Asianet Suvarna News Asianet Suvarna News

'ಈಗ್ಲೇ 65, ಮುಂದೆ ಇನ್ನೆಷ್ಟು ಸೀಟ್‌ಗೆ ಜನ ಇಳಿಸ್ತಾರೋ..' ಯಶ್‌ಪಾಲ್‌ ಸುವರ್ಣಗೆ ಗೃಹ ಸಚಿವರ ತಿರುಗೇಟು

ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಮಾಡಿದ ಟೀಕೆಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ. ಪರಮೇಶ್ವರ್‌, ಅವರು ಏನ್‌ ಬೇಕಾದ್ರೂ ಹೇಳಿಕೊಳ್ಳಲಿ ಅದಕ್ಕೆ ಪ್ರತಿಕ್ರಿಯೆ ನೀಡೋದಿಲ್ಲ ಎಂದಿದ್ದಾರೆ.
 

ಬೆಂಗಳೂರು (ಜು.28): ಹಿಂದು ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣವನ್ನು ಸಣ್ಣ ಘಟನೆ ಎಂದಿದ್ದ ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಅವರ ವೈಯಕ್ತಿಕ ವಿಚಾರ ಹಿಡಿದು ಇಂದು ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪರಮೇಶ್ವರ್‌, ಇದಕ್ಕೆಲ್ಲಾ ಪ್ರತಿಕ್ರಿಯೆ ನೀಡೋದಿಲ್ಲ ಎಂದು ಹೇಳಿದ್ದಾರೆ.

ಹಿಂದೂಗಳು ಶಾಲೆಗೆ ಬರೋದಕ್ಕೂ ಭಯದ ವಾತವರಣ ಸೃಷ್ಟಿ, ಸಿಎಂ ಸಿದ್ದು ವಿರುದ್ಧ ಬಿಜೆಪಿ ವಾಗ್ದಾಳಿ!

ಈಗಲೇ ಜನ ಅವರನ್ನು 65 ಸೀಟ್‌ಗೆ ಇಳಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇನ್ನೆಷ್ಟು ಸೀಟ್‌ಗೆ ಇಳಿಸ್ತಾರೋ. ಅದಲ್ಲೆ, ಅವರಿಗೆ ಏನು ಬೇಕಾದರೂ ಮಾತನಾಡುವ ಸ್ವಾತಂತ್ರ್ಯವಿದೆ. ಅವರ ಹೇಳಿಕೆಗೆಲ್ಲಾ ಪ್ರತಿಕ್ರಿಯೆ ನೀಡೋಕೆ ಹೋಗೋದಿಲ್ಲ ಎಂದು ಹೇಳಿದ್ದಾರೆ.

Video Top Stories