
ಆನ್‌ಲೈನ್ ಕ್ಲಾಸ್ ರದ್ದು ಅಧಿಕೃತ ಆಗಿಲ್ಲ! ಸುರೇಶ್ ಕುಮಾರ್ ಕೊಟ್ರು ಸ್ಪಷ್ಟನೆ
- 1 ರಿಂದ 7ನೇ ತರಗತಿಯವರೆಗೆ ಆನ್‌ಲೈನ್ ಕ್ಲಾಸ್ ರದ್ದು ಎಂದ ಸಚಿವ ಜೆ.ಸಿ. ಮಾಧುಸ್ವಾಮಿ
- ಮಾಧುಸ್ವಾಮಿ ಮಾತು ತಿದ್ದಿದ ಶಿಕ್ಷಣ ಸಚಿವ ಸುರೇಶ್ ಕುಮಾರ್; ಕ್ಯಾಬಿನೆಟ್ ಸಚಿವರಲ್ಲೇ ಗೊಂದಲ
- ರದ್ದು ಅಧಿಕೃತ ಆಗಿಲ್ಲ ಎಂದು ಟ್ವೀಟ್ ಮಾಡಿದ ಸುರೇಶ್ ಕುಮಾರ್
ಬೆಂಗಳೂರು (ಜೂ. 11): 1 ರಿಂದ 7ನೇ ತರಗತಿಯವರೆಗೆ ಆನ್‌ಲೈನ್ ಕ್ಲಾಸ್ ರದ್ದು ಮಾಡಲಾಗಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ ಬೆನ್ನಲ್ಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ಓದಿ | ಸ್ಕೂಲ್ ಡೊನೇಷನ್ ಬೇಡ; ಸುವರ್ಣ ನ್ಯೂಸ್ ಅಭಿಯಾನಕ್ಕೆ ಕನ್ನಡ ಸಿನಿ ನಟರ ಸಾಥ್!...
ಮಾಧುಸ್ವಾಮಿ ಮಾತು ತಿದ್ದಿದ ಸುರೇಶ್ ಕುಮಾರ್, 5ನೇ ತರಗತಿವರೆಗೆ ಆನ್‌ಲೈನ್ ಕ್ಲಾಸ್ ರದ್ದು ಎಂಬುವುದು ನಿರ್ಧಾರವಾಗಿದೆ. ಆದರೆ 7ನೇ ತರಗತಿವರೆಗೆ ರದ್ದು ಮಾಡುವ ತೀರ್ಮಾನ ಆಗಿಲ್ಲ, ಅದು ಒಂದು ಸಲಹೆಯಷ್ಟೇ ಎಂದು ಹೇಳಿದ್ದಾರೆ.