Belagavi: ಸೆಪ್ಟಿಕ್ ಶಾಕ್ ಸಿಂಡ್ರೋಮ್‌ನಿಂದ ಮಕ್ಕಳ ಸಾವು ಎಂದು ವರದಿ, ಹೆಚ್ಚಿನ ತನಿಖೆಗೆ ಸರ್ಕಾರದ ಆದೇಶ
ಸೆಪ್ಟಿಕ್ ಶಾಕ್ ಸಿಂಡ್ರೋಮ್‌ನಿಂದ (Septic Shock Syndrom) ಮಕ್ಕಳು ಸಾವನ್ನಪ್ಪಿದ್ದಾರೆಂದು ವರದಿ ಹೇಳಿದೆ. ಮಕ್ಕಳ ಸಾವಿನ ಬಗ್ಗೆ ಸರ್ಕಾರ ತನಿಖೆಗೆ ಆದೇಶ ನೀಡಿದೆ. ತನಿಖೆ ನಡೆಸಲು ನೊಡೇಲ್ ಆಫೀಸರ್ ಕಳುಹಿಸಲಾಗಿದ್ದು, 2 ದಿನಗಳೊಳಗಾಗಿ ವರದಿ ನೀಡುವಂತೆ ಹೇಳಲಾಗಿದೆ.
ಬೆಳಗಾವಿ (ಜ. 17): ರೂಬೆಲ್ಲಾ ಲಸಿಕೆ ಪಡೆದಿದ್ದ ಮೂರು ಕಂದಮ್ಮಗಳು ನಿಗೂಢವಾಗಿ ಅಸುನೀಗಿರುವ ಮನಕಲಕುವ ಘಟನೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ (Belagavi Hospital) ನಡೆದಿದೆ. ಘಟನೆ ಬೆನ್ನಲ್ಲೇ ಎಚ್ಚೆತ್ತಿರುವ ಆರೋಗ್ಯ ಇಲಾಖೆ (Health Department) ತನಿಖೆಗೆ ಆದೇಶಿಸಿದೆ.
Belagavi: ರೂಬೆಲ್ಲಾ ಲಸಿಕೆ ಪಡೆದಿದ್ದ 3 ಮಕ್ಕಳ ನಿಗೂಢ ಸಾವು, ತನಿಖೆಗೆ ಡಿಸಿ ಆದೇಶ
ಜಿಲ್ಲೆಯ ರಾಮದುರ್ಗ (Ramadurga) ತಾಲೂಕಿನ ಬೋಚಬಾಳ ಗ್ರಾಮದ ಪವಿತ್ರಾ ಹುಲಗೂರ (13 ತಿಂಗಳು), ಮಧು ಕರಗುಂದಿ (14 ತಿಂಗಳು) ಹಾಗೂ ಮಲ್ಲಾಪುರ ಗ್ರಾಮದ ಚೇತನ ಪೂಜಾರಿ (18 ತಿಂಗಳು) ಮೃತ ಕಂದಮ್ಮಗಳು.