ಸಾಲದ ಕಂತು ಮುಂದೂಡಿಕೆ, 3 ತಿಂಗಳ ಬಡ್ಡಿ ಪಾವತಿ ಚಿಂತೆ ಬಿಟ್ಬಿಡಿ..!
- ಒಟ್ಟು 1250 ಕೋಟಿ ರೂ ಮೊತ್ತದ ವಿಶೇಷ ಪ್ಯಾಕೇಜ್ ಘೋಷಣೆ
- ಸಹಕಾರಿ ಸಂಘಗಳಿಂದ ಪಡೆದ ಸಾಲದ ಕಂತು ಮುಂದೂಡಿಕೆ, ಸರ್ಕಾರದಿಂದಲೇ 3 ತಿಂಗಳ ಬಡ್ಡಿ ಪಾವತಿ
- ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರು, ಕಟ್ಟಡ ಕಾರ್ಮಿಕರಗೆ ತಲಾ 3 ಸಾವಿರ ರೂ ಸಹಾಯ ಧನ
ಬೆಂಗಳೂರು (ಮೇ. 19): ಸಿಎಂ ಯಡಿಯೂರಪ್ಪ ಕೊರೊನಾದಿಂದ ಕಂಗಾಲಾದವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಒಟ್ಟು 1250 ಕೋಟಿ ರೂ ಮೊತ್ತದ ಪ್ಯಾಕೇಜ್ ಇದು. ಹಣ್ಣು- ತರಕಾರಿ ಬೆಳೆಗಾರರಿಗೆ 10 ಸಾವಿರ ರೂ, ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರು, ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ರೂ ಸಹಾಯ ಧನ, ಬಿಪಿಎಲ್ ಕಾರ್ಡ್‌ದಾರರಿಗೆ ತಲಾ 10 ಕೆಜಿ ಅಕ್ಕಿ, ಎಪಿಎಲ್ ಕಾರ್ಡ್‌ದಾರರಿಗೆ 15 ರೂ ನಂತೆ 5 ಕೆಜಿ ಅಕ್ಕಿ, ಸಹಕಾರಿ ಸಂಘಗಳಿಂದ ಪಡೆದ ಸಾಲದ ಕಂತು ಮುಂದೂಡಿಕೆ, ಸರ್ಕಾರದಿಂದಲೇ 3 ತಿಂಗಳ ಬಡ್ಡಿ ಪಾವತಿ ಸೇರಿದಂತೆ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಪ್ಯಾಕೇಜ್ ನೀಡಿದ್ದಾರೆ ಸಿಎಂ.
ಕೊರೊನಾ ಸಂಕಷ್ಟ, 1250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ, ಯಾರಿಗೆಷ್ಟು ಪರಿಹಾರ?