Asianet Suvarna News Asianet Suvarna News

ಮೈಸೂರು: ಡಿಸಿ ಜೊತೆ ರ್ಚಿಸಿ ಲಾಕ್‌ಡೌನ್ ನಿರ್ಧಾರ, ಸಚಿವ ಎಸ್‌ಟಿಎಸ್‌

ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡ ಸಚಿವ ಸೋಮಶೇಖರ್| ಕೋವಿಡ್ ನಿಯಂತ್ರಣ, ನೀರಾವರಿ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ| ಮೈಸೂರಿನಲ್ಲಿ ಕಂಡುಬಂದ ಪ್ರಕರಣಗಳಲ್ಲಿ ಶೇ. 50 ಪ್ರಕರಣ ನರಸಿಂಹರಾಜ ಕ್ಷೇತ್ರದ ಪ್ರದೇಶಗಳಲ್ಲೇ ಪತ್ತೆ|

Minister S T Somashekhar Talks Over Mysuru District Lockdown
Author
Bengaluru, First Published Jul 13, 2020, 3:16 PM IST

ಬೆಂಗಳೂರು(ಜು.13): ಸರ್ಕಾರ ಹಾಗೂ ಜನಪ್ರತಿನಿಧಿಗಳು ಸಾರ್ವಜನಿಕರ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಬಗ್ಗೆ ಮೊದಲು ಸಂದೇಶವನ್ನು ಕೊಡಬೇಕು. ಅವರ ಆರೋಗ್ಯದ ಸಮಸ್ಯೆಗಳಿದ್ದಲ್ಲಿ ತುರ್ತು ಸಂಪರ್ಕಕ್ಕೆ ಅಗತ್ಯ ಕ್ರಮ ವಹಿಸಬೇಕು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜರಾಜಶ್ವರಿ ನಗರ ವಲಯ ಉಸ್ತುವಾರಿ ಸಚಿವ  ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. 

ಅವರು ಇಂದು(ಸೋಮವಾರ) ರಾಜರಾಜೇಶ್ವರಿ ನಗರದ ಬಿಬಿಎಂಪಿ ಕಚೇರಿಯಲ್ಲಿ ರಾಜರಾಜೇಶ್ವರಿ ನಗರ ವಲಯದ ವಾರ್ಡ್ ಗಳ ಕಾರ್ಪೋರೇಟರ್ ಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ತಮಗೆ ಯಾವುದೇ ಸಮಸ್ಯೆ ಇದ್ದರೂ ನಮಗೆ ತಿಳಿಸಿಕೊಟ್ಟರೆ ನಾವು ಪರಿಹರಿಸುತ್ತೇವೆ. ಅಧಿಕಾರಿಗಳು ನಮ್ಮ ಗಮನಕ್ಕೆ ತರದಿದ್ದರೆ ನಮಗೆ ತಿಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು. 

ಮೈಸೂರು: ಮಾಜಿ ಸಚಿವ ವಿಶ್ವನಾಥ್ ಮೊಮ್ಮಗ ಸಾವು

ಕೋವಿಡ್ ಪ್ರಕರಣಗಳ ನಿಯಂತ್ರಣ ಮಾಡಲೇಬೇಕಿದ್ದು, ಇದಕ್ಕೋಸ್ಕರ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಸಮುದಾಯಕ್ಕೆ ಸೋಂಕು ಹರಡುವ ಸಾಧ್ಯತೆ ಇದ್ದು, ಇಂಥ ಪರಿಸ್ಥಿತಿಗೆ ಹೋಗಲು ಬಿಡಬಾರದು ಎಂದು ಸಚಿವರು ಸೂಚನೆ ನೀಡಿದರು. 

Minister S T Somashekhar Talks Over Mysuru District Lockdown

ಸಾರ್ವಜನಿಕರು ಆತಂಕಗೊಳ್ಳುವ ಪರಿಸ್ಥಿತಿ ಯಾವುದೇ ಕಾರಣಕ್ಕೂ ಬರಕೂಡದು. ಅವರ ಅಗತ್ಯಗಳಿಗೆ ತಕ್ಷಣ ಸ್ಪಂದಿಸುವ ಕೆಲಸವಾಗಬೇಕು. ಜೊತೆಗೆ ತಕ್ಷಣ ಮಾಹಿತಿಗಳ ರವಾನೆ ಆಗಬೇಕಿದೆ ಎಂದು ಸಚಿವರು ತಿಳಿಸಿದರು. 
ಆರ್ ಆರ್ ನಗರ ಹಾಗೂ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದು ಬೇಕು ಎಂಬ ಬಗ್ಗೆ ಮಾಹಿತಿ ಕೊಟ್ಟರೆ ನೂರಕ್ಕೆ ನೂರು ಒದಗಿಸಿಕೊಡುವ ಮೂಲಕ ಸೌಲಭ್ಯವನ್ನು ಕಲ್ಪಿಸಿಕೊಡಲಾಗುವುದು ಎಂದು ಸಚಿವರು ತಿಳಿಸಿದರು.
ಸಾರ್ವಜನಿಕರಿಗೆ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಯಾರನ್ನು ಸಂಪರ್ಕ ಮಾಡಬೇಕು ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಪಟ್ಟಿಯನ್ನು ಸಿದ್ಧಪಡಿಸಿ ನಮಗೆ ಕೊಟ್ಟರೆ ನಾವೂ ಸಹ ಅದನ್ನು ಜಾಹೀರಾತುಗಳ ಮೂಲಕ ಮಾಹಿತಿಯನ್ನು ನೀಡುತ್ತೇವೆ ಎಂದು ಸಚಿವರು ತಿಳಿಸಿದರು. 

ಆರ್ ಆರ್ ನಗರ ವ್ಯಾಪ್ತಿಯ ವಾರ್ಡ್ ಗಳ ರಸ್ತೆಗಳಲ್ಲಿ ಸ್ಯಾನಿಟೈಸ್ ಮಾಡಬೇಕಾದಲ್ಲಿ ಎಲ್ಲರ ಗಮನಕ್ಕೆ ತರುವುದು ಉತ್ತಮ. ಕಂಟೈನ್ಮೆಂಟ್ ಝೋನ್ ಹಾಗೂ ಮೈಕ್ರೋ ಕಂಟೈನ್ಮೆಂಟ್ ಝೋನ್ ಮಾಡಬೇಕು. ಅಲ್ಲದೆ, ಸಾರ್ವಜನಿಕರ ಬಳಿ ಸೌಮ್ಯ ರೀತಿಯಲ್ಲೇ ಮನವಿ ಮಾಡಿ ಸ್ಪಂದಿಸುವಂತೆ ಮೊದಲಿಗೆ ಮನವಿ ಮಾಡುವುದು, ಅದಕ್ಕೂ ಕೇಳದಿದ್ದಲ್ಲಿ ಹಾಗೂ ಪರಿಸ್ಥಿತಿ ಕೈಮೀರುವ ಹಂತ ತಲುಪುತ್ತದೆ ಎಂಬ ಸುಳಿವು ಸಿಕ್ಕರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬಿತ್ಯಾದಿ ಸಲಹೆಗಳನ್ನು ಈ ಭಾಗದ ಪಾಲಿಕೆ ಸದಸ್ಯರು ನೀಡಿದರು. 

