Belagavi: ರೂಬೆಲ್ಲಾ ಲಸಿಕೆ ಪಡೆದಿದ್ದ 3 ಮಕ್ಕಳ ನಿಗೂಢ ಸಾವು, ತನಿಖೆಗೆ ಡಿಸಿ ಆದೇಶ
ರೂಬೆಲ್ಲಾ ಲಸಿಕೆ ಪಡೆದಿದ್ದ ಮೂರು ಕಂದಮ್ಮಗಳು ನಿಗೂಢವಾಗಿ ಅಸುನೀಗಿರುವ ಮನಕಲಕುವ ಘಟನೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ (Belagavi Hospital) ನಡೆದಿದೆ. ಘಟನೆ ಬೆನ್ನಲ್ಲೇ ಎಚ್ಚೆತ್ತಿರುವ ಆರೋಗ್ಯ ಇಲಾಖೆ (Health Department) ತನಿಖೆಗೆ ಆದೇಶಿಸಿದೆ.
ಬೆಳಗಾವಿ (ಜ. 17): ರೂಬೆಲ್ಲಾ ಲಸಿಕೆ ಪಡೆದಿದ್ದ ಮೂರು ಕಂದಮ್ಮಗಳು ನಿಗೂಢವಾಗಿ ಅಸುನೀಗಿರುವ ಮನಕಲಕುವ ಘಟನೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ (Belagavi Hospital) ನಡೆದಿದೆ. ಘಟನೆ ಬೆನ್ನಲ್ಲೇ ಎಚ್ಚೆತ್ತಿರುವ ಆರೋಗ್ಯ ಇಲಾಖೆ (Health Department) ತನಿಖೆಗೆ ಆದೇಶಿಸಿದೆ.
Belagavi:ಸೆಪ್ಟಿಕ್ ಶಾಕ್ ಸಿಂಡ್ರೋಮ್‌ನಿಂದ ಮಕ್ಕಳ ಸಾವು ಎಂದು ವರದಿ, ಹೆಚ್ಚಿನ ತನಿಖೆಗೆ ಸರ್ಕಾರದ ಆದೇಶ
ಜಿಲ್ಲೆಯ ರಾಮದುರ್ಗ (Ramadurga) ತಾಲೂಕಿನ ಬೋಚಬಾಳ ಗ್ರಾಮದ ಪವಿತ್ರಾ ಹುಲಗೂರ (13 ತಿಂಗಳು), ಮಧು ಕರಗುಂದಿ (14 ತಿಂಗಳು) ಹಾಗೂ ಮಲ್ಲಾಪುರ ಗ್ರಾಮದ ಚೇತನ ಪೂಜಾರಿ (18 ತಿಂಗಳು) ಮೃತ ಕಂದಮ್ಮಗಳು. ತನಿಖೆಗೆ ಅದೇಶಿಸಿದ್ದೇವೆ. ವರದಿ ಬಳಿಕ ತಪ್ಪಿತಸ್ಥರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುತ್ತೇವೆ ಎಂದು ಡಿ ಸಿ ಹಿರೇಮಠ್ ಹೇಳಿದ್ದಾರೆ.