Asianet Suvarna News Asianet Suvarna News

ಸುಪ್ರೀಂನಲ್ಲೂ ಸಿಗಲಿಲ್ಲ ‘ಕಾವೇರಿ’, ಸಿಎಂ, ಡಿಸಿಎಂಗೆ ನೋ 'ವರಿ'!

ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಹಾಗೂ ಪ್ರಾಧಿಕಾರಕ್ಕೆ ಮನವರಿಕೆ ಮಾಡುವುದರಲ್ಲಿಯೇ ಕರ್ನಾಟಕ ಸೋಲು ಕಾಣುತ್ತಿದ್ದರೆ, ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಮುಂದೇನು ಅನ್ನೋ ಗೊಂದಲ್ಲಿದ್ದಾರೆ.
 

ಬೆಂಗಳೂರು (ಸೆ.21): ಬರಗಾಲದ ಸೂಚನೆಯ ಮಧ್ಯೆ ಕರ್ನಾಟಕ್ಕೆ ಕಾವೇರಿಯಿಂದ ಶಾಕ್‌ ಸಿಕ್ಕಿದೆ. ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್‌ ನೀರು ಹರಿಸುವುವ ಪ್ರಾಧಿಕಾರದ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ಅದರಂತೆ ಮುಂದಿನ 15 ದಿನ 5 ಸಾವಿರ ಕ್ಯೂಸೆಕ್ಸ್‌ ನೀರು ಬಿಡಲು ಆದೇಶ ನೀಡಿದೆ.

ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ರಾಜ್ಯದ ಮಳೆಯ ವಾಸ್ತವಾಂಶದ ಬಗ್ಗೆ ಗಮನ ನೀಡುವ ಬದಲು ಗ್ಯಾರಂಟಿಗಳಿಗೆ ಹೆಚ್ಚಿನ ಗಮನ ನೀಡಿತ್ತು. ಅದರೊಂದಿಗೆ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್‌ಗೆ ರಾಜ್ಯದ ಪರಿಸ್ಥಿತಿಯನ್ನೂ ಮನವರಿಕೆ ಮಾಡುವ ಪ್ರಯತ್ನ ಮಾಡಲಿಲ್ಲ. ಅದರಿಂದ ಈಗ ಕಾವೇರಿ ನೀರು ಸಂಪೂರ್ಣವಾಗಿ ತಮಿಳುನಾಡಿಗೆ ಹರಿದುಹೋಗುವ ಅಪಾಯ ಎದುರಾಗಿದೆ.

ಸುಪ್ರೀಂ ಮುಂದೆ ವಾಸ್ತವ ಮನವರಿಕೆ ಮಾಡಲು ರಾಜ್ಯ ಸರ್ಕಾರ ವಿಫಲ: ಸಂಸದೆ ಸುಮಲತಾ ಅಂಬರೀಶ್

ಇನ್ನು ಸುಪ್ರೀಂ ಕೋರ್ಟ್‌ ಆದೇಶದ ಬೆನ್ನಲ್ಲಿಯೇ ಆಕ್ರೋಶ ಭುಗಿಲೆದ್ದಿದೆ. ಹಳೆ ಮೈಸೂರು ಜಿಲ್ಲೆಯಲ್ಲ ಪ್ರತಿಭಟನೆ ಕಿಚ್ಚು ಜೋರಾಗಿದೆ. ಕರ್ನಾಟಕ ಬಂದ್‌ ಭವಿಷ್ಯ ನಾಳೆ ನಿರ್ಧಾರವಾಗಲಿದೆ.

Video Top Stories