MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಏನಿದು ಮುಡಾ ಹಗರಣ? ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್‌ ಗಾಳಕ್ಕೆ ಸಿಕ್ಕಿಬಿದ್ದಿದ್ದು ಹೇಗೆ?

ಏನಿದು ಮುಡಾ ಹಗರಣ? ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್‌ ಗಾಳಕ್ಕೆ ಸಿಕ್ಕಿಬಿದ್ದಿದ್ದು ಹೇಗೆ?

ವಾಲ್ಮೀಕಿ ಹಗರಣದಲ್ಲಿ ಅವ್ಯವಹಾರ ಆಗಿದೆ ಅನ್ನೋದನ್ನ ಒಪ್ಪಿಕೊಂಡಿದ್ದ ಸಿದ್ಧರಾಮಯ್ಯ ಅವರಿಗೆ ಈಗ ಮುಡಾ ಸ್ಕ್ಯಾಮ್‌ ತಬ್ಬಿಕೊಂಡಿದೆ. ರಾಜ್ಯಪಾಲ ಥಾವರ್‌ಚಂದ್‌ ಗೆಹಲೊತ್‌ ಶನಿವಾರ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಹಾಗಿದ್ದರೆ, ಮುಡಾ ಸ್ಕ್ಯಾಮ್‌ ಏನು ಅನ್ನೋದನ್ನ ಇಲ್ಲಿ ನೋಡೋಣ.

2 Min read
Santosh Naik
Published : Aug 17 2024, 12:50 PM IST
Share this Photo Gallery
  • FB
  • TW
  • Linkdin
  • Whatsapp
114

ಸಿಟಿ ಇಂಪ್ರೂವ್‌ಮೆಂಟ್‌ ಟ್ರಸ್ಟ್‌ ಬೋರ್ಡ್‌ (ಸಿಐಟಿಬಿ) ಎನ್ನುವ ಹೆಸರಿನಲ್ಲಿ 1904ರಲ್ಲಿ ಆರಂಭವಾಗಿದ್ದ ಮುಡಾ ಅಥವಾ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕದ ಮೊಟ್ಟಮೊದಲ ನಗರ ಪ್ಲ್ಯಾನಿಂಗ್‌ ಹಾಗೂ ಅಭಿವೃದ್ದಿ ಸಂಸ್ಥೆ.

ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ

214

ಮೈಸೂರಿನ ಕೆಸರೆ ಗ್ರಾಮದಲ್ಲಿ 3.16 ಎಕರೆ ಸೈಟ್‌ಗೆ ಪ್ರತಿಯಾಗಿ 50:50 ಅನುಪಾತದಲ್ಲಿ ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮೈಸೂರಿನ ಪ್ರಖ್ಯಾತ ವಿಜಯನಗರದಲ್ಲಿ 14 ಸೈಟ್‌ ನೀಡಿರುವುದು ಇದು ಸ್ಕ್ಯಾಮ್‌ ಎನ್ನಲು ಕಾರಣವಾಗಿದೆ.

314

ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್‌ನ ನಾಯಕರು ಪಾರ್ವತಿ ಅವರಿಗೆ ನೀಡಿರುವ ಸೈಟ್‌ ನ್ಯಾಯಸಮ್ಮತವಾಗಿದೆ ಎಂದು ಹೇಳಿರುವುದಲ್ಲದೆ, ಬಿಜೆಪಿ ಅಧಿಕಾರದಲ್ಲಿದ್ದ ಸಮಯದಲ್ಲಿಯೇ 50:50 ಅನುಪಾತದಲ್ಲಿ ಸೈಟ್‌ ನೀಡಲಾಗಿದೆ ಎಂದು ಹೇಳಿವೆ.

414

50:50 ಅನುಪಾತದ ಸೈಟ್‌ ಹಂಚಿಕೆ ಅನ್ವಯ, ಭೂಮಿಯ ಮಾಲೀಕರು ಸೈಟ್‌ಗಾಗಿ ಒಂದು ಎಕರೆ ಭೂಮಿ ನೀಡಿದ್ದರೆ, ಅಭಿವೃದ್ಧಿ ಅದೇ ಭೂಮಿಯಲ್ಲಿ ನಿರ್ಮಿಸಲಾದ ಸೈಟ್‌ಗಳಲ್ಲಿ ಅರ್ಧದಷ್ಟು ಸೈಟ್‌ ಪಡಡೆದುಕೊಳ್ಳುತ್ತಾರೆ. ಅದರರ್ಥ ಒಂದು ಎಕರೆಯಲ್ಲಿ 30/40ಯ 9 ಸೈಟ್‌ಗಳು ಸಿಗುತ್ತವೆ. ಇದನ್ನು ಭೂಮಿಯ ಮಾಲೀಕರು ಮಾರುಕಟ್ಟೆ ಬೆಲೆಯಲ್ಲಿ ಯಾರಿಗೆ ಬೇಕಾದರೂ ಮಾರಾಟ ಮಾಡಬಹುದಾಗಿರುತ್ತದೆ.

