Asianet Suvarna News Asianet Suvarna News

ಸಾವರ್ಕರ್ ಪುತ್ಥಳಿಗೆ ಮುಂದಾದ ಹಿಂದೂ ಸಂಘಟನೆಗಳು!

ಉಡುಪಿ ಸಾವರ್ಕರ್‌ ಬ್ಯಾನರ್ ವಿವಾದಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕಾಂಗ್ರೆಸ್‌, ಎಸ್‌ಡಿಪಿಐಗೆ ತಿರುಗೇಟು ನೀಡಲು, ಹಿಂದೂ ಸಂಘಟನೆಗಳು ಸಾವರ್ಕರ್ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದು, ಅನುಮತಿ ಕೋರಿ ನಗರಸಭೆಗೆ ಪತ್ರ ಬರೆದಿದ್ದಾರೆ.

ಉಡುಪಿ (ಆ. 18): ವೀರ್‌ ಸಾವರ್ಕರ್‌ ಸಂಘರ್ಷಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಇಲ್ಲಿನ ಬ್ರಹ್ಮಗಿರಿ ಸರ್ಕಲ್‌ನಲ್ಲಿ ವೀರ್‌ ಸಾವರ್ಕರ್‌ ಅವರ ಪುತ್ಥಳಿಯನ್ನು  ಸ್ಥಾಪನೆ ಮಾಡಲು ನಗರಸಭೆಗೆ ಬಿಜೆಪಿ ಮುಖಂಡ ಪತ್ರ ಬರೆದಿದ್ದಾರೆ. ಇದರೊಂದಿಗೆ ವೀರ್‌ ಸಾವರ್ಕರ್‌ ಸಂಘರ್ಷ ಇನ್ನಷ್ಟು ಜೋರಾಗುವ ಲಕ್ಷಣ ಕಂಡಿದೆ.

ಸಾವರ್ಕರ್‌ ಫ್ಲೆಕ್ಸ್‌ಅನ್ನು ವಿರೋಧಿಸಿದ್ದ ಕಾಂಗ್ರೆಸ್‌, ಎಸ್‌ಡಿಪಿಐಗೆ ತಿರುಗೇಟು ನೀಡಲು ಹಿಂದು ಸಂಘಟನೆಗಳು ಮುಂದಾಗಿವೆ. ಈಗ ಫ್ಲೆಕ್ಸ್‌ ಅಲ್ಲ ಪುತ್ಥಳಿಯನ್ನೇ ಸ್ಥಾಪನೆ ಮಾಡುತ್ತೇವೆ ಎಂದು ಬಿಜೆಪಿ ಮುಖಂಡ ಯಶ್‌ಪಾಲ್‌ ಸುವರ್ಣ ಹೇಳಿದ್ದಾರೆ. ಈ ಕುರಿತಾಗಿ ನಗರಸಭೆ ಮುಖಂಡರೂ ಆಗಿರುವ ಯಶ್‌ಪಾಲ್‌ ಸುವರ್ಣ, ಆಯುಕ್ತರಿಗೆ ಪತ್ರವನ್ನು ಬರೆದಿದ್ದಾರೆ.

ಸಾವರ್ಕರ್ ಆಯ್ತು, ಈಗ ಗೋಡ್ಸೆ ಫ್ಲೆಕ್ಸ್: ಮಂಗಳೂರಿನಲ್ಲಿ ಹಿಂದೂ ಮಹಾಸಭಾದಿಂದ ಗೋಡ್ಸೆಗೆ ಗೌರವ!

ಸಾವರ್ಕರ್‌ ಫ್ಲೆಕ್ಸ್ ಹಾಕಿದ್ದಕ್ಕೆ ಕಾಂಗ್ರೆಸ್ ವಿರೋಧಿಸಿತ್ತು. ಈಗ ಫ್ಲೆಕ್ಸ್‌ ಅಲ್ಲ ನಾವು ಪುತ್ಥಳಿಯನ್ನೇ ನಿರ್ಮಾಣ ಮಾಡ್ತೀವಿ ಎಂದು ಹಿಂದೂ ಸಂಘಟನೆಗಳು ಹೇಳಿವೆ. 'ಟಿಪ್ಪು ಮತ್ತು ಸಾವರ್ಕರ್‌ ಅವರ ನಡುವೆ ಹಗಲು-ರಾತ್ರಿಯ ವ್ಯತ್ಯಾಸವಿದೆ. ಟಿಪ್ಪು ಸುಲ್ತಾನ್‌ಗೂ ಸ್ವಾತಂತ್ರ್ಯ ಹೋರಾಟಕ್ಕೂ ಏನು ಸಂಬಂಧ. ನಾನು ಕಾನೂನಾತ್ಮಕವಾಗಿ ಅನುಮತಿ ಕೇಳಿದ್ದೇನೆ. ಇದಕ್ಕೆ ಅನುಮತಿ ಸಿಗುವ ವಿಶ್ವಾಸವಿದೆ' ಎಂದು ಯಶ್‌ಪಾಲ್‌ ಸುವರ್ಣ ಹೇಳಿದ್ದಾರೆ.

Video Top Stories