Asianet Suvarna News Asianet Suvarna News

ಈ ಬಾರಿ ಲಾಕ್‌ಡೌನ್ ಫುಲ್‌ ಸ್ಟ್ರಿಕ್ಟ್‌; ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಕೇಸ್..!

ಕೊರೊನಾ ಸೋಂಕು ತಡೆಯಲು ಈಗಾಗಲೇ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ವಾರ ಲಾಕ್‌ಡೌನ್ ಘೋಷಿಸಲಾಗಿದೆ.  ಈ ಬಾರಿಯ ಲಾಕ್‌ಡೌನ್ ಸಿಕ್ಕಾಪಟ್ಟೆ ಸ್ಟ್ರಿಕ್ಟ್‌ ಆಗಿರುತ್ತದೆ. ಮನೆ ಬಿಟ್ಟು ಹೊರಗೆ ಸುಖಾಸುಮ್ಮನೆ ತಿರುಗಾಡುತ್ತಿದ್ದರೆ ಲಾಠಿ ಏಟು ತಿನ್ನಬೇಕಾಗುತ್ತದೆ. ಶಿಸ್ತುಕ್ರಮ ಕೈಗೊಳ್ಳುತ್ತೇವೆ' ಎಂದು ಗೃಹ ಸಚಿವ ಬೊಮ್ಮಾಯಿ ಸುವರ್ಣ ನ್ಯೂಸ್‌ಗೆ ಹೇಳಿದ್ದಾರೆ. 

ಬೆಂಗಳೂರು (ಜು. 13): ಕೊರೊನಾ ಸೋಂಕು ತಡೆಯಲು ಈಗಾಗಲೇ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ವಾರ ಲಾಕ್‌ಡೌನ್ ಘೋಷಿಸಲಾಗಿದೆ.  ಈ ಬಾರಿಯ ಲಾಕ್‌ಡೌನ್ ಸಿಕ್ಕಾಪಟ್ಟೆ ಸ್ಟ್ರಿಕ್ಟ್‌ ಆಗಿರುತ್ತದೆ. ಮನೆ ಬಿಟ್ಟು ಹೊರಗೆ ಸುಖಾಸುಮ್ಮನೆ ತಿರುಗಾಡುತ್ತಿದ್ದರೆ ಲಾಠಿ ಏಟು ತಿನ್ನಬೇಕಾಗುತ್ತದೆ. ಶಿಸ್ತುಕ್ರಮ ಕೈಗೊಳ್ಳುತ್ತೇವೆ' ಎಂದು ಗೃಹ ಸಚಿವ ಬೊಮ್ಮಾಯಿ ಸುವರ್ಣ ನ್ಯೂಸ್‌ಗೆ ಹೇಳಿದ್ದಾರೆ. 

ಕಳೆದ ಬಾರಿ ಲಾಕ್‌ಡೌನ್ ವೇಳೆ ಸೋಂಕಿತರ ಪ್ರಮಾಣ ಕಡಿಮೆ ಇದ್ದ ಕಾರಣ ಹಲವು ವಿನಾಯ್ತಿ ನೀಡಲಾಗಿತ್ತು. ಪರಿಣಾಮ ಜನದಟ್ಟನೆ ಇತ್ತು. ಇದೀಗ ಕಠಿಣ ಕ್ರಮ ಲಾಕ್‌ಡೌನ್ ಇರಲಿದ್ದು ಸರ್ಕಾರದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವಾರದ ಲಾಕ್‌ಡೌನ್ ಯಶಸ್ವಿಗೊಳಿಸುವುದು ಜನರ ಕೈಯಲ್ಲಿದೆ. ಜನತೆ ಸಹಕಾರ ನೀಡಬೇಕು ಎಂದಿದ್ದಾರೆ. 

ಮೈಸೂರು: ಡಿಸಿ ಜೊತೆ ಚರ್ಚಿಸಿ ಲಾಕ್‌ಡೌನ್ ನಿರ್ಧಾರ, ಸಚಿವ ಎಸ್‌ಟಿಎಸ್‌