ಮೋದಿ ಬಡವರನ್ನ ಬೆಳೆಸುವ ಬದಲು ಅದಾನಿಯನ್ನ ಬೆಳೆಸುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಅದಾನಿ ರಾಜಕಾರಣದಲ್ಲಿ ಕೈ ಹಾಕಿದ್ದಾನೆ ಅಂತ ನಾವು ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದೇವೆ.ಅದಾನಿ ಒಂದು ಕಡೆ ದೇಶ ಲೂಟಿ ಮಾಡುತ್ತಿದ್ದಾನೆ, ಇನ್ನೊಂದು ಕಡೆ ತನಗೆ ಸಪೊರ್ಟ್ ಮಾಡುವ ಪಕ್ಷಕ್ಕೆ ಬೆಂಬಲಿಸುತ್ತಿದ್ದಾನೆ. ಮೋದಿ, ಅದಾನಿ ವಿರುದ್ಡ ಖರ್ಗೆ ವಾಗ್ದಾಳಿ

AICC President Kharge ouraged against PM Modi at Kalaburagi rav

ಕಲಬುರಗಿ (ನ.14): ಮಹಾರಾಷ್ಟ್ರದ ಚುನಾವಣೆಯಲ್ಲಿ ಪರವಾಗಿಲ್ಲಾ ನಮ್ಮ ಪಕ್ಷ ಚೆನ್ನಾಗಿ ಕೆಲಸ ಮಾಡಿದೆ. ನಾಳೆ ಜಾರ್ಖಂಡ್‌ಗೆ ಹೋಗುತ್ತಿದ್ದೇನೆ. ಅಲ್ಲಿಯೂ ಚೆನ್ನಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಇಂದು ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವತ್ತಿನವರೆಗೂ ಎಲ್ಲಾ ಕಡೆ ನಮಗೆ ಚೆನ್ನಾಗಿದೆ. ಬಿಜೆಪಿಯವರು ಪಾರ್ಲಿಮೆಂಟ್ ಎಲೆಕ್ಷನ್ ನಲ್ಲಿ ಮಾಡಿದಂತೆ ಮಾಡುತ್ತಿದ್ದಾರೆ ಎಂದು ಜನ ಅಂತಿದ್ದಾರೆ. ಮಹಾರಾಷ್ಟ್ರದಲ್ಲಿ ರೈತರಿಗೆ ಎಂಎಸ್‌ಪಿ, ಕೃಷಿ ಸಬ್ಸಿಡಿ ಯಾಕೆ ಕೊಡುತ್ತಿಲ್ಲ? ಜನರ ಈ ಪ್ರಶ್ನೆಗೆ ಈ ಸರ್ಕಾರದ ಬಳಿ ಉತ್ತರವಿಲ್ಲ. ನಾವು ಕರ್ನಾಟಕ ಮಾದರಿಯಲ್ಲಿ ಐದು ಗ್ಯಾರಂಟಿ ನೀಡುವುದಾಗಿ ಅಲ್ಲಿಯೂ ಘೋಷಿಸಿದ್ದೇವೆ. ನಮ್ಮ ಸರ್ಕಾರ ಬಂದ ಮೇಲೆ ಐದು ಗ್ಯಾರೆಂಟಿಗಳನ್ನು ತಕ್ಷಣ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದೇವೆ ಎಂದರು.

'ಪಂಚಮಸಾಲಿಗೆ ಈ ಲಫಂಗ ಮೀಸಲಾತಿ ನೀಡೊಲ್ಲ': ಸಿಎಂ ವಿರುದ್ಡ ಮನಗೂಳಿ ಹಿರೇಮಠ ಸ್ವಾಮೀಜಿ ವಾಗ್ದಾಳಿ!

ಅದಾನಿಯಿಂದ ದೇಶ ಲೂಟಿ:

ಮಹಾರಾಷ್ಟ್ರ ಸರಕಾರ ರಚನೆ ಸಮಯದಲ್ಲಿ ಅದಾನಿ ಮನೆಯಲ್ಲಿ ಸಭೆಯಾಗಿತ್ತು ಎನ್ನುವ ಅಜಿತ್ ಪವಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಅದಾನಿ ರಾಜಕಾರಣದಲ್ಲಿ ಕೈ ಹಾಕಿದ್ದಾನೆ ಅಂತ ನಾವು ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದೇವೆ.ಅದಾನಿ ಒಂದು ಕಡೆ ದೇಶ ಲೂಟಿ ಮಾಡುತ್ತಿದ್ದಾನೆ, ಇನ್ನೊಂದು ಕಡೆ ತನಗೆ ಸಪೊರ್ಟ್ ಮಾಡುವ ಪಕ್ಷಕ್ಕೆ ಬೆಂಬಲಿಸುತ್ತಿದ್ದಾನೆ. ದೇಶದ 5% ಜನರಲ್ಲಿ 65% ಆಸ್ತಿ ಇದೆ. ಈ ದೇಶದ ಬಡವರ ಬಳಿ ಕೇವಲ 3% ಆಸ್ತಿ ಇದೆ. ಆದರೂ ಬಂಡವಾಳಶಾಹಿಗಳಿಗೆ  ಬಂಬಲಿಸುವ ಕೆಲಸ ಮೋದಿ, ಅಮಿತ ಶಾ ಮಾಡುತ್ತಿದ್ದಾರೆ. 10-20 ಕ್ಯಾಪಿಟಲಿಸ್ಟ್ ಗೆ ಬೆಳೆಸುವ ಬದಲು ಮಧ್ಯಮ ಇಂಡಸ್ಟ್ರಿಯಲಿಸ್ಟ್ ಗೆ ಬೆಳೆಸಬೇಕಿದೆ ಎಂದರು.

ಮುಡಾ ಸೈಟ್ ಹಂಚಿಕೆಯಲ್ಲಿ ಮತ್ತೊಂದು ಟ್ವಿಸ್ಟ್: ಸಿಎಂ ಖಾಸಗಿ ಪಿಎ ಕುಮಾರ್ ಹಾಗೂ ಸಂಸದ ಕುಮಾರ್‌ ನಾಯಕ್‌ಗೆ ಇಡಿ ವಿಚಾರಣೆ

ಕಾಂಗ್ರೆಸ್ ನಲ್ಲಿ ಮೀಸಲಾತಿ ಗೊಂದಲದ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ‌ಗೆ ಪ್ರತಿಕ್ರಿಯಿಸಿದ ಖರ್ಗೆ ಅವರು, ಸಂವಿಧಾನ ಜಾರಿಗೆ ಬಂದ ಮೇಲೆ ಸುಟ್ಟು ಹಾಕಿರೋದು ಅವರೇ. ರಾಮಲೀಲಾ ಮೈದಾನದಲ್ಲಿ ಸಂವಿಧಾನ ಒಪ್ಪದೆ ಸುಟ್ಟು ಹಾಕಿರೋದು ಯಾರು? ತಿರಂಗಾ ಧ್ವಜವನ್ನು ಕೂಡ ಇವರು ಒಪ್ಪಿಲ್ಲ. ಹಿಂದಿನ ಇತಿಹಾಸ ನೀವು ಯಂಗ್ ಸ್ಟಾರ್ಸ್ ಓದಬೇಕು ಎಂದರು. ಇದೇ ವೇಳೆ ರಜಾಕಾರರ ದಾಳಿ ಸಂಧರ್ಭದಲ್ಲಿ ಖರ್ಗೆ ಕುಟುಂಬದ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಯೋಗಿ ಹೇಳಿಕೆಗೆ ಈಗಾಗಲೇ ಅವರ ಹೇಳಿಕೆಗೆ ಉತ್ತರ ಕೊಟ್ಟಿದ್ದೇನೆ ಅದರ ಬಗ್ಗೆ ಮತ್ತೆ ಮಾತಾಡೋದಿಲ್ಲ ಎಂದರು.
 

Latest Videos
Follow Us:
Download App:
  • android
  • ios