
ಆಯುಧಗಳಿಗೂ ಪೂಜೆ ಮಾಡೋ ಪದ್ಧತಿ ಬಂದಿದ್ದು ಹೇಗೆ?: ಶತಮಾನದ ಹಿಂದೆ ಹೇಗಿತ್ತು ದಸರಾ ವೈಭವ?
ಜಗತ್ಪ್ರಸಿದ್ಧ ದಸರಾ ಹಬ್ಬದಲ್ಲಿ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ. ದೇವತೆಗಳ ಆರಾಧನೆಯ ಸಮಯದಲ್ಲಿ ಆಯುಧಗಳನ್ನು ಏಕೆ ಪೂಜಿಸಲಾಗುತ್ತದೆ ಮತ್ತು ಆ ಆಯುಧಗಳೇ ದೈವಸ್ವರೂಪ ಎನ್ನುವುದರ ಹಿಂದಿರುವ ದೈವಾಯುಧ ರಹಸ್ಯದ ಬಗ್ಗೆ ಇಲ್ಲಿದೆ ಡಿಟೇಲ್.
ನಮಸ್ಕಾರ ವೀಕ್ಷಕರೇ.. ಕರುನಾಡಿನ ಹೆಮ್ಮೆಯ ಸಂಭ್ರಮದ ಆಚರಣೆ ದಸರಾ.. ಈ ಜಗತ್ಪ್ರಸಿದ್ಧ ದಸರಾದ ಹಿಂದೆ ನಮಗೆ ಗೊತ್ತಿಲ್ಲದ ಅದೆಷ್ಟೋ ವಿಚಾರಗಳು ಅಡಕವಾಗಿವೆ.. ಅವೆಲ್ಲವುಗಳನ್ನು ಒಂದಾದಾಗಿ ಹುಡುಕುತ್ತಾ ಸಾಗೋಣ.. ಅದರಲ್ಲೂ ಮುಖ್ಯವಾಗಿ, ನವರಾತ್ರಿಯ ಹೊತ್ತಲ್ಲಿ ಭವ್ಯವಾಗಿ ನಡೆಯೋ ಆಯುಧ ಪೂಜೆ ಹಿಂದಿರೋ ಮಹತ್ವ ಎಂಥದ್ದು? ಅದನ್ನೂ ನೋಡೋಣ.. ಆ ದೈವಾಯುಧ ರಹಸ್ಯ ಏನು ಅಂತ ತಿಳಿಯೋಣ..
ಆಶ್ವಿಜ ಶುದ್ಧ ಪಾಡ್ಯದಿಂದ ಆರಂಭವಾಗೋ ಈ ನಾಡ ಹಬ್ಬ ದಸರಾ, ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತೆ. ಈ ಉತ್ಸವವನ್ನು ಕಣ್ತುಂಬಿಕೊಳ್ಳೋಕೆ ದೇಶ ವಿದೇಶಗಳಿಂದಲೂ ಜನ ಆಗಮಿಸ್ತಾರೆ. ಈ ಹಬ್ಬ ತನ್ನ ಆಚರಣಾ ವಿಧಾನದಿಂದಲೇ ಬೇರೆ ಉತ್ಸವಗಳಿಗಿಂತ ವಿಭಿನ್ನವಾಗಿ ಕಾಣುತ್ತೆ. ಅದರಲ್ಲೂ ವಿಶಿಷ್ಟ ಅನ್ನಿಸಿಕೊಳ್ಳೋ ಆಚರಣೆ ಅಂದ್ರೆ, ಆಯುಧಗಳಿಗಂತಲೇ ನಡೆಯೋ, ವಿಶೇಷ ಪೂಜೆ.. ಅಷ್ಟಕ್ಕೂ ನಾಡದೇವಿಯ ಆರಾಧನೆ ಹೊತ್ತಲ್ಲಿ, ಆಯುಧಗಳ ಆರಾಧನೆ ಯಾಕೆ ನಡೆಯುತ್ತೆ? ಏನಿದರ ಸ್ಪೆಷಾಲಿಟಿ?.
ಆ ರೋಚಕ ಕತೆ ಏನು ಅಂತ ಅರ್ಥ ಆಗ್ಬೇಕು ಅಂದ್ರೆ, ನಾವು ಕನಿಷ್ಟ 5 ಶತಮಾನಗಳ ಹಿಂದೆ ಏನಾಗಿತ್ತು ಅಂತ ತಿಳ್ಕೋಬೇಕು. ಆಯುಧ ಪೂಜೆ ಅಂದ್ರೆ, ಅದು ನಮ್ಮ ಹತ್ರ ಇರೋ ಶಸ್ತ್ರಾಸ್ತ್ರಗಳ ಪ್ರದರ್ಶನ ಅಲ್ಲ.. ಆ ಪ್ರದರ್ಶನ ಹಿಂದೆ ಒಂದು ಅದ್ಭುತ ರಹಸ್ಯವೇ ಅಡಗಿದೆ..
ನಾವೇ ಬೇರೆ ನಮ್ಮ ಆಯುಧಗಳೇ ಬೇರೆ ಅನ್ನೋ ಕಲ್ಪನೆಯೇ ಇರ್ಲಿಲ್ಲ.. ಚಕ್ರ ಅಂದ್ರೆ ವಿಷ್ಣು, ತ್ರಿಶೂಲ ಅಂದ್ರೆ ಶಿವ ಅನ್ನೋ ಹಾಗೇ, ಆ ಆಯುಧಗಳೇ ದೈವಗಳ ನಿಜ ಸ್ವರೂಪವಾಗಿದಾವೆ.. ಅಷ್ಟಕ್ಕೂ ದೇವತೆಗಳಿಗೂ ಆಯುಧ ಯಾಕೆ ಬೇಕು? ಇದೆಲ್ಲದರ ಡಿಟೇಲ್ ಈ ವೀಡಿಯೋದಲ್ಲಿದೆ ವೀಕ್ಷಿಸಿ..