ತೈಲ ಬೆಲೆ ಏರಿಕೆ ವಿರೋಧಿಸಿ ಇಂದು ಭಾರತ್ ಬಂದ್; ಏನಿರತ್ತೆ? ಏನಿರಲ್ಲ..?
ಇಂಧನ ಬೆಲೆ ಏರಿಕೆ ವಿರೋಧಿಸಿ, ಜಿಎಸ್‌ಟಿಯ ಕೆಲ ವಿವಾದಾತ್ಮಕ ಅಂಶಗಳನ್ನು ಖಂಡಿಸಿ ಅಖಿಲ ಭಾರತ ವ್ಯಾಪಾರಿ ಮಹಾ ಒಕ್ಕೂಟ ಇಂದು ಭಾರತ್ ಬಂದ್‌ಗೆ ಕರೆ ನೀಡಿದೆ.
ಬೆಂಗಳೂರು (ಫೆ. 26): ಇಂಧನ ಬೆಲೆ ಏರಿಕೆ ವಿರೋಧಿಸಿ, ಜಿಎಸ್‌ಟಿಯ ಕೆಲ ವಿವಾದಾತ್ಮಕ ಅಂಶಗಳನ್ನು ಖಂಡಿಸಿ ಅಖಿಲ ಭಾರತ ವ್ಯಾಪಾರಿ ಮಹಾ ಒಕ್ಕೂಟ ಇಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಈ ಬಂದ್‌ಗೆ 40 ಸಾವಿರ ವ್ಯಾಪಾರಿ ಸಂಘಟನೆಗಳು ಬೆಂಬಲ ನೀಡಿವೆ. ಲಾರಿ ಮಾಲಿಕರ ಸಂಘವೂ ಬೆಂಬಲ ನೀಡಿದೆ. ಬೆಂಗಳೂರಿನಲ್ಲಿ ಯಾವುದೇ ಮಾರುಕಟ್ಟೆ ಬಂದ್ ಮಾಡದೇ ಇರಲು ನಿರ್ಧರಿಸಲಾಗಿದೆ.