ಸುಪ್ರೀಂ ಮುಂದೆ ವಾಸ್ತವ ಮನವರಿಕೆ ಮಾಡಲು ರಾಜ್ಯ ಸರ್ಕಾರ ವಿಫಲ: ಸಂಸದೆ ಸುಮಲತಾ ಅಂಬರೀಶ್

ಕಾವೇರಿ ಜಲ ವಿವಾದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಈ ಬಾರಿ ರಿಲೀಫ್ ಕೊಡುವ ವಿಶ್ವಾಸ ಇತ್ತು.ಈ ತೀರ್ಪಿನಿಂದ ಮತ್ತೆ ಅನ್ಯಾಯ ಆಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದರು.

Cauvery water dispute MP Sumalatha ambarish statement at mandya rav

ಮಂಡ್ಯ (ಸೆ.21): ಕಾವೇರಿ ಜಲ ವಿವಾದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಈ ಬಾರಿ ರಿಲೀಫ್ ಕೊಡುವ ವಿಶ್ವಾಸ ಇತ್ತು.ಈ ತೀರ್ಪಿನಿಂದ ಮತ್ತೆ ಅನ್ಯಾಯ ಆಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದರು.

ಇಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್, ನೀರಾವರಿ ಅಧಿಕಾರಿಗಳು, ಕೃಷಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಪದೇಪದೆ ರಾಜ್ಯಕ್ಕೆ ಅನ್ಯಾಯವಾಗ್ತಿದೆ. ಯಾಕೆ ಹೀಗೆ ಆಗ್ತಿದೆ ಗೊತ್ತಿಲ್ಲ. ನಮಗೀಗ ಸುಪ್ರೀಂ ಆದೇಶ ಪಾಲಿಸುವ ಅನಿವಾರ್ಯತೆ ಇದೆ. ಈ ಪರಿಸ್ಥಿತಿಯಲ್ಲಿ ರಾಜಕೀಯ ಮಾತನಾಡಲ್ಲ. ಕಾವೇರಿ ವಿಚಾರದಲ್ಲಿ ಯಾರೂ ಮಧ್ಯಪ್ರವೇಶ ಮಾಡಲು ಆಗಲ್ಲ. ರೈತರಿಗೆ ಅನ್ಯಾಯ ಆಗಿದೆ. ಏನು ಉತ್ತರ ಕೊಡುವುದು? ಏನು ಕ್ರಮ ತೆಗೆದುಕೊಳ್ಳಬೇಕು ಎನ್ನುವುದನ್ನು ನಿರ್ಧಾರ ಮಾಡಬೇಕು ಎಂದರು.

ತಮಿಳುನಾಡಿಗೆ ಕಾವೇರಿ ನೀರು: ಸುಮತಲಾ- ಸಚಿವರ ವಾಕ್ಸಮರ

ಸುಪ್ರೀಂ ಮುಂದೆ ವಾಸ್ತವ ಮನವರಿಕೆ ಮಾಡಲು ವಿಫಲ:

ಇಂದು ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಅಧಿಕಾರಿಗಳ ಮಾತು ಕೇಳಿದ್ರೆ ಮತ್ತಷ್ಟು ಆತಂಕ ಆಗುತ್ತದೆ. ಕೃಷಿಗೆ ಇರಲಿ ಕುಡಿಯುವ ನೀರಿಗೂ ತೊಂದರೆ ಆಗುತ್ತದೆ ಎಂದು ಹೇಳಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಏನು ಮಾಡಬೇಕು? ಸಿಎಂ ಕರೆದಿದ್ದ 3 ಸಭೆಗೂ ನಾನು ಹೋಗಿದ್ದೇನೆ. ನನಗೆ ಇದ್ದ ಅನುಮಾನಗಳಿಗೆ ಕ್ಲಾರಿಟಿ ಕೇಳಿದ್ದೇವೆ. ಸುಪ್ರೀಂ ಮುಂದೆ ವಾಸ್ತವ ಮನವರಿಕೆ ಮಾಡಲು ವಿಫಲವಾಗ್ತಿದ್ದೇವೆ. ಬೇರೆ ರಾಜ್ಯದ ಅಧಿಕಾರಿಗಳ ಪ್ರಾಧಿಕಾರ ಸಭೆಗೆ ಹೋಗ್ತಾರೆ. ಆದರೆ ನಮ್ಮ ಅಧಿಕಾರಿಗಳು ವಿಡಿಯೋ ಕಾಲ್ ಮೂಲಕ ಭಾಗವಹಿಸುತ್ತಾರೆ. ಹೀಗೇ ಮಾಡಿದ್ರೆ ಅದರ ಪರಿಣಾಮ ಏನಿರುತ್ತದೆ. ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಇಂತಹ ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕೆಆರ್‌ಎಸ್‌ನಲ್ಲಿ ಕೇವಲ 20ಟಿಎಂಸಿ ನೀರು!