ಬಳಿಕ ಮಾತನಾಡಿದ ಮಾಜಿ ಶಾಸಕರು, ಬಿಜೆಪಿ ಮುಖಂಡರಾದ ಮುನಿರತ್ನ ಮಾತನಾಡಿ, ಬಿಬಿಎಂಪಿ ಅಧಿಕಾರಿಗಳಿರಬಹುದು, ಉಳಿದ ಅಧಿಕಾರಿಗಳು ಇರಬಹುದು ನಿಮ್ಮ ಮನೆಯಲ್ಲೇ ಯಾರಿಗಾದರೂ ಸೋಂಕು ಕಾಣಿಸಿಕೊಂಡರೆ ಯಾವ ರೀತಿ ಕೆಲಸ ಮಾಡುತ್ತೀರಿ ಎಂಬುದನ್ನು ಗಮನದಲ್ಲಿಟ್ಟು ಕೆಲಸ ಮಾಡಿ. ಜೀವದ ಬೆಲೆ ಅರ್ಥಮಾಡಿಕೊಳ್ಳಬೇಕು, ಒಂದು ಕುಟುಂಬದಲ್ಲಿ ವ್ಯಕ್ತಿಯೊಬ್ಬ ಇಲ್ಲದಿದ್ದರೆ ಹೇಗಾಗುತ್ತದೆ. ಹೀಗಾಗಿ ಇದನ್ನು ವೃತ್ತಿ ಎಂದುಕೊಳ್ಳದೆ ಸೇವೆ ಎಂದು ತಿಳಿದು ಕೆಲಸ ಮಾಡಿ ನ್ಯಾಯ ಒದಗಿಸಿ ಎಂದು ಮನವಿ ಮಾಡಿದರು.  ಈ ವೇಳೆ ಐಎಎಸ್ ಅಧಿಕಾರಿ ಹಾಗೂ ರಾಜರಾಜೇಶ್ವರಿ ನಗರ ವಲಯ ಕೋವಿಡ್ ನಿಯಂತ್ರಣ ವಿಭಾಗದ ಮುಖ್ಯಸ್ಥರಾದ ವಿಶಾಲ್ , ರಾಜರಾಜೇಶ್ವರಿ ವಲಯದ ಎಲ್ಲ ಕಾರ್ಪೊರೇಟರ್ ಗಳು ಉಪಸ್ಥಿತರಿದ್ದರು.

ಕೆಳ ಮಹಡಿಯಲ್ಲಿ ಮಸಾಜ್‌ ಪಾರ್ಲರ್‌, ಮೇಲ್ ಮಹಡಿಯಲ್ಲಿ ಸೆಕ್ಸ್ ದಂಧೆ!

ನರಸಿಂಹರಾಜ ಕ್ಷೇತ್ರ ಲಾಕ್ ಡೌನ್ ಗೆ ಚಿಂತನೆ; ಸಚಿವ ಎಸ್ ಟಿ ಎಸ್ 

ಮೈಸೂರಿನಲ್ಲಿ ಕಂಡುಬರುತ್ತಿರುವ ಕೋವಿಡ್ 19 ಪ್ರಕರಣಗಳಲ್ಲಿ ಹೆಚ್ಚಿನವು ನರಸಿಂಹರಾಜ ಕ್ಷೇತ್ರದ ನಾಗರಿಕರಲ್ಲಿಯೇ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಇದೊಂದು ಭಾಗವನ್ನು ಲಾಕ್ ಡೌನ್ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. 

ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರ ನೈತೃತ್ವದಲ್ಲಿ ಕೋವಿಡ್-19 ನಿಯಂತ್ರಣ, ನೀರಾವರಿ, ಪ್ರಹಾವ ಪರಿಸ್ಥಿತಿ ನಿಭಾಯಿದುವ ಸಂಬಂಧ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಸಚಿವರು, ಮೈಸೂರು ಜಿಲ್ಲೆಯ ನರಸಿಂಹರಾಜ ಕ್ಷೇತ್ರದಲ್ಲಿ ಸ್ವಲ್ಪ ಸಮಸ್ಯೆಯಾಗುತ್ತಿದೆ. ಅಲ್ಲಿಯೇ ಶೇ. 50 ರಷ್ಟು ಪ್ರಕರಣಗಳು ಕಂಡುಬರುತ್ತಿದೆ. ಅಲ್ಲಿ ಕೊನೇ ಕ್ಷಣದವರೆಗೂ ಪರಿಕ್ಷೆಗೆ ಬಾರದೆ, ಆರೋಗ್ಯ ತೀವ್ರ ಹದಗೆಟ್ಟ ಮೇಲೆ ಬರುತ್ತಿದ್ದಾರೆ. ಹೀಗಾಗಿ ಈ ಭಾಗವನ್ನು ಮಾತ್ರ ಲಾಕ್ ಡೌನ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಈ ಕ್ಷೇತ್ರದ ನಾಗರಿಕರನ್ನು ಹೆಚ್ಚಿನ ರೀತಿಯಲ್ಲಿ ಪರೀಕ್ಷೆಗೊಳಪಡಿಸಿ ಪರಿಸ್ಥಿತಿ ಇನ್ನೂ ಕೈಮೀರಿ ಹೋಗದಂತೆ ತಡೆ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. 
ನೀರಾವರಿಗೆ ಸಂಬಂಧಪಟ್ಟಂತೆ ಯಾವುದೇ ಯಾವುದೇ ಸಮಸ್ಯೆ ಸದ್ಯದ ಪರಿಸ್ಥಿತಿಯಲ್ಲಿ ಇಲ್ಲ. ಇನ್ನು ರಸಗೊಬ್ಬರದ ಕೊರತೆಯೂ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಬಿತ್ತನೆ ಪ್ರಕ್ರಿಯೆಯೂ ನಡೆಯುತ್ತಿದೆ. ಪ್ರವಾಹದಂತಹ ಪರಿಸ್ಥಿತಿ ಎದುರಾದರೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. 

ಮೈಸೂರು ಜಿಲ್ಲೆಯ ಆಸ್ಪತ್ರೆಗಳಲ್ಲಿ ಡಿ ಗ್ರೂಪ್ ಸಿಬ್ಬಂದಿಯ ಕೊರತೆ ಇದ್ದು ನೇಮಕಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳ ಶೀಘ್ರವಾಗಿ ಕ್ರಮ ಕೈಗೊಂಡು ವ್ಯವಸ್ಥೆ ಮಾಡಿಕೊಡಬೇಕು ಎಂದು ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು. 

Minister S T Somashekhar Talks Over Mysuru District Lockdown

ಜಿಲ್ಲಾಧಿಕಾರಿಗಳಾದ ಅಭಿರಾಂ ಜಿ. ಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ 19 ಗೆ ಸಂಬಂಧಪಟ್ಟಂತೆ ಈ ವರೆಗೆ 38 ಸಾವು ಸಂಭವಿಸಿದೆ. ಆದರೆ ಅದರಲ್ಲಿ 37 ಸಾವುಗಳು ಕಳೆದ 15 ದಿನಗಳಲ್ಲಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ರೀತಿಯ ನಿಗಾ ವಹಿಸಲಾಗಿತ್ತಿದೆ. ಬೆಡ್ ಗಳ ವ್ಯವಸ್ಥೆಯನ್ನು ಸಹ ಹೆಚ್ಚು ಮಾಡಲಾಗಿದೆ. ಜೊತೆಗೆ 2 ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರ ಜೊತೆಯೂ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

ನೀರಾವರಿ ಸಮಸ್ಯೆ ಸದ್ಯಕ್ಕೆ ತಲೆದೋರಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಉತ್ತಮವಾಗಿದೆ. ಈಗಾಗಲೇ ಶೇ. 65 ರಷ್ಟು ಬಿತ್ತನೆಯಾಗಿದೆ. ಇನ್ನು ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ತಿಂಗಳು ಎನ್ ಡಿ ಆರ್ ಎಫ್ ತಂಡ ಜಿಲ್ಲೆಗೆ ಭೇಟಿ ನೀಡಿ ಕಳೆದ ಬಾರಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದ ಕಡೆಗಳಲ್ಲಿ ಯಾವ ರೀತಿಯಾಗಿ ನಿಭಾಯಿಸಬೇಕು ಎಂಬ ಬಗ್ಗೆ ಸ್ಥಳೀಯ ಪೊಲೀಸ್, ಗ್ರಾಪಂ ಸಿಬ್ಬಂದಿ ಸೇರಿದಂತೆ ಹಲವರಿಗೆ ತರಬೇತಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಮೈಸೂರು ಜಿಲ್ಲೆಯಲ್ಲಿ 773 ಸೋಂಕಿತರ ಸಂಖ್ಯೆ ಕಂಡುಬಂದಿದ್ದು, ಹಾಲಿ 388 ಸಕ್ರಿಯ ಪ್ರಕರಣಗಳು ಇವೆ ಎಂದು ಮಾಹಿತಿ ನೀಡಲಾಯಿತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಹಾಗೂ ಪೊಲೀಸ್ ಆಯುಕ್ತರಾದ ಚಂದ್ರಗುಪ್ತ ಇದ್ದರು. 

News In 100 Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

Follow Us:
Download App:
  • android
  • ios