ಪೆಂಡಾಲ್‌ನಲ್ಲಿ ಗಣೇಶನ ಮೂರ್ತಿ ಜೊತೆ ಸಾವರ್ಕರ್ ಚಿತ್ರ ಇಡ್ತೇವೆ!
ರಾಜ್ಯದಲ್ಲಿ ಸಾವರ್ಕರ್ ವಿವಾದಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಗಣೇಶೋತ್ಸವದ ಜೊತೆ ಸಾವರ್ಕರ್ ಅಭಿಯಾನವನ್ನು ನಡೆಸಲು ಹಿಂದೂ ಸಂಘಟನೆಗಳು ಪ್ಲಾನ್ ಮಾಡಿವೆ
ಬೆಂಗಳೂರು (ಆ.19): ರಾಜ್ಯಲ್ಲಿ ತಾರಕಕ್ಕೇರಿರುವ ಸಾವರ್ಕರ್ ಸಮರಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಮುಂಬರುವ ಗಣೇಶೋತ್ಸವ ಸಂದರ್ಭದಲ್ಲಿ ಸಾವರ್ಕರ್ ಅಭಿಯಾನವನ್ನು ನಡೆಸಲು ಹಿಂದೂ ಸಂಘಟನೆಗಳು ಮುಂದಾಗಿವೆ. ಸಂಘಟನೆಗಳ ಅಭಿಯಾನದಿಂದ ರಾಜ್ಯದಲ್ಲಿ ಕಿಚ್ಚು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಗಣೇಶನ ಹಬ್ಬವನ್ನು ಬಳಸಿ ಸಾವರ್ಕರ್ ಕುರಿತಾಗಿ ಅಭಿಯಾನ ಆರಂಭಿಸಲು ಹಿಂದು ಸಂಘಟನೆಗಳು ಯೋಜನೆ ರೂಪಿಸಿವೆ. ಸಾವರ್ಕರ್ ಗಣೇಶೋತ್ಸವ ಎನ್ನುವ ಹೆಸರಲ್ಲಿ ಗಣೇಶನ ಪೆಂಡಾಲ್ ಹಾಕುವ ಯೋಜನೆ ರೂಪಿಸಲಾಗಿದೆ. ರಾಜ್ಯದ 10 ಸಾವಿರಕ್ಕೂ ಅಧಿಕ ಗಣೇಶೋತ್ಸವದ ಪೆಂಡಾಲ್‌ಗಳಲ್ಲಿ ಗಣೇಶನ ಮೂರ್ತಿಯೊಂದಿಗೆ ಸಾವರ್ಕರ್ ಚಿತ್ರವನ್ನು ಇಡಲಿದ್ದೇವೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಸಾವರ್ಕರ್ ಪುತ್ಥಳಿಗೆ ಮುಂದಾದ ಹಿಂದೂ ಸಂಘಟನೆಗಳು!
ರಾಜ್ಯದಲ್ಲಿ ಗಣೇಶೋತ್ಸವದೊಂದಿಗೆ ಸಾವರ್ಕರ್ ಉತ್ಸವವನ್ನೂ ನಾವು ಮಾಡಲಿದ್ದೇವೆ. ಪ್ರತಿ ಪೆಂಡಾಲ್‌ನಲ್ಲೂ ಅವರ ಚಿತ್ರವಿಟ್ಟು, ಅವರ ಬಗ್ಗೆ ತಿಳಿಸುವ ಕೆಲಸ ಮಾಡಲಿದ್ದೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.