ಗಾಂಧೀಜಿಯನ್ನು ಉಲ್ಲೇಖಿಸಿ, ಎಚ್‌ಡಿಕೆಗೆ ಸಿದ್ದರಾಮಯ್ಯ ಟಾಂಗ್

ಸಿದ್ದರಾಮಯ್ಯ ಯಾವಾಗಲೂ ದಲಿತರ ಪರ ಎಂದು ಹೇಳುತ್ತಾರೆ. ಆದರೆ ದಲಿತರನ್ನು ಸಿಎಂ ಆಗಿ ಮಾಡಿದ್ರಾ.? ಎಂದು ಎಚ್‌ಡಿಕೆ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಟ್ವೀಟ್ ನಲ್ಲಿ ಉತ್ತರಿಸಿದ್ದಾರೆ. 

First Published Oct 17, 2021, 2:52 PM IST | Last Updated Oct 17, 2021, 2:52 PM IST

ಬೆಂಗಳೂರು (ಅ. 17): ಸಿದ್ದರಾಮಯ್ಯ (Siddaramaiah) ಯಾವಾಗಲೂ ದಲಿತರ ಪರ ಎಂದು ಹೇಳುತ್ತಾರೆ. ಆದರೆ ದಲಿತರನ್ನು ಸಿಎಂ ಆಗಿ ಮಾಡಿದ್ರಾ.? ಎಂದು ಎಚ್‌ಡಿಕೆ (HD Kumaraswamy) ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ  ಟ್ವೀಟ್ ನಲ್ಲಿ ಉತ್ತರಿಸಿದ್ದಾರೆ. 

ಬೆಂಗಳೂರು ಉಸ್ತುವಾರಿ ಗಲಾಟೆ ಹೈ ಕಮಾಂಡ್ ಅಂಗಳಕ್ಕೆ, ಅಶೋಕ್‌ಗೆ ಕೈ ತಪ್ಪುವ ಸಾಧ್ಯತೆ.?

' ಮಹಾತ್ಮ ಗಾಂಧೀಜಿ ಅವರನ್ನು ಹಿಂದೂ ವಿರೋಧಿ ಎನ್ನುತ್ತಿದ್ದ ಹಿಂದೂಗಳು, ದಲಿತ ವಿರೋಧಿ ಎನ್ನುತ್ತಿದ್ದ ದಲಿತರು, ಮುಸ್ಲಿಮ್ ವಿರೋಧಿ ಎನ್ನುತ್ತಿದ್ದ ಮುಸ್ಲಿಮರು ಇದ್ದರು. ಮಹಾತ್ಮರ ಬೆನ್ನು ಬಿಡದ ಟೀಕಾಕಾರರು
ನನ್ನಂತಹ ಹುಲುಮಾನವರನ್ನು ಬಿಡುತ್ತಾರೆಯೇ?  ಸಬ್ ಕೋ ಸನ್ಮತಿ ದೇ ಭಗವಾನ್' ಎಂದಿದ್ದಾರೆ.