Karnataka Politics: ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ: ವಿಶ್ವನಾಥ್

ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಆಹ್ವಾನ ನೀಡಿದ್ದಾರೆಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಎಂಎಲ್‌ಸಿ ಎಚ್‌ ವಿಶ್ವನಾಥ್ (Vishwanath) ವಾಗ್ದಾಳಿ ನಡೆಸಿದರು. 

First Published Jan 31, 2022, 3:33 PM IST | Last Updated Jan 31, 2022, 4:26 PM IST

ಬೆಂಗಳೂರು (ಜ. 31): ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಆಹ್ವಾನ ನೀಡಿದ್ದಾರೆಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಎಂಎಲ್‌ಸಿ ಎಚ್‌ ವಿಶ್ವನಾಥ್ (Vishwanath) ವಾಗ್ದಾಳಿ ನಡೆಸಿದರು. 

'ಸಿಎಂ ಇಬ್ರಾಹಿಂನನ್ನು ಸಿದ್ದರಾಮಯ್ಯ ಸಾಯೋವರ್ಗೂ ನೆನೆಸಿಕೊಳ್ಳಬೇಕು. ಕಾಂಗ್ರೆಸ್‌ಗೆ ಯಾರಾದ್ರೂ ಭಸ್ಮಾಸುರ ಅಂದ್ರೆ ಅದು ಸಿದ್ದರಾಮಯ್ಯ. ನಿಮ್ಮನ್ಯಾರ್ರೀ ಕರಿತಾರೆ..? ನಿಮ್ಮ ಶಿಷ್ಯರು ಯಾರೋ ಕರಿತಾರೆ, ಚಮಚಾಗಿರಿ ಮಾಡೋಕೆ ಅನುಕೂಲ ಆಗಲಿ ಅಂತ, ಅವರು ನಿಮ್ಮನ್ನು ಗೆಲ್ಲಿಸ್ತಾರೇನ್ರಿ..? ಎಂದು ವಾಗ್ದಾಳಿ ನಡೆಸಿದರು. 

Belagavi Politics: ಸಿಎಂ ನಿವಾಸಕ್ಕೆ ರಮೇಶ್ ಜಾರಕಿಹೊಳಿ ಭೇಟಿ, ಕತ್ತಿಗೆ ಟಕ್ಕರ್.?

8-10 ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ನನ್ನ ಮೇಲೆ ಒತ್ತಡ ಬರುತ್ತಿದೆ. ಆದರೆ ಯಾವುದು ಎಂದು ಇನ್ನೂ ನಿರ್ಧರಿಸಿಲ್ಲ. ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಕೊಪ್ಪಳ, ಬದಾಮಿ, ಚಾಮರಾಜಪೇಟೆ, ಚಾಮುಂಡೇಶ್ವರಿ ಕ್ಷೇತ್ರದಿಂದ ನಿಲ್ಲುವಂತೆ ಒತ್ತಡ ಬರುತ್ತಿದೆ. ಚಾಮುಂಡೇಶ್ವರಿಯಿಂದ ನಿಲ್ಲಬಾರದು ಅಂದುಕೊಂಡಿದ್ದೇನೆ' ' ಎಂದು ಸಿದ್ದರಾಮಯ್ಯ (Siddaramaiah) ಹೇಳಿದ್ಧರು.