KRSನಲ್ಲಿ 20TMC ನೀರಿದೆ. ಅದರಲ್ಲಿ 4TMC ಡೆಡ್ ಸ್ಟೋರೇಜ್. ಉಳಿದ ನೀರಲ್ಲಿ ತಮಿಳುನಾಡಿಗೂ ನೀರು ನಮಗೂ ನೀರು ಉಳಿಸಿಕೊಳ್ಳಬೇಕು. ಮುಂದಿನ ವಾರ ಮಳೆ ಮುನ್ಸೂಚನೆ ಇದೆ.
ಅದೊಂದೇ ನಮ್ಮ ಮುಂದಿರುವ ಮಾರ್ಗ. ಮಳೆಯಾದರೆ ಸಮಸ್ಯೆ ಸ್ವಲ್ಪ ದೂರವಾಗಬಹುದು. ಡ್ಯಾಂಗಳ ಪರಿಶೀಲನೆಗೆ ಕೇಂದ್ರ ಸಚಿವರು ಭರವಸೆ ಕೊಟ್ಟಿದ್ದಾರೆ. ಕುಡಿಯುವ ನೀರು ಬಿಟ್ರೆ ಕೃಷಿಗೆ ನೀರು ಬಿಡಲು ಆಗಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಪರ ನಿಲ್ಲಬೇಕು. ರೈತರು ಈಗಾಗಲೇ ಪ್ರತಿಭಟನೆ ಮಾಡ್ತಿದ್ದಾರೆ. ಕುಡಿಯಲು ಮಾತ್ರ ನೀರು ಕೊಟ್ರೆ ಸರ್ಕಾರ ಕೂಡಲೇ ರೈತರಿಗೆ ಪರಿಹಾರ ಕೊಡಬೇಕು. ರೈತರು ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬೇಕು. ಆಗ ಇಂತಹ ಸಂಧರ್ಭದಲ್ಲಿ ನೆರವಾಗುತ್ತದೆ. ಆದರೆ ದುರಾದೃಷ್ಟವಶಾತ್ ಬಹಳಷ್ಟು ರೈತರು ವಿಮೆಗೆ ಮುಂದೆ ಬರಲ್ಲ. ಮಳೆ ಬಂದಾಗ ಕಷ್ಟದ ದಿನಗಳನ್ನ ಮರೆತುಬಿಡ್ತಾರೆ. ಆದರೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದರು.

ಯಾರೂ ಮಧ್ಯಪ್ರವೇಶ ಮಾಡಲು ಆಗಲ್ಲ:

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಇರಲಿ ರಾಜ್ಯ ಸರ್ಕಾರ ಇರಲಿ ಮಧ್ಯಪ್ರವೇಶ ಮಾಡಲು ಆಗಲ್ಲ. ಆದರೆ ಎರಡು ರಾಜ್ಯಗಳು ಪರಸ್ಪರ ಕುಳಿತು ಮಾತಮಾಡಿ ಬಗೆಹರಿಸಿಕೊಳ್ಳಬಹುದು.
ಲೀಗಲ್ ಆಕ್ಷನ್ ಆಗಲ್ಲ ಎಂದರೆ ಮಾತನಾಡಿ ಬಗೆಹರಿಸಬಹುದು. ಆದರೆ ನೀರು ಕೊಡಲ್ಲ ಎನ್ನಲಾಗಲ್ಲ ಆದರೆ ನಮ್ಮ ಅಗತ್ಯತೆಯನ್ನು ನೋಡಬೇಕು. ಶತ್ರು ರಾಷ್ಟ್ರ ಪಾಕಿಸ್ತಾನದ ಜೊತೆ ಮಾತನಾಡಿ ಬಗೆಹರಿಸಿಕೊಳ್ತಾರೆ. ಅದೇ ರೀತಿ ತಮಿಳುನಾಡು ಜೊತೆ ಯಾಕೆ ಮಾತನಾಡಲು ಆಗಲ್ಲ. ಈ ಸಮಸ್ಯೆ ಬಗೆಹರಿಸುವ ಪ್ರಯತ್ನ ಸರ್ಕಾರ ಮಾಡಬೇಕು. ಕಾವೇರಿ ವಿಚಾರ ಮಾತನಾಡು ಪಾರ್ಲಿಮೆಂಟ್‌ನಲ್ಲಿ ಅವಕಾಶ ಕೇಳಿದ್ದೇನೆ. ರೈತರ ಸಮಸ್ಯೆ ಬಗ್ಗೆ ಆದ್ಯತೆ ಮೇರೆಗೆ ಮಾತನಾಡಿದ್ದೇನೆ ಎಂದರು.

