Muda Scam: ಒಂದಲ್ಲ 3 ದೂರು.. ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಮೂವರು ದೂರುದಾರರ ಹಿಸ್ಟರಿ ಏನು?
ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ.. ಸಿಎಂ ವಿರುದ್ಧ ತನಿಖೆಗೆ ಅನುಮತಿ ನೀಡಿ ಎಂದು ಮೂವರು ಸಾಮಾಜಿಕ ಕಾರ್ಯಕರ್ತರು ರಾಜಭವನದ ಕದ ತಟ್ಟಿದ್ದರು.. ಅದ್ರಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಗವರ್ನರ್ ಥಾವರ್ ಚಂದ್ ಗೆಹಲೋತ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ.
ಬೆಂಗಳೂರು (ಆ.19): ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ.. ಸಿಎಂ ವಿರುದ್ಧ ತನಿಖೆಗೆ ಅನುಮತಿ ನೀಡಿ ಎಂದು ಮೂವರು ಸಾಮಾಜಿಕ ಕಾರ್ಯಕರ್ತರು ರಾಜಭವನದ ಕದ ತಟ್ಟಿದ್ದರು.. ಅದ್ರಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಗವರ್ನರ್ ಥಾವರ್ ಚಂದ್ ಗೆಹಲೋತ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ..ಹಾಗಾದ್ರೆ ಈ ಮೂವರು ದೂರುದಾರರ ಹಿಸ್ಟರಿ ಏನು..? ಘಟಾನುಘಟಿ ನಾಯಕರು, ಐವರು ಸಿಎಂಗಳ ಮೇಲೆ ಗಂಭೀರ ಆರೋಪ ಮಾಡಿ ಹೋರಾಟ ನಡೆಸಿದ ಟಿ.ಜೆ ಅಬ್ರಹಾಂ ಯಾರೂ..? ಸ್ನೇಹಮಯಿ ಕೃಷ್ಣ.. ಪ್ರದೀಪ್ ಕುಮಾರ್ ಹೋರಾಟದ ಹಿನ್ನೆಲೆ ಏನು ಅನ್ನೋದರ ಮಾಹಿತಿ ಇಲ್ಲಿದೆ.
ಮೊದಲನೇ ದೂರುದಾರ ಆಗಿರುವ ಟಿ.ಜೆ ಅಬ್ರಹಾಂ ಸಾಮಾಜಿಕ ಕಾರ್ಯಕರ್ತ ಮಾತ್ರವಲ್ಲದೆ, ಐವರು ಮುಖ್ಯಮಂತ್ರಿಗಳ ವಿರುದ್ಧ ಹೋರಾಟ ಮಾಡಿದವರು. ಅಕ್ರಮ ಗಣಿಗಾರಿಕೆ, ರೈತರಿಗೆ ಆಗ್ತಿದ್ದ ಅನ್ಯಾಯದ ವಿರುದ್ಧ ಹೋರಾಟ ಮಾಡಿದ್ದರು.
ಏನಿದು ಮುಡಾ ಹಗರಣ? ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ಗಾಳಕ್ಕೆ ಸಿಕ್ಕಿಬಿದ್ದಿದ್ದು ಹೇಗೆ?
2ನೇ ದೂರುದಾರ ಆಗಿರುವ ಸ್ನೇಹಮಯಿ ಕೃಷ್ಣ ಆರ್‌ಟಿಐ ಕಾರ್ಯಕರ್ತ, ಅನ್ಯಾಯಕ್ಕೆ ಒಳಗಾದ ಪೊಲೀಸರ ಪರವೂ ಹೋರಾಟ ಮಾಡಿದ್ದಾರೆ. ಇನ್ನು ಮೂರನೇ ದೂರುದಾರ ಪ್ರದೀಪ್ ಕುಮಾರ್, ಹೋರಾಟದ ಕಾರಣಕ್ಕಾಗಿಯೇ ಎರಡು ಬಾರಿ ಜೈಲು ಸೇರಿದ್ದರು.