ಸಾರಿಗೆ ನೌಕರರ ವಿಚಾರದಲ್ಲಿ ಬೇರೆಯವರು ಕಡ್ಡಿ ಅಲ್ಲಾಡಿಸೋದು ಬೇಡ: ಸವದಿ ಟಾಂಗ್

ಸಾರಿಗೆ ನೌಕರರ ವಿಚಾರದಲ್ಲಿ ಮಧ್ಯದಲ್ಲಿ ಯಾರೋ ಬಂದು ಕಡ್ಡಿ ಅಲ್ಲಾಡಿಸೋದು ಬೇಡ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಪರೋಕ್ಷವಾಗಿ ಕೋಡಿಹಳ್ಳಿ ಚಂದ್ರಶೇಖರ್‌ಗೆ ಟಾಂಗ್ ನೀಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 02): ಸಾರಿಗೆ ನೌಕರರ ವಿಚಾರದಲ್ಲಿ ಬೇರೆಯವರ ಹಸ್ತಕ್ಷೇಪ ಬೇಡ. ಸಾರಿಗೆ ನೌಕರರು ಮತ್ತು ಸಾರಿಗೆ ಸಿಬ್ಬಂದಿ ಕುಟುಂಬದಂತೆ ಇದ್ದೇವೆ. ಮಧ್ಯದಲ್ಲಿ ಯಾರೋ ಬಂದು ಕಡ್ಡಿ ಅಲ್ಲಾಡಿಸೋದು ಬೇಡ. ನೌಕರರ ಸಂಬಳ ಕಡಿತ ಮಾಡಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಪರೋಕ್ಷವಾಗಿ ಕೋಡಿಹಳ್ಳಿ ಚಂದ್ರಶೇಖರ್‌ಗೆ ಟಾಂಗ್ ನೀಡಿದ್ದಾರೆ. 

ಆಪ್ತಮಿತ್ರ ಎಚ್‌ಡಿಕೆಯನ್ನು ಬಿಟ್ಟು ಸಿದ್ದು ಗರಡಿ ಸೇರಿದ್ದೇಕೆ ಜಮೀರ್ ಅಹ್ಮದ್..?

ಸಾರಿಗೆ ನೌಕರರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳ ಈಡೇರಿಕೆಗೆ ಅಸ್ತು ಎಂದಿದ್ದೇವೆ. ಇದಕ್ಕೊಂದು ಸಮಿತಿಯನ್ನೂ ಮಾಡಿ, ಸಮಿತಿ ನಾಲ್ಕೈದು ಸಭೆಗಳನ್ನೂ ಮಾಡಿದೆ. ಬೇಡಿಕೆ ಈಡೇರಿಕೆಗೆ ತ್ವರಿತ ಕ್ರಮ ಕೈಗೊಳ್ಳುತ್ತೇವೆ' ಎಂದು ಡಿಸಿಎಂ ಸವದಿ ಹೇಳಿದ್ದಾರೆ. 

Related Video