Belagavi Politics: ಸಿಎಂ ನಿವಾಸಕ್ಕೆ ರಮೇಶ್ ಜಾರಕಿಹೊಳಿ ಭೇಟಿ, ಕತ್ತಿಗೆ ಟಕ್ಕರ್.?

ಬಿಜೆಪಿಯಲ್ಲಿ ಭಿನ್ನಮತ ಹೆಚ್ಚಾಗುತ್ತಲೇ ಇದೆ. ಇಂದು ಸಿಎಂ ನಿವಾಸಕ್ಕೆ ರಮೇಶ್ ಜಾರಕಿಹೊಳಿ (Ramesh Jarkiholi) ಭೇಟಿ ಕೊಟ್ಟಿದ್ದಾರೆ. ಭೇಟಿಯ ಬಗ್ಗೆ ಮಾಧ್ಯಮಗಳ ಜೊತೆ ಜಾರಕಿಹೊಳಿ ಯಾವುದೇ ವಿಚಾರವನ್ನೂ ಹಂಚಿಕೊಂಡಿಲ್ಲ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 31): ಬಿಜೆಪಿಯಲ್ಲಿ ಭಿನ್ನಮತ ಹೆಚ್ಚಾಗುತ್ತಲೇ ಇದೆ. ಇಂದು ಸಿಎಂ ನಿವಾಸಕ್ಕೆ ರಮೇಶ್ ಜಾರಕಿಹೊಳಿ (Ramesh Jarkiholi) ಭೇಟಿ ಕೊಟ್ಟಿದ್ದಾರೆ. ಭೇಟಿಯ ಬಗ್ಗೆ ಮಾಧ್ಯಮಗಳ ಜೊತೆ ಜಾರಕಿಹೊಳಿ ಯಾವುದೇ ವಿಚಾರವನ್ನೂ ಹಂಚಿಕೊಂಡಿಲ್ಲ. 

Karnataka Politics: ಡಿಕೆಶಿ-ಆನಂದ್ ಸಿಂಗ್ ದಿಢೀರ್ ಭೇಟಿ, ರಾಜಕೀಯ ಸಂಚಲನ

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್‌ ಕತ್ತಿ ನೇತೃತ್ವದಲ್ಲಿ ಸಂಸದರಾದ ಸದಸ್ಯ ಈರಣ್ಣ, ಅಣ್ಣಾ ಸಾಹೇಬ್‌ ಜೊಲ್ಲೆ, ಶಾಸಕರಾದ ಲಕ್ಷ್ಮಣ ಸವದಿ, ಅಭಯ್‌ ಪಾಟೀಲ್‌, ಮಹಂತೇಶ್‌ ಕವಟಗಿಮಠ, ಮಹಾದೇವಪ್ಪ ಯಾದವಾಡ, ಅನಿಲ್‌ ಬೆನಕೆ ಮತ್ತಿತರರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಾರಕಿಹೊಳಿ ಸಹೋದರರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ. ಕಳೆದ ವಾರ ಬೆಳಗಾವಿಯಲ್ಲಿ ಇದೇ ಮುಖಂಡರು ಜಾರಕಿಹೊಳಿ ಸಹೋದರರನ್ನು ದೂರವಿಟ್ಟು ಸಭೆ ನಡೆಸಿದ್ದರು. ಆ ಸಭೆಯ ಮಾಹಿತಿಯನ್ನೂ ಹಂಚಿಕೊಂಡಿದ್ದರು. 

Related Video