Asianet Suvarna News Asianet Suvarna News

ಇಂದಿನಿಂದ 4 ಸಾವಿರ KSRTC ಬಸ್‌ಗಳು ರಸ್ತೆಗೆ, ಪ್ರಯಾಣಿಕರಿಗೆ ಷರತ್ತುಗಳು ಅನ್ವಯ..!

Jul 5, 2021, 10:00 AM IST

ಬೆಂಗಳೂರು (ಜು. 05): ಇಂದಿನಿಂದ ರಾಜ್ಯದಲ್ಲಿ ಅನ್‌ಲಾಕ್ 3.0 ಜಾರಿಯಾಗುತ್ತಿದೆ. 2 ತಿಂಗಳುಗಳ ಬಳಿಕ ರಾಜ್ಯ ಕಂಪ್ಲೀಟ್ ಅನ್‌ಲಾಕ್‌ ಆಗುತ್ತಿದೆ. ಇಂದಿನಿಂದ ಮಾಲ್‌ಗಳು, ದೇವಸ್ಥಾನಗಳು, ವಾಣಿಜ್ಯ ಚಟುವಟಿಕೆಗಳು ಶುರುವಾಗಲಿದೆ. 4 ಸಾವಿರ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿಯಲು ಸಜ್ಜಾಗಿದೆ.

ಅನ್‌ಲಾಕ್‌ 3.0: ರಾಜ್ಯದಲ್ಲಿ ನಯಾ ದುನಿಯಾ, ಬಹುತೇಕ ಎಲ್ಲಾ ನಿರ್ಬಂಧಗಳು ತೆರವು

ಶೇ. 100 ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಪ್ರಯಾಣಿಕರು ನಿಂತು ಪ್ರಯಾಣಿಸುವಂತಿಲ್ಲ. ಪ್ರಯಾಣಿಕರಿಗೆ ಕೋವಿಡ್ ನಿಯಮಗಳು ಅನ್ವಯವಾಗಲಿದೆ. ಒಂದು ವೇಳೆ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾದರೆ, ಅಗತ್ಯಕ್ಕೆ ತಕ್ಕಂತೆ ಬಸ್‌ಗಳನ್ನು ರಸ್ತೆಗಿಳಿಸಲು ಕೆಎಸ್‌ಆರ್‌ಟಿಸಿ ನಿಗಮ ಸಜ್ಜಾಗಿದೆ.  
 

Video Top Stories