ ಮಾತ್ರ ತಗಾದೆ ತೆಗೆದಿದ್ದ. ಯಾವಾಗ ಹೈದರಾಬಾದ್ ನಿಜಾಮ ತಗಾದೆ ತೆಗೆದನೋ, ಆಗ ನಿಜಾಮನ ವಿರುದ್ಧ ಜನ ಸಿಡಿದೆದ್ದು ಬಿಟ್ಟರು. ಆ ಸಂದರ್ಭದಲ್ಲಿ ಹೈದರಾಬಾದ್ ಸಂಸ್ಥಾನಕ್ಕೆ ಸೇರಿದ್ದ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ನಿಜಾಮನ ವಿರುದ್ಧ ಜನ ದಂಗೆ ಎದ್ದಿದ್ದರು. ಹೀಗೆ ದಂಗೆ ಎದ್ದ ಜನರನ್ನು ಹತ್ತಿಕ್ಕಲು ಮುಂದಾದ ನಿಜಾಮ ತನ್ನ ಕ್ರೂರ ರಜಾಕಾರರ ಪಡೆಯನ್ನು ಅಖಾಡಕ್ಕಿಳಿಸಿದ್ದನು.

ಇದನ್ನೂ ಓದಿ : ಮೋದಿ ಬಡವರನ್ನ ಬೆಳೆಸುವ ಬದಲು ಅದಾನಿಯನ್ನ ಬೆಳೆಸುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ದಂಗೆ ಎದ್ದವರನ್ನು ಹತ್ತಿಕ್ಕುತ್ತಾ ಬಂದ ರಜಾಕಾರರ ಪಡೆ ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ವರವಟ್ಟಿ ಎಂಬ ಗ್ರಾಮಕ್ಕೆ ಲಗ್ಗೆ ಹಾಕಿತು. ಆ ಗ್ರಾಮದಲ್ಲಿ ಸಿಕ್ಕ ಸಿಕ್ಕವರನ್ನೆಲ್ಲಾ ಕೊಚ್ಚಿ ಹಾಕಿ ಇಡೀ ಊರಿಗೆ ಊರನ್ನೇ ಸ್ಮಶಾನ ಮಾಡಿ ಬಿಟ್ಟಿತು. ವರವಟ್ಟಿ ಗ್ರಾಮದಲ್ಲಿ ಗುಡಿಸಲೊಂದಕ್ಕೆ ರಜಾಕಾರರು ಬೆಂಕಿಯಿಟ್ಟ ಪರಿಣಾಮ ಆ ಮನೆಯಲ್ಲಿದ್ದವರೆಲ್ಲಾ ಸುಟ್ಟು ಬೂದಿಯಾಗಿ ಹೋಗ್ತಾರೆ. ಮನೆ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಆ ತಾಯಿ-ಮಗಳನ್ನ ಹಿಂಸಿಸಿ ಬೆಂಕಿ ಹಚ್ಚಿ ಕೊಂದು ಬಿಡ್ತಾರೆ ರಜಾಕಾರರು.

ಈ ಘಟನೆ ನಡೆದಾಗ ಬೇರೆ ಊರಿಗೆ ಹೋಗಿದ್ದ ಮನೆಯ ಯಜಮಾನ ಮಾಪಣ್ಣ, ವಾಪಸ್ ಬಂದು ನೋಡಿದರೆ ಮನೆಗೆ ಮನೆಯೇ ಭಸ್ಮ. ಮಾಪಣ್ಣನ ಹೃದಯವೇ ಒಡೆದು ಹೋಗತ್ತೆ, ನಿಂತ ನೆಲದಲ್ಲೇ ಕುಸಿದು ಬೀಳ್ತಾರೆ. ಮಣ್ಣಲ್ಲಿ ಬಿದ್ದು ಹೃದಯವಿದ್ರಾವಕವಾಗಿ ಒದ್ದಾಡ್ತಾರೆ. ಅಷ್ಟರಲ್ಲಿ ದೂರದ ಮರವೊಂದಕ್ಕೆ ಕಟ್ಟಿದ್ದ ಜೋಲಿಯಿಂದ ಮಗುವೊಂದು ಅಳುವ ಸದ್ದು ಕೇಳಿಸಿತ್ತು. ನೋವಿನಲ್ಲೂ ಧಡಬಡಿಸಿ ಎದ್ದ ಮಾಪಣ್ಣ ಜೋಲಿಯ ಹತ್ತಿರ ಹೋಗಿ ನೋಡಿದರೆ ಅಲ್ಲಿದ್ದದ್ದು ಆತನದ್ದೇ ಮಗು. ಅವರೇ ಈ ಮಲ್ಲಿಕಾರ್ಜುನ ಖರ್ಗೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

Video Top Stories