514

ಈ ಯೋಜನೆಯನ್ನು ಮೊದಲು 2009 ರಲ್ಲಿ ಪರಿಚಯಿಸಲಾಗಿತ್ತು. ಆದರೆ 2020 ರಲ್ಲಿ ಬಿಜೆಪಿ ಸರ್ಕಾರ ಇದನ್ನು ರದ್ದು ಮಾಡಿತ್ತು. ಆದರೆ ಆಗಿನ ಬಿಜೆಪಿ ಸರ್ಕಾರದಿಂದ ಅನುಮತಿ ಪಡೆಯದೆ ಮುಡಾ ಈ ಯೋಜನೆಯನ್ನ ಮುಂದುವರಿಸಿತ್ತು.

614

ಜಮೀನು ಕಳೆದುಕೊಂಡವರಿಗೆ ಅಕ್ರಮವಾಗಿ ನಿವೇಶನ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಗರಣದಲ್ಲಿ ಮಧ್ಯವರ್ತಿಗಳ ಪಾತ್ರವಲ್ಲದೆ, ಮುಡಾ ಅಧಿಕಾರಿಗಳ ಸಕ್ರಿಯ ಸಹಕಾರದ ಶಂಕೆ ವ್ಯಕ್ತವಾಗಿದೆ.

714

ಜೂನ್ 15ರ ಆದೇಶದ ಪ್ರಕಾರ, ಇಬ್ಬರು ಭೂಮಿ ಕಳೆದುಕೊಂಡವರಿಗೆ ನಿವೇಶನಗಳನ್ನು ಮಂಜೂರು ಮಾಡಿ, ಆಗಿನ ಮುಡಾ ಆಯುಕ್ತ ದಿನೇಶ್ ಕುಮಾರ್ ಅವರು ಮುಡಾ ಸ್ವಾಧೀನಪಡಿಸಿಕೊಂಡ 8.14 ಎಕರೆ ಜಮೀನಿನ ಮೂಲ ಮಾಲೀಕರಿಗೆ 98,206 ಚದರ ಅಡಿ ಅಭಿವೃದ್ಧಿಪಡಿಸಿದ ಭೂಮಿಯನ್ನು ನೀಡಿದರು. 
 

814

ವರದಿ ಪ್ರಕಾರ ಗೋಕುಲಂ ಲೇಔಟ್‌ನ ಅಭಿವೃದ್ಧಿ. ಮೈಸೂರಿನ ಗೋಕುಲಂ ಲೇಔಟ್‌ಗಾಗಿ ಸ್ವಾಧೀನ ಪ್ರಕ್ರಿಯೆ 1968 ರಲ್ಲಿ ಪ್ರಾರಂಭವಾಯಿತು. ಕೆಲವು ನಿದರ್ಶನಗಳಲ್ಲಿ, ಭೂಮಿ ಕಳೆದುಕೊಳ್ಳುವವರಿಗೆ ಅವರ ಅರ್ಹತೆಗಿಂತ ಹೆಚ್ಚಿನ ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.
 

914

ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರ ಪ್ರಕಾರ, ಸಿದ್ದರಾಮಯ್ಯ ಅವರ ಪತ್ನಿಗೆ ಸೇರಿದ ಭೂಮಿಯಲ್ಲಿ ಮುಡಾ ದೇವನೂರು ಬಡಾವಣೆಯನ್ನು ಅಭಿವೃದ್ಧಿಪಡಿಸಿದ ನಂತರ, ಅವರು ಭೂಮಿಯ ಬೆಲೆ ಹೆಚ್ಚಿರುವ ನೆರೆಹೊರೆಗಳಲ್ಲಿ ಒಂದಾದ ವಿಜಯನಗರದಲ್ಲಿ ಪರ್ಯಾಯ ಸೈಟ್ ಪಡೆದಿದ್ದಾರೆ.  ಮುಡಾ ಅಭಿವೃದ್ಧಿ ಪಡಿಸಿದ ಬಡಾವಣೆಯಲ್ಲಿ ಪಾರ್ವತಿಗೆ ಮಂಜೂರು ಮಾಡಬಹುದಾದ ನಿವೇಶನಗಳನ್ನು ಹೊಂದಿದ್ದರೂ ಅಕ್ರಮವಾಗಿ ವಿಜಯನಗರದಲ್ಲಿ ಸೈಟ್‌ ಹಂಚಿಕೆ ಮಾಡಲಾಗಿದೆ ಎಂದಿದ್ದರು.
 

