ರೈತರಿಗೆ ಬೆಂಬಲ ಬೆಲೆಯಿಲ್ಲ, ಬಡವರ ಬಗ್ಗೆ ಚಿಂತನೆಯಿಲ್ಲ, ಇದ್ಯಾವ ಸೀಮೆ ಪ್ಯಾಕೆಜ್ರಿ.?
- ಒತ್ತಡಕ್ಕೆ ಮಣಿದು ಪ್ಯಾಕೇಜ್ ಘೋಷಿಸಲಾಗಿದೆ
- 1 ವರ್ಷ ರೈತರ ಸಾಲ ಮನ್ನಾ ಮಾಡಲಿ
- ಬಡವರ ಬಗ್ಗೆ ಸರ್ಕಾರಕ್ಕೆ ಚಿಂತನೆಯೇ ಇಲ್ಲ: ಡಿಕೆಶಿ
ಬೆಂಗಳೂರು (ಮೇ. 19): ಸಿಎಂ ಯಡಿಯೂರಪ್ಪ 1250 ಕೋಟಿ ರೂ ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರು, ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ರೂ ಸಹಾಯ ಧನ ಘೋಷಿಸಿದ್ದಾರೆ. ಈ ಪ್ಯಾಕೇಜ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾಕ್‌ಡೌನ್ ಸಂಕಷ್ಟ: ಬಡಜನರ ಹೊಟ್ಟೆ ತುಂಬಿಸ್ತಿದ್ದಾರೆ ಶಿವಣ್ಣ
' ಸರ್ಕಾರ ಘೋಷಿಸಿರುವ ಮೊತ್ತ ಬಹಳ ಕಡಿಮೆಯಾಗಿದೆ. ಇದರಿಂದ ಏನೂ ಪ್ರಯೋಜನ ಇಲ್ಲ. ರೈತರಿಗೆ ಬೆಂಬಲ ಬೆಲೆ ಘೋಷಿಸಿಲ್ಲ, ಬಡ್ಡಿ ಮನ್ನಾ ಮಾಡಿಸಿಲ್ಲ, ಗ್ರಾಮೀಣ ಭಾಗದಲ್ಲಿ ಕೊರೊನಾ ವಾರಿಯರ್ಸ್ ಕೆಲಸ ಮಾಡುತ್ತಿರುವವರ ಬಗ್ಗೆ ಪ್ರಸ್ತಾಪವಿಲ್ಲ, ಇದ್ಯಾವ ರೀತಿ ಪ್ಯಾಕೇಜ್ ಗೊತ್ತಾಗ್ತಿಲ್ಲ. ನಮಗೆ ಸಮಾಧಾನ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.