BIG 3: ಶಾಲೆಯಿಂದ ಮರಳುತ್ತಿದ್ದ ಬಾಲಕಿ ನೀರು ಪಾಲು, ಕಿರುಸೇತುವೆ ನಿರ್ಮಿಸುವ ಯೋಗ್ಯತೆ ಇಲ್ವಾ?

ಬೈಂದೂರಿನ ಕಾಲ್ತೋಡು ಗ್ರಾಮದ ಮಕ್ಕಿಮನೆಯ ವಿದ್ಯಾರ್ಥಿನಿ ಸನ್ನಿಧಿ (7)  ಸೋಮವಾರ ಸಂಜೆ ಶಾಲೆಯಿಂದ ಮನೆಗೆ ಕಾಲು ಸಂಕದ ಮೇಲೆ ನಡೆದುಕೊಂಡು ಹೋಗುaತಿದ್ದಾಗ, ಕಾಲು ಜಾರಿ ತೋಡಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾಳೆ. 

Share this Video
  • FB
  • Linkdin
  • Whatsapp

ಉಡುಪಿ (ಆ. 10): ಬೈಂದೂರಿನ ಕಾಲ್ತೋಡು ಗ್ರಾಮದ ಮಕ್ಕಿಮನೆಯ ವಿದ್ಯಾರ್ಥಿನಿ ಸನ್ನಿಧಿ (7) ಸೋಮವಾರ ಸಂಜೆ ಶಾಲೆಯಿಂದ ಮನೆಗೆ ಕಾಲು ಸಂಕದ ಮೇಲೆ ನಡೆದುಕೊಂಡು ಹೋಗುತಿದ್ದಾಗ, ಕಾಲು ಜಾರಿ ತೋಡಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾಳೆ. ಕಾಲ್ತೋಡು ಗ್ರಾಮದ ಜನ ನಮಗೆ ಸುಸಜ್ಜಿತ ಸೇತುವೆ ಮಾಡಿಕೊಡಿ ಎಂದು ಸಾಕಷ್ಟು ಬಾರಿ ಅದಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಗ್ರಾಮಸ್ಥರೇ ತಮ್ಮ ಅನುಕೂಲಕ್ಕಾಗಿ ಮರದ ದಿಮ್ಮಿಗಳನ್ನು ಜೋಡಿಸಿ ಕಾಲುಸೇತುವೆ ನಿರ್ಮಿಸಿಕೊಂಡಿದ್ದಾರೆ. ಕಿರು ಸೇತುವೆ ಯಾವಾಗ ನಿರ್ಮಿಸ್ತೀರಿ..? ಇನ್ನೆಷ್ಟು ಜೀವ ಬಲಿಯಾಗಬೇಕು ಸ್ವಾಮಿ..? 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video