Cabinet Reshuffle: ಸಭೆಗೆ ನಾವು ಯಾರನ್ನೂ ಆಹ್ವಾನಿಸಿಲ್ಲ, ಸಂಚಲನಕ್ಕೆ ಉತ್ತರ ಕೊಟ್ಟ ಕತ್ತಿ

 ಸಚಿವ ಉಮೇಶ ಕತ್ತಿ (Umesh Katti) ಅವರ ಬೆಳಗಾವಿ ನಿವಾಸದಲ್ಲಿಜಾರಕಿಹೊಳಿ ಸಹೋದರರು ಮತ್ತವರ ಆಪ್ತರನ್ನು ಹೊರತುಪಡಿಸಿ ಜಿಲ್ಲೆಯ ಸಂಸದರು, ಶಾಸಕರು ಸಭೆ ನಡೆಸಿದ್ದು ತೀವ್ರ ಸಂಚಲನ ಮೂಡಿಸಿದೆ. 

First Published Jan 24, 2022, 5:29 PM IST | Last Updated Jan 24, 2022, 5:29 PM IST

ಬೆಂಗಳೂರು (ಜ. 24): ಸಚಿವ ಉಮೇಶ ಕತ್ತಿ (Umesh Katti) ಅವರ ಬೆಳಗಾವಿ ನಿವಾಸದಲ್ಲಿಜಾರಕಿಹೊಳಿ ಸಹೋದರರು ಮತ್ತವರ ಆಪ್ತರನ್ನು ಹೊರತುಪಡಿಸಿ ಜಿಲ್ಲೆಯ ಸಂಸದರು, ಶಾಸಕರು ಸಭೆ ನಡೆಸಿದ್ದು ತೀವ್ರ ಸಂಚಲನ ಮೂಡಿಸಿದೆ. ಮುಂಬರಲಿರುವ ಸಂಪುಟ ಸಭೆ ವಿಸ್ತರಣೆ, ನಿಗಮ-ಮಂಡಳಿ ರಚನೆ ಬಗ್ಗೆ ನಿರಂತರ 3 ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. 

Cabinet Reshuffle: ನಮ್ಮನ್ನು ಸಂಪುಟದಿಂದ ಕೈ ಬಿಡಲ್ಲ ಎಂಬ ವಿಶ್ವಾಸವಿದೆ: ಭೈರತಿ

ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಶಾಸಕರಾದ ಪಿ.ರಾಜೀವ್‌, ಮಹಾಂತೇಶ ದೊಡ್ಡಗೌಡರ, ಮಹಾದೇವಪ್ಪ ಯಾದವಾಡ, ಅಭಯ ಪಾಟೀಲ, ಅನಿಲ ಬೆನಕೆ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾತೇಂಶ ಕವಟಗಿಮಟ ಸಭೆಯಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿ ಸಂಸದೆ ಮಂಗಲ ಅಂಗಡಿ ಅವರಿಗೆ ಆಹ್ವಾನ ನೀಡಿದ್ದರೂ ಬಂದಿರಲಿಲ್ಲ ಎನ್ನಲಾಗಿದೆ.

'ನಾವು ಯಾರಿಗೂ ಆಹ್ವಾನ ನೀಡಿಲ್ಲ. ಸಭೆಗೆ ಬಂದವರು ದೊಡ್ಡವರಲ್ಲ, ಬರದೇ ಇದ್ದವರು ಸಣ್ಣವರಲ್ಲ. ಮುಂದಿನ ತಾ.ಪಂ, ಜಿ. ಪಂ ಚುನಾವಣೆಯಲ್ಲಿ ಪಕ್ಷದ ಸಂಘಟನೆ ಬಗ್ಗೆ ಚರ್ಚಿಸಿದೆವು. ಕೆಲವರು ಬಂದರು, ಕೆಲವರು ಬಂದಿಲ್ಲ. ಯಾರು, ಯಾರನ್ನೂ ಹೊರಗಿಟ್ಟಿಲ್ಲ' ಎಂದು ಉಮೇಶ್ ಕತ್ತಿ ಸ್ಪಷ್ಟನೆ ನೀಡಿದರು.