
ಎರಡು ವರ್ಷ... ಎರಡು ಗ್ಯಾಂಗ್.. ಒಂದೇ ತಲೆಬುರುಡೆ: ಬುರುಡೆ ಗ್ಯಾಂಗ್ ಷಡ್ಯಂತ್ರ ಸರ್ಕಾರಕ್ಕೆ ಮೊದಲೇ ಗೊತ್ತಿತ್ತಾ?
ತಿಮರೋಡಿ ಮನೆಯಲ್ಲಿ ಸಭೆ ಸೇರಿ ಧರ್ಮಸ್ಥಳದ ವಿರುದ್ದ ಪಿತೂರಿ ನಡೆಸಲಾಗಿತ್ತು. ಧರ್ಮಸ್ಥಳಕ್ಕೆ ಹೇಗೆಲ್ಲಾ ಕಪ್ಪು ಮಸಿ ಬಳಿಯಬೇಕೆಂದು ಮುಹೂರ್ತ ಇಡಲಾಗಿತ್ತು. ತೀರ್ಪಿನ ಬಳಿಕ ಕಾನೂನು ಹೋರಾಟ ಹೇಗೆ ಎಂದು ಮೀಟಿಂಗ್ ನಡೆದಿತ್ತು.
ಜೂನ್ 16,2023ಕ್ಕೆ ಸಿಬಿಐ ಕೋರ್ಟ್ ಸೌಜನ್ಯ ಪ್ರಕರಣದ ತೀರ್ಪು ಬಂತು. ಸೌಜನ್ಯ ಕೇಸ್ ಅಂತಿಮ ತೀರ್ಪಿನ ಬಳಿಕ ತಿಮರೋಡಿ ಟೀಂ ಸಭೆ ನಡೆಸಿತ್ತು. ತಿಮರೋಡಿ ಮನೆಯಲ್ಲಿ ಸಭೆ ಸೇರಿ ಧರ್ಮಸ್ಥಳದ ವಿರುದ್ದ ಪಿತೂರಿ ನಡೆಸಲಾಗಿತ್ತು. ಧರ್ಮಸ್ಥಳಕ್ಕೆ ಹೇಗೆಲ್ಲಾ ಕಪ್ಪು ಮಸಿ ಬಳಿಯಬೇಕೆಂದು ಮುಹೂರ್ತ ಇಡಲಾಗಿತ್ತು. ತೀರ್ಪಿನ ಬಳಿಕ ಕಾನೂನು ಹೋರಾಟ ಹೇಗೆ ಎಂದು ಮೀಟಿಂಗ್ ನಡೆದಿತ್ತು. ಸಂತೋಷ್ರಾವ್ ಬಿಟ್ಟು ಧರ್ಮಸ್ಥಳದೆಡೆ ಬೊಟ್ಟು ಮಾಡಲು ಸಂಚು ರೂಪಿಸಿದ್ದರು.
ಮಹೇಶ್ ತಿಮರೋಡಿ ಮನೆಗೆ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಭೇಟಿಯಾಗಿದ್ದು, ಅಂದು ಸ್ಟಾನ್ಲಿ ಜೊತೆಗೆ ಒಡನಾಡಿಯ ಪರಶುರಾಮ್ ಕೂಡಾ ಇದ್ದರು. ತಿಮರೋಡಿ ಮನೇಲಿ ಸುದೀರ್ಘವಾಗಿ ಸ್ಟ್ಯಾನ್ಲಿ, ತಿಮರೋಡಿ ಚರ್ಚೆ ನಡೆಸಿದ್ದರು. ಸೌಜನ್ಯ ಹೋರಾಟ ಕಾನೂನುಬದ್ಧವಾಗಿ ಮುಂದುವರೆಸಲು ತೀರ್ಮಾನ ಮಾಡಲಾಗಿತ್ತು. ಸೌಜನ್ಯಾ ಪರ ಹೋರಾಟಕ್ಕೆ ಒಡನಾಡಿ ಸಂಸ್ಥೆ ಬೆಂಬಲ ಘೋಷಿಸಿದ್ದರು. ಭೇಟಿ ಬಳಿಕ ಹಲವು ಪ್ರತಿಭಟನೆಗಳನ್ನು ತಿಮರೋಡಿ & ಸ್ಟ್ಯಾನ್ಲಿ ನಡೆಸಿದ್ದರು. ಅಲ್ಲದೇ ನಿರಂತರವಾಗಿ ಧರ್ಮಸ್ಥಳ ಹಾಗೂ ವಿರೇಂದ್ರ ಹೆಗ್ಡೆ ವಿರುದ್ದ ಪ್ರತಿಭಟನೆ ನಡೆಸಲಾಗಿತ್ತು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.