Republic Day 2022: ರಾಜ್‌ಪಥ್‌ನಲ್ಲಿ ಸಂಚರಿಸಲಿದೆ ಬೆಂಗಳೂರಲ್ಲೇ ತಯಾರಾದ ಡಿಆರ್‌ಡಿಓ ಸ್ತಬ್ಧಚಿತ್ರ!

*ಬೆಂಗಳೂರಲ್ಲೇ ತಯಾರಾದ ಡಿಆರ್‌ಡಿಒ ಸ್ತಬ್ಧಚಿತ್ರ
*ವಾರ್ತಾ ಇಲಾಖೆಯ ಕರಕುಶಲ ವಸ್ತುಗಳ ಟ್ಯಾಬ್ಲೋ 
*ರಾಜ್‌ಪಥ್‌ನಲ್ಲಿ ಸಂಚರಿಸಲಿವೆ ರಾಜ್ಯದ 2 ಸ್ಥಬ್ಧ ಚಿತ್ರ!

Share this Video
  • FB
  • Linkdin
  • Whatsapp

ನವದೆಹಲಿ( ಜ. 23): ಈ ಬಾರಿಯ ಗಣರಾಜ್ಯೋತ್ಸವದಲ್ಲಿ (Republic Day 2022) ಕರ್ನಾಟಕದಿಂದ ಒಂದಲ್ಲ, ಎರಡು ಸ್ತಬ್ಧಚಿತ್ರ ಭಾಗವಹಿಸಲಿವೆ. ವಾರ್ತಾ ಇಲಾಖೆಯ ಕರಕುಶಲ ವಸ್ತುಗಳ ಟ್ಯಾಬ್ಲೋ ಒಂದಾದರೆ, ಬೆಂಗಳೂರಿನ ವಿಜ್ಞಾನಿಗಳೇ ನಿರ್ಮಾಣ ಮಾಡಿರುವ ಮತ್ತೊಂದು ಸ್ತಬ್ಧಚಿತ್ರ ಜ.26ರಂದು ರಾಜಪಥದಲ್ಲಿ ಸಂಚರಿಸಲಿದೆ. ಬೆಂಗಳೂರಲ್ಲೇ ತಯಾರಾದ ತೇಜಸ್‌ ಲಘು ಯುದ್ಧ ವಿಮಾನದಲ್ಲಿ ಬಳಸುವ ರಾಡಾರ್‌, ಸೆನ್ಸರ್‌, ಕ್ಷಿಪಣಿ, ಬಾಂಬ್‌ಗಳನ್ನು ಬಿಂಬಿಸುವ ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ - DRDO)ದ ಸ್ತಬ್ಧಚಿತ್ರ ಇದಾಗಿದೆ.

Add Asianetnews Kannada as a Preferred SourcegooglePreferred

ಇದನ್ನೂ ಓದಿ: Republic Day Parade Tableau : ಕೇರಳ ರಾಜ್ಯದ ಸ್ತಬ್ದಚಿತ್ರ ತಿರಸ್ಕೃತ, ಅದಕ್ಕೆ ಇಲ್ಲಿವೆ ಕಾರಣ

ನವದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲಿರುವ ಡಿಆರ್‌ಡಿಒ(ಡಿಫೆನ್ಸ್‌ ರಿಸಚ್‌ರ್‍ ಆ್ಯಂಡ್‌ ಡೆಲವಪ್‌ಮೆಂಟ್‌ ಆರ್ಗನೈಸೇಶನ್‌)ದ ಟ್ಯಾಬ್ಲೋದಲ್ಲಿ ಬೆಂಗಳೂರಿನ ಕೇಂದ್ರದಲ್ಲಿ ತೇಜಸ್‌ ಲಘು ಯುದ್ಧವಿಮಾನದಲ್ಲಿ ಬಳಸುವ ಸಲುವಾಗಿ ಅಭಿವೃದ್ಧಿಪಡಿಸಿರುವ ರಾಡಾರ್‌, ಸೆನ್ಸಾರ್‌, ಕ್ಷಿಪಣಿ, ಬಾಂಬ್‌ಗಳ ಪ್ರದರ್ಶನವಾಗಲಿದೆ. ಬೆಂಗಳೂರು ಕೇಂದ್ರದ ವಿಜ್ಞಾನಿಗಳೇ ಟ್ಯಾಬ್ಲೋ ನಿರ್ಮಾಣ ಮಾಡಿರುವುದಾಗಿ ಕೇಂದ್ರದ ವಿಜ್ಞಾನಿ ಮಹೇಶ್‌ಬಾಬು ತಿಳಿಸಿದ್ದಾರೆ.

ಇನ್ನು ಕರ್ನಾಟಕ- ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎನ್ನುವ ಧ್ಯೇಯದಡಿ ಸಿದ್ಧಗೊಳ್ಳುತ್ತಿರುವ ಸ್ತಬ್ಧಚಿತ್ರ ಗಣರಾಜ್ಯೋತ್ಸವ ದಿನದ ಮೆರವಣಿಗೆಯಲ್ಲಿ ಸಾಗಲಿದ್ದು, ವಿಶ್ವಪ್ರಸಿದ್ಧ ಚನ್ನಪಟ್ಟಣ ಗೊಂಬೆ, ಕಿನ್ನಾಳ ಗೊಂಬೆ, ಇಳಕಲ್‌ ಸೀರೆ, ಉಡುಪಿ ಸೀರೆ, ಮೈಸೂರು ಗಾಂಜೀಫ ಕಲೆಗಳೂ ಸೇರಿದಂತೆ ಜಿಐ ಟ್ಯಾಗ್‌ ಇರುವ 16 ಕರಕುಶಲ ವಸ್ತುಗಳು ಅನಾವರಣಗೊಳ್ಳಲಿವೆ.

Related Video