1014

ದೇವನೂರು 3ನೇ ಹಂತದ ಬಡಾವಣೆಯಲ್ಲಿ ನಿವೇಶನ ಸಿಗದ ಕಾರಣ ಮುಡಾ ವಿಜಯನಗರದಲ್ಲಿ ನಿವೇಶನ ಮಂಜೂರು ಮಾಡಿದೆ ಎಂದು ಸಿದ್ಧರಾಮಯ್ಯ ಸೈಟ್‌ ಪಡೆದುಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದರು.
 

1114

ಭಾಮೈದ ಮಲ್ಲಿಕಾರ್ಜುನ ಅವರು 1996ರಲ್ಲಿ ಮೂರು ಎಕರೆ 36 ಗುಂಟೆ ಜಮೀನು ಖರೀದಿಸಿ ತಮ್ಮ ಸಹೋದರಿ ಪಾರ್ವತಿಗೆ ಉಡುಗೊರೆ ನೀಡಿದ್ದಾರೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. 

1214

ಮುಡಾ ಮೂರು ಎಕರೆ 36 ಗುಂಟಾ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೆ ನಿವೇಶನಗಳನ್ನು ಸೃಷ್ಟಿಸಿ ಮಾರಾಟ ಮಾಡಿದೆ ಎಂದಿದ್ದರು. ಮುಡಾದಿಂದ ಪ್ಲಾಟ್‌ಗಳನ್ನು ಮಾರಾಟ ಮಾಡಿದ ನಂತರ, ಆಕೆ ತನ್ನ ಆಸ್ತಿಯಿಂದ ವಂಚಿತಳಾಗಿದ್ದಾಳೆ ಎಂದು ತಿಳಿಸಿದ್ದರು.
 

1314

ಇದರಲ್ಲಿ ಬಿಜೆಪಿಯ ಆರೋಪ ಏನೆಂದರೆ, ಕೆಸರೆ ಗ್ರಾಮದಲ್ಲಿ ಚದರ ಅಡಿಗೆ 2 ರಿಂದ 3 ಸಾವಿರ ಬೆಲೆ ಇದೆ. ಅದೇ ವಿಜಯನಗರದಲ್ಲಿ ಪ್ರತಿ ಚದರ ಅಡಿಗೆ 10-12 ಸಾವಿರ ರೂಪಾಯಿ ಬೆಲೆ ಇದೆ. ಯಾವ ಲೆಕ್ಕಾಚಾರದಲ್ಲಿ ಸಿದ್ಧರಾಮಯ್ಯ ಅವರಿಗೆ ವಿಜನಯಗರಲ್ಲಿ ಸೈಟ್‌ ನೀಡಲಾಗಿದೆ ಎಂದು ಪ್ರಶ್ನೆ ಮಾಡಿದ್ದರು. ಅದಲ್ಲದೆ, ಭೂಮಿ ಕಳೆದುಕೊಂಡ ಎಲ್ಲಾ ರೈತರಿಗೂ ಪರಿಹಾರವಾಗಿ ಪ್ರೈಮ್‌ ಲೇಔಟ್‌ಗಳಲ್ಲಿ ಇಷ್ಟು ಸೈಟ್‌ಗಳನ್ನು ನೀಡಲಾಗುತ್ತದೆಯೇ ಎಂದು ಕೇಳಿತ್ತು.

1414

ಸೈಟ್‌ ಹಂಚಿಕೆ ಮಾಡಿದ್ದು ಒಂದು ಆರೋಪವಾದರೆ, ಸಿದ್ಧರಾಮಯ್ಯ ಅವರ ಭಾಮೈದ ಮಲ್ಲಿಕಾರ್ಜುನ್‌ ಈ ಸೈಟ್‌ ಖರೀದಿ ಮಾಡಿದ್ದೇ ಅಕ್ರಮ ಎಂದೂ ಆರೋಪ ಮಾಡಲಾಗುತ್ತದೆ. ಇದನ್ನು ಡಿನೋಟಿಫಿಕೇಶನ್‌ ಮಾಡಿದ ರೀತಿಯೇ ಅಕ್ರಮ. ಇದು ದಲಿತನೊಬ್ಬನ ಜಮೀನು ಎನ್ನುವ ಆರೋಪಗಳೂ ಇದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಸಿದ್ದರಾಮಯ್ಯ
ಕಾಂಗ್ರೆಸ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved