ನಮಗೂ ಒಂದು 'ಭಾಗ್ಯ' ಕೊಡಿ; ಅವಿವಾಹಿತ ಯುವರೈತರಿಂದ ಸರ್ಕಾರಕ್ಕೆ ಮನವಿ!
ಹಳ್ಳಿಯಲ್ಲಿ ಕೃಷಿ ಮಾಡುವ ಯುವಕರಿಗೆ ಹೆಣ್ಣು ಕೊಡೋಕೆ ಪೋಷಕರು ಹಿಂದೇಟು ಹಾಕುವುದು ಸಾಮಾನ್ಯವಾಗಿದೆ. ಹುಡುಗ ಹಳ್ಳಿಯಲ್ಲಿ ಕೃಷಿ ಮಾಡಿಕೊಂಡು ಇದ್ದಾನೆ ಅಂದರೆ ಅಂತವರನ್ನು ಕೇಳೋರೇ ಇಲ್ಲದಂತಾಗಿದೆ. ವಯಸ್ಸು ಮೀರುತ್ತಿದ್ದರೂ ಮದುವೆಯಾಗದೇ ಬೇಸತ್ತ ಯುವ ರೈತರು , ನಮಗೆ ನೆರವು ನೀಡಿ ಎಂದು ಮನವಿ ಮಾಡಿದ್ಧಾರೆ.
ಬೆಂಗಳೂರು (ಆ. 24): ಹಳ್ಳಿಯಲ್ಲಿ ಕೃಷಿ ಮಾಡುವ ಯುವಕರಿಗೆ ಹೆಣ್ಣು ಕೊಡೋಕೆ ಪೋಷಕರು ಹಿಂದೇಟು ಹಾಕುವುದು ಸಾಮಾನ್ಯವಾಗಿದೆ. ಹುಡುಗ ಹಳ್ಳಿಯಲ್ಲಿ ಕೃಷಿ ಮಾಡಿಕೊಂಡು ಇದ್ದಾನೆ ಅಂದರೆ ಅಂತವರನ್ನು ಕೇಳೋರೇ ಇಲ್ಲದಂತಾಗಿದೆ. ಒಳ್ಳೆಯ ದುಡಿಮೆ ಇದೆ. ಅನೂಕೂಲಸ್ಥರಾಗಿದ್ದರೂ ಹೆಣ್ಣು ಸಿಗುವುದೇ ಕಷ್ಟವಾಗಿದೆ. ವಯಸ್ಸು ಮೀರುತ್ತಿದ್ದರೂ ಮದುವೆಯಾಗದೇ ಬೇಸತ್ತ ಯುವ ರೈತರು , ನಮಗೆ ನೆರವು ನೀಡಿ ಎಂದು ಮನವಿ ಮಾಡಿದ್ಧಾರೆ.
'ಹಳ್ಳಿಯಲ್ಲಿರುವ ರೈತರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ 2-4 ಲಕ್ಷ ರೂ ಪ್ರೋತ್ಸಾಹ ಧನ ನೀಡಿ. ಕೃಷಿ ಲಕ್ಷ್ಮೀ ಯೋಜನೆ ಜಾರಿಗೆ ತನ್ನಿ' ಎಂದು ಯುವ ರೈತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.