Cabinet Reshuffle: ನಮ್ಮನ್ನು ಸಂಪುಟದಿಂದ ಕೈ ಬಿಡಲ್ಲ ಎಂಬ ವಿಶ್ವಾಸವಿದೆ: ಭೈರತಿ
ಸಂಪುಟದಿಂದ ಕೈ ಬಿಟ್ಟರೆ ಒಪ್ಪಿಕೊಳ್ಳಲೇಬೇಕು. ಸಿಎಂ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ಆದರೆ ನಮ್ಮನ್ನು ಕೈ ಬಿಡಲ್ಲ ಎಂಬ ವಿಶ್ವಾಸವಿದೆ' ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಬೆಂಗಳೂರು (ಜ. 24): ರಾಜ್ಯ ರಾಜಕೀಯದಲ್ಲಿ ಸಂಪುಟ ವಿಸ್ತರಣೆ (Cabinet Reshuffle) ಟೆನ್ಷನ್ ಶುರುವಾಗಿದೆ. ಸಂಪುಟ ವಿಸ್ತರಣೆಗೆ ಒತ್ತಡ ಶುರುವಾಗಿದೆ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಂಪುಟ ವಿಸ್ತರಣೆಗೆ ಪಟ್ಟು ಹೆಚ್ಚಾಗಿದೆ. ಹಾಲಿ ಸಚಿವರ ವಿರುದ್ಧ ಸಚಿವಾಕಾಂಕ್ಷಿಗಳು ಬಹಿರಂಗ ಅಸಮಾಧಾನ ಹೊರ ಹಾಕಿದ್ದಾರೆ. ಹಿರಿಯ ಸಚಿವರನ್ನು ಕೈ ಬಿಟ್ಟು ತಮಗೆ ಅವಕಾಶ ನೀಡಲು ಬಿಗಿಪಟ್ಟು ಹಿಡಿದಿದ್ದಾರೆ. ಸಿಎಂ ಮೇಲೆ ಒತ್ತಡ ಹೆಚ್ಚಿದೆ.
Cabinet Reshuffle: ಹಿರಿಯ ಸಚಿವರನ್ನು ಕೈ ಬಿಟ್ಟು ತಮಗೆ ಅವಕಾಶ ಕೊಡಲು ಸಚಿವಾಕಾಂಕ್ಷಿಗಳ ಪಟ್ಟು