BIG 3: 6 ತಿಂಗಳೊಳಗೆ ಕಾಲ್ಸೇತುವೆ ಮಾಡ್ತೀವಿ: ಉಡುಪಿ ಜಿ.ಪಂ. ಸಿಇಒ
ಬೈಂದೂರಿನ ಕಾಲ್ತೋಡು ಗ್ರಾಮದ ಮಕ್ಕಿಮನೆಯ ವಿದ್ಯಾರ್ಥಿನಿ ಸನ್ನಿಧಿ (7) ಸೋಮವಾರ ಸಂಜೆ ಶಾಲೆಯಿಂದ ಮನೆಗೆ ಕಾಲು ಸಂಕದ ಮೇಲೆ ನಡೆದುಕೊಂಡು ಹೋಗುತಿದ್ದಾಗ, ಕಾಲು ಜಾರಿ ತೋಡಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾಳೆ.
ಬೈಂದೂರಿನ ಕಾಲ್ತೋಡು ಗ್ರಾಮದ ಮಕ್ಕಿಮನೆಯ ವಿದ್ಯಾರ್ಥಿನಿ ಸನ್ನಿಧಿ (7) ಸೋಮವಾರ ಸಂಜೆ ಶಾಲೆಯಿಂದ ಮನೆಗೆ ಕಾಲು ಸಂಕದ ಮೇಲೆ ನಡೆದುಕೊಂಡು ಹೋಗುತಿದ್ದಾಗ, ಕಾಲು ಜಾರಿ ತೋಡಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾಳೆ. ಕಾಲ್ತೋಡು ಗ್ರಾಮದ ಜನ ನಮಗೆ ಸುಸಜ್ಜಿತ ಸೇತುವೆ ಮಾಡಿಕೊಡಿ ಎಂದು ಸಾಕಷ್ಟು ಬಾರಿ ಅದಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಗ್ರಾಮಸ್ಥರೇ ತಮ್ಮ ಅನುಕೂಲಕ್ಕಾಗಿ ಮರದ ದಿಮ್ಮಿಗಳನ್ನು ಜೋಡಿಸಿ ಕಾಲುಸೇತುವೆ ನಿರ್ಮಿಸಿಕೊಂಡಿದ್ದಾರೆ. ಕಿರು ಸೇತುವೆ ಯಾವಾಗ ನಿರ್ಮಿಸ್ತೀರಿ..? ಇನ್ನೆಷ್ಟು ಜೀವ ಬಲಿಯಾಗಬೇಕು ಸ್ವಾಮಿ..?
BIG 3: ಶಾಲೆಯಿಂದ ಮರಳುತ್ತಿದ್ದ ಬಾಲಕಿ ನೀರು ಪಾಲು, ಕಿರುಸೇತುವೆ ನಿರ್ಮಿಸುವ ಯೋಗ್ಯತೆ ಇಲ್ವಾ?
ಈ ಬಗ್ಗೆ ಬಿಗ್ 3 ವರದಿ ಪ್ರಸಾರ ಮಾಡುತ್ತಿದ್ದಂತೆ ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 'ಈ ಗ್ರಾಮದ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ನರೇಗಾ ಯೋಜನೆಯಡಿ ನಾವು ಕಿರುಸೇತುವೆ ನಿರ್ಮಿಸುತ್ತೇವೆ. ಇನ್ನು ೬ ತಿಂಗಳಲ್ಲಿ ಮಾಡಿಕೊಡಲು ಪ್ರಯತ್ನಿಸುತ್ತೇವೆ' ಎಂದಿದ್ಧಾರೆ.