ಕಾವೇರಿಗಾಗಿ ಅಂಬರೀಶ್ ರಾಜೀನಾಮೆ ನೀಡಿದ್ದರು:

ಅಂಬರೀಶ್ ಕಾವೇರಿ ವಿಚಾರದಲ್ಲಿ ರಾಜಿನಾಮೆ ನೀಡಿದ್ರು. ಅದೇ ಹಾದಿಯಲ್ಲಿ, ನನ್ನ ವ್ಯಾಪ್ತಿಯಲ್ಲಿ ನಾನು ಏನು ಮಾಡಬಹುದು ಮಾಡ್ತೀನಿ. ರೈತರ ಸಲಹೆಗಳನ್ನು ಕೇಳ್ತೀನಿ. ರಾಜಕೀಯ ಬೆರೆಸದೆ ಈ ವಿಚಾರದಲ್ಲಿ ಸರ್ಕಾರದ ಜೊತೆ ನಿಲ್ಲಲು ಸಿದ್ಧ.ಇದು ಒಬ್ಬರ ಜವಾಬ್ದಾರಿ ಅಲ್ಲ ನಮ್ಮೆಲ್ಲರ ಜವಾಬ್ದಾರಿ. ರಾಜೀನಾಮೆ ವಿಚಾರ ಮಾತನಾಡುವ ಸಮಯವಲ್ಲ, ನಮ್ಮ ಜನರು ಮುಗ್ದರು ಇದ್ದಾರೆ ಮಾಹಿತಿ‌ ಇರಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡಲು ಸಾಧ್ಯವಿಲ್ಲ.ಕೇಂದ್ರದ ಬಳಿ‌ ಕೀ ಇದ್ದಿದ್ದರೆ ಈ ಹಿಂದೆ ಯಾಕೆ ಅಂಬರೀಶ್ ಯಾಕೆ ರಾಜೀನಾಮೆ ಕೊಡುತ್ತಿದ್ದರು. ಮಂಡ್ಯ ಜಿಲ್ಲೆಯ ಜನ ನನಗೆ ಮತ ಹಾಕಿದ್ದಾರೆ. ನನಗೆ ಜವಬ್ದಾರಿ ಕೊಟ್ಟಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಅಂತಹ ಪರಿಸ್ಥಿತಿ ಬಂದರೆ ರಾಜೀನಾಮೆ ಕೊಡಲು 2 ಸೆಕೆಂಡ್ ಕೂಡ ಯೋಚನೆ ಮಾಡುವುದಿಲ್ಲ.

ಬಿಜೆಪಿ-ಜೆಡಿಎಸ್ ಮೈತ್ರಿ: ಲೋಕಸಭಾ ಚುನಾವಣೆಯಲ್ಲಿ ಸುಮಲತಾರನ್ನು ಬೆಂಬಲಿಸುತ್ತಾ ಜೆಡಿಎಸ್?

ಸಚಿವ ಚಲುವರಾಯಸ್ವಾಮಿಗೆ ತಿರುಗೇಟು:

ರಾಜಕೀಯ ಟೀಕೆ ಯಾರೂ ಬೇಕಾದರೂ ಮಾಡಬಹುದು. ಪಿಎಂ ಭೇಟಿಗೆ ಅವರಿಗೆ ಅವಕಾಶ ಸಿಕ್ಕಿಲ್ಲ ಯಾಕೆ ಅಂತ ಗೊತ್ತಿಲ್ಲ. ಪಿಎಂ ಅವರು ನನಗೆ ಸಮಯ ಕೊಟ್ಟಿದ್ದರು. ಮಂಡ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದೇನೆ. ಫೋಟೊ ಗೆ ಫೋಸ್ ಕೊಡಲು ಹೋಗಿರಲಿಲ್ಲ. ಪಿಎಂ ಅವರು ಬಿಡುವಿಲ್ಲದ  ಸಮಯದಲ್ಲೂ ನನ್ನೊಂದಿಗೆ ಮಾತನಾಡಿದ್ದಾರೆ. ಫೋಟೋ‌ ಪೋಸ್ ಕೊಡುವ ಅವಶ್ಯಕತೆ ನನಗೆ ಇಲ್ಲ ಎಂದು ತಿರುಗೇಟು ನೀಡಿದರು. ಇದೇ ವೇಳೆ ಕಾವೇರಿ ವಿಚಾರದಲ್ಲಿ ನಟ ಮೌನದ ವಿಚಾರ ಪ್ರಸ್ತಾಪಿಸಿದರು. ನಟರು ರಾಜ್ಯದ ಪರ ನಿಲ್ಲುತ್ತಾರೆ. ಸುಮ್ಮನೆ ಕಾಂಟ್ರವರ್ಸಿ ಮಾಡಬಾರದು. ಮಾತಾಡಲಿಲ್ಲವೆಂದರೆ ಅವರು ವಿರೋಧ ಇದ್ದಾರೆ ಎಂದರ್ಥವಲ್ಲ ಎನ್ನುವ ಮೂಲಕ ನಟರ ಮೌನ ಸಮರ್ಥಿಸಿಕೊಂಡರು.

Latest Videos
Follow Us:
Download App:
  • android
